ಅಪೊಸ್ತಲರ ಕೃತ್ಯಗಳು 14:11 - ಪರಿಶುದ್ದ ಬೈಬಲ್11 ಪೌಲನು ಮಾಡಿದ ಈ ಕಾರ್ಯವನ್ನು ಕಂಡ ಜನರು ತಮ್ಮ ಸ್ವಂತ ಲುಕವೋನಿಯ ಭಾಷೆಯಲ್ಲಿ “ದೇವರುಗಳು ಮನುಷ್ಯರೂಪ ಧರಿಸಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಎಂದು ಆರ್ಭಟಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಪೌಲನು ಮಾಡಿದ್ದನ್ನು ಗುಂಪು ಕೂಡಿದ್ದ ಜನರು ನೋಡಿ; “ದೇವರುಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದುಬಂದರು” ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಪೌಲನು ಮಾಡಿದ ಈ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. “ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ,” ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಪೌಲನು ಮಾಡಿದ್ದನ್ನು ಗುಂಪುಕೂಡಿದ್ದ ಜನರು ನೋಡಿ - ದೇವತೆಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದು ಬಂದರು ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಪೌಲನು ಮಾಡಿದ್ದನ್ನು ಜನರು ಕಂಡಾಗ, ಲುಕವೋನಿಯ ಭಾಷೆಯಲ್ಲಿ, “ಮಾನವ ರೂಪದಲ್ಲಿ ದೇವರುಗಳು ಬಂದಿದ್ದಾರೆ!” ಎಂದು ಘೋಷಿಸಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್11 ಪಾವ್ಲುನ್ ಕರಲ್ಲಿ ಹಿ ಕಾಮಾ ಬಗಲಿ ಲೊಕಾ ಅಪ್ಲ್ಯಾ ಲಿಕಾವುನಿ ಮನ್ತಲ್ಯಾ ಸ್ವತಾಚ್ಯಾ ಭಾಶೆನ್ “ದೆವಾ ಮಾನ್ಸಾಂಚೊ ರುಪ್ ಘಾಲುಘೆವ್ನ್ ಆಮ್ಚ್ಯಾ ಜಗ್ಗೊಳ್ ಉತ್ರುನ್ ಯೆಲಾತ್!” ಮನುನ್ ಬೊಬ್ ಮಾರ್‍ಲ್ಯಾನಿ. ಅಧ್ಯಾಯವನ್ನು ನೋಡಿ |