ಅಪೊಸ್ತಲರ ಕೃತ್ಯಗಳು 2:29 - ಪರಿಶುದ್ದ ಬೈಬಲ್29 “ನನ್ನ ಸಹೋದರರೇ, ನಮ್ಮ ಪಿತೃವಾದ ದಾವೀದನ ಬಗ್ಗೆ ನಾನು ನಿಮಗೆ ನಿಜವಾಗಿಯೂ ಹೇಳಬಲ್ಲೆನು. ಅವನು ಸತ್ತುಹೋದನು ಮತ್ತು ಅವನಿಗೆ ಸಮಾಧಿಯಾಯಿತು. ಅವನ ಸಮಾಧಿಯು ನಮ್ಮ ಮಧ್ಯದಲ್ಲಿ ಇಂದಿನವರೆಗೂ ಇದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 “ಸಹೋದರರೇ, ಮೂಲಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತನಾಡಬಹುದು ಏನೆಂದರೆ,, ಅವನು ಮರಣಹೊಂದಿ ಹೂಣಲ್ಪಟ್ಟನು, ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಇದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 “ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವಂತೆ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಸಹೋದರರೇ, ಮೂಲ ಪಿತೃವಾದ ದಾವೀದನ ವಿಷಯದಲ್ಲಿ ನಾನು ಧೈರ್ಯದಿಂದ ನಿಮ್ಮ ಸಂಗಡ ಮಾತಾಡಬಹುದು ಏನಂದರೆ - ಅವನು ತೀರಿಹೋಗಿ ಹೂಣಲ್ಪಟ್ಟನು; ಅವನ ಸಮಾಧಿ ಈ ದಿನದವರೆಗೂ ನಮ್ಮಲ್ಲಿ ಅದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 “ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್29 ಮಾಜ್ಯಾ ಭಾವಾನು ಅನಿ ಭೆನಿಯಾನು, ಅಮ್ಚ್ಯಾ ವಾಡ್ವಡ್ಲಾ ದಾವಿದ್ ರಾಜಾಚ್ಯಾ ವಿಶಯಾತ್ ಮಿಯಾ ತುಮ್ಕಾ ಖರೆ ಸಾಂಗ್ತಾ, ತೊ ಮರುನ್ ಗೆಲೊ ತೆಕಾ ಮಾಟಿ ದಿವ್ನ್ ಹೊಲಿ, ತೆಚಿ ಸಮಾದಿ ಅಜುನ್ಬಿ ಆಮ್ಚ್ಯಾ ಮದ್ದಿ ಹಾಯ್. ಅಧ್ಯಾಯವನ್ನು ನೋಡಿ |
“ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ಈ ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ.