ಅಪೊಸ್ತಲರ ಕೃತ್ಯಗಳು 17:10 - ಪರಿಶುದ್ದ ಬೈಬಲ್10 ಅದೇ ರಾತ್ರಿಯಲ್ಲಿ ವಿಶ್ವಾಸಿಗಳು ಪೌಲ ಸೀಲರನ್ನು ಬೆರೋಯ ಎಂಬ ಮತ್ತೊಂದು ಪಟ್ಟಣಕ್ಕೆ ಕಳುಹಿಸಿದರು. ಬೆರೋಯದಲ್ಲಿ ಪೌಲ ಸೀಲರು ಯೆಹೂದ್ಯರ ಸಭಾಮಂದಿರಕ್ಕೆ ಹೋದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಆ ಸಹೋದರರು ರಾತ್ರಿಯಲ್ಲಿ ಪೌಲ ಮತ್ತು ಸೀಲರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು. ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಭಕ್ತವಿಶ್ವಾಸಿಗಳು ಪೌಲ ಮತ್ತು ಸೀಲರನ್ನು ರಾತ್ರೋರಾತ್ರಿಯಲ್ಲೇ ಬೆರೋಯ ಎಂಬ ಊರಿಗೆ ಕಳುಹಿಸಿಬಿಟ್ಟರು. ಇವರು ಆ ಊರನ್ನು ತಲುಪಿದ್ದೇ, ಯೆಹೂದ್ಯರ ಪ್ರಾರ್ಥನಾಮಂದಿರಕ್ಕೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಕೂಡಲೇ ಸಹೋದರರು ರಾತ್ರಿಯಲ್ಲಿ ಪೌಲ ಸೀಲರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು. ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ರಾತ್ರಿಯಾದ ಕೂಡಲೇ, ಸಹೋದರರು ಪೌಲ, ಸೀಲರನ್ನು ಬೆರೋಯಕ್ಕೆ ಕಳುಹಿಸಿದರು. ಅಲ್ಲಿಗೆ ಅವರು ತಲುಪಿದಾಗ ಅಲ್ಲಿಯೂ ಯೆಹೂದ್ಯರ ಸಭಾಮಂದಿರಕ್ಕೆ ಹೋದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ತ್ಯಾ ದಿಸಾ ರಾತ್ತಿನಿ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾನಿ ಪಾವ್ಲುಕ್ ಅನಿ ಸಿಲಾಸಾಕ್ ಬೆರೊಯಾಕ್ ಧಾಡ್ಲ್ಯಾನಿ, ಥೈ ಹೆನಿ ದೊಗಾ ಜುದೆವಾಂಚ್ಯಾ ಲೊಕಾಂಚ್ಯಾ ಸಿನಾಗೊತ್ ಗೆಲೆ, ಅಧ್ಯಾಯವನ್ನು ನೋಡಿ |