3 ರಾಜನಾದ ದಾವೀದನು, “ಸೌಲನ ಕುಟುಂಬದಲ್ಲಿ ಯಾವ ವ್ಯಕ್ತಿಯಾದರೂ ಉಳಿದಿರುವನೇ? ನಾನು ಆ ವ್ಯಕ್ತಿಗೆ ದೇವರ ಕರುಣೆಯನ್ನು ತೋರಿಸಬೇಕಾಗಿದೆ” ಎಂದು ಹೇಳಿದನು. ಚೀಬನು ರಾಜನಾದ ದಾವೀದನಿಗೆ, “ಯೋನಾತಾನನ ಮಗನೊಬ್ಬನು ಇನ್ನೂ ಇದ್ದಾನೆ. ಅವನ ಎರಡೂ ಕಾಲುಗಳು ಕುಂಟಾಗಿವೆ” ಎಂದನು.
3 ಅರಸನು ಅವನಿಗೆ, “ಸೌಲನ ಕುಟುಂಬದಲ್ಲಿ ಯಾರಾದರೂ ಉಳಿದಿದ್ದರೆ ಹೇಳು, ನಾನು ದೇವರನ್ನು ನೆನಸಿ ಅವರಿಗೆ ದಯೆತೋರಿಸುತ್ತೇನೆ” ಎಂದನು. ಆಗ ಚೀಬನು ಅರಸನಿಗೆ “ಯೋನಾತಾನನಿಗೆ ಎರಡೂ ಕಾಲು ಕುಂಟಾದ ಒಬ್ಬ ಮಗನಿದ್ದಾನೆ” ಎಂದು ಹೇಳಿದನು.
3 ಆಗ ಅರಸನು, “ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆ ತೋರಿಸುತ್ತೇನೆ,” ಎಂದನು. ಆಗ ಚೀಬನು, “ಯೋನಾತಾನನಿಗೆ, ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ,” ಎಂದು ಹೇಳಿದನು.
3 ಅರಸನು ಅವನಿಗೆ - ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆತೋರಿಸುತ್ತೇನೆ ಅಂದನು. ಆಗ ಚೀಬನು ಅರಸನಿಗೆ - ಯೋನಾತಾನನಿಗೆ ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ ಎಂದು ಹೇಳಿದನು.
3 ಅರಸನು, “ನಾನು ದೇವರ ದಯೆ ತೋರಿಸುವ ಹಾಗೆ ಸೌಲನ ಕುಟುಂಬದಲ್ಲಿ ಇನ್ನೂ ಯಾವನಾದರೂ ಇದ್ದಾನೋ?” ಎಂದನು. ಆಗ ಚೀಬನು ಅರಸನಿಗೆ, “ಯೋನಾತಾನನಿಗೆ ಎರಡೂ ಕಾಲು ಕುಂಟಾದ ಮಗನಿದ್ದಾನೆ,” ಎಂದನು.
ಸೌಲನ ಮಗನಾದ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಮಗನಿದ್ದನು. ಸೌಲನು ಮತ್ತು ಯೋನಾತಾನನು ಇಜ್ರೇಲಿನಲ್ಲಿ ಸತ್ತರೆಂಬ ವರ್ತಮಾನವು ಬಂದಾಗ ಯೋನಾತಾನನ ಮಗನಿಗೆ ಐದು ವರ್ಷವಾಗಿತ್ತು. ಅವನನ್ನು ಸಾಕುತ್ತಿದ್ದ ದಾದಿಯು ಭಯಪಟ್ಟು ಅವನನ್ನು ಎತ್ತಿಕೊಂಡು ಓಡತೊಡಗಿದಳು. ಆ ದಾದಿಯು ಅವಸರದಿಂದ ಓಡಿಹೋಗುತ್ತಿದ್ದಾಗ, ಯೋನಾತಾನನ ಮಗನು ಅವಳ ತೋಳುಗಳಿಂದ ಕೆಳಕ್ಕೆ ಬಿದ್ದನು. ಹೀಗೆ ಕೆಳಗೆ ಬಿದ್ದ ಯೋನಾತಾನನ ಮಗನ ಎರಡು ಕಾಲುಗಳು ಕುಂಟಾದವು. ಈ ಮಗನ ಹೆಸರೇ ಮೆಫೀಬೋಶೆತ್.
ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.
ಮೆಫೀಬೋಶೆತನು, “ರಾಜನಾದ ನನ್ನ ಒಡೆಯನೇ, ನನ್ನ ಸೇವಕನಾದ ಚೀಬನು ನನಗೆ ಮೋಸಮಾಡಿದನು. ನಾನು ಚೀಬನಿಗೆ, ‘ನಾನು ಕುಂಟನಾಗಿರುವದರಿಂದ ತಡಿಯೊಂದನ್ನು ಹೇಸರಕತ್ತೆಯ ಮೇಲೆ ಹಾಕು. ನಾನು ಹೇಸರಕತ್ತೆಯ ಮೇಲೆ ಕುಳಿತು, ರಾಜನೊಂದಿಗೆ ಹೋಗುತ್ತೇನೆ’ ಎಂದೆನು.
ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.
ಆದರೆ ನನ್ನ ಸೇವಕನು ನನ್ನನ್ನು ಮೋಸಗೊಳಿಸಿದನು. ಅವನು ನನ್ನ ಬಗ್ಗೆ ನಿನಗೆ ಕೆಟ್ಟದ್ದನ್ನು ಹೇಳಿದನು. ಆದರೆ ರಾಜನಾದ ನನ್ನ ಒಡೆಯನು ದೇವದೂತನಂತಿದ್ದಾನೆ. ನಿನಗೆ ಒಳ್ಳೆಯದೆಂದು ತೋರಿದ್ದನ್ನು ಮಾಡು.