ಅಪೊಸ್ತಲರ ಕೃತ್ಯಗಳು 12:12 - ಪರಿಶುದ್ದ ಬೈಬಲ್12 ಬಳಿಕ ಪೇತ್ರನು ಮರಿಯಳ ಮನೆಗೆ ಹೋದನು. ಆಕೆಯು ಯೋಹಾನನ ತಾಯಿ. (ಯೋಹಾನನನ್ನು ಮಾರ್ಕನೆಂದು ಕರೆಯುತ್ತಿದ್ದರು.) ಅನೇಕ ಜನರು ಅಲ್ಲಿ ಸೇರಿದ್ದರು. ಅವರೆಲ್ಲರೂ ಪ್ರಾರ್ಥಿಸುತ್ತಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆತನು ಇದನ್ನು ತಿಳಿದುಕೊಂಡ ತರುವಾಯ, ಅವನು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಹೀಗೆ ತನ್ನ ಪರಿಸ್ಥಿತಿಯನ್ನು ಅರಿತ ಬಳಿಕ ಪೇತ್ರನು ಮರಿಯ ಎಂಬುವಳ ಮನೆಗೆ ಹೋದನು. ಈಕೆ ‘ಮಾರ್ಕ’ ಎಂದು ಹೆರಸರುಗೊಂಡಿದ್ದ ಯೊವಾನ್ನನ ತಾಯಿ. ಆ ಮನೆಯಲ್ಲಿ ಹಲವಾರು ಜನರು ಸೇರಿ ಪ್ರಾರ್ಥನೆ ಮಾಡುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ತರುವಾಯ ಅವನು ಯೋಚನೆಮಾಡಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್12 ಮಾನಾ ತೊ ಮರಿಯಾಂಚ್ಯಾ ಘರಾಕ್ ಗೆಲೊ ಮರಿಯಾ ಮನ್ತಲಿ ಜುವಾಂವಾಂಚಿ ಬಾಯ್ ಜುವಾಂವಾಕ್ ಮಾರ್ಕ್ ಮನುನ್‍ಬಿ ಬಲ್ವಿತ್, ಥೈ ಲೈ ಲೊಕಾ ಗೊಳಾ ಹೊವ್ನ್ ಮಾಗ್ನಿ ಕರಿತ್. ಅಧ್ಯಾಯವನ್ನು ನೋಡಿ |