Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 3:6 - ಪರಿಶುದ್ದ ಬೈಬಲ್‌

6 ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧವು ನಡೆಯುತ್ತಿದ್ದಾಗ ಸೌಲನ ಸೈನ್ಯದಲ್ಲಿ ಅಬ್ನೇರನೇ ಬಲಶಾಲಿಯಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧ ನಡೆಯುತ್ತಿರುವಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಸೌಲನ ಸೇನೆಗೂ ದಾವೀದನ ಸೇನೆಗೂ ಯುದ್ಧ ನಡೆಯುತ್ತಿದ್ದಾಗ ಸೌಲನ ವಂಶದವರಲ್ಲಿ ಅಬ್ನೇರನೇ ಪ್ರಬಲನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧನಡಿಯುತ್ತಿದ್ದಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಸೌಲನ ಕುಟುಂಬಕ್ಕೂ ದಾವೀದನ ಕುಟುಂಬಕ್ಕೂ ಯುದ್ಧ ನಡೆಯುತ್ತಿರುವಾಗ, ಅಬ್ನೇರನು ಸೌಲನ ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಬಲಪಡಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 3:6
10 ತಿಳಿವುಗಳ ಹೋಲಿಕೆ  

ನನ್ನೊಂದಿಗೆ ಇಲ್ಲದವನು ನನಗೆ ವಿರೋಧಿಯಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.


ಯೆಹೋವನೇ ವಿರೋಧವಾಗಿದ್ದರೆ, ಜಯಪ್ರಧವಾಗಬಲ್ಲ ಯೋಜನೆಯನ್ನು ಮಾಡುವಂಥ ಜ್ಞಾನ ಯಾರಿಗೂ ಇಲ್ಲ.


ನೀನು ನಿನ್ನನ್ನು ಬಲಿಷ್ಠನನ್ನಾಗಿ ಮಾಡಿಕೊಂಡಿದ್ದರೂ ನಿನ್ನ ಸೋಲು ಮತ್ತು ನಿನ್ನ ಜಯ ದೇವರ ಕೈಯಲ್ಲಿವೆ” ಎಂದು ಹೇಳಿದನು.


ಆಗ ಯೇಹು ಮತ್ತು ರೇಕಾಬನ ಮಗನಾದ ಯೆಹೋನಾದಾಬನು ಬಾಳನ ಆಲಯದೊಳಕ್ಕೆ ಹೋದರು. ಯೇಹು ಬಾಳನ ಭಕ್ತರಿಗೆ, “ಯೆಹೋವನ ಸೇವಕರು ಯಾರೂ ನಿಮ್ಮೊಡನೆ ಇಲ್ಲವೆಂಬುದನ್ನು ಸುತ್ತಲೂ ನೋಡಿ ಖಚಿತಪಡಿಸಿಕೊಳ್ಳಿ. ಬಾಳನ ಭಕ್ತರಾದ ಜನರು ಮಾತ್ರ ಇಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ” ಎಂದು ಹೇಳಿದನು.


ಇತ್ರಾಮನು ಆರನೆಯ ಮಗ. ದಾವೀದನ ಹೆಂಡತಿಯಾದ ಎಗ್ಲಳು ಇತ್ರಾಮನ ತಾಯಿ. ದಾವೀದನಿಗೆ ಹೆಬ್ರೋನಿನಲ್ಲಿ ಆರುಮಂದಿ ಗಂಡುಮಕ್ಕಳಿದ್ದರು.


ಸೌಲನ ಹೆಂಡತಿಯ ಹೆಸರು ಅಹೀನೋವಮ್. ಅಹೀನೋವಮಳ ತಂದೆ ಅಹೀಮಾಚ. ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದ ಸೇನಾಪತಿ. ನೇರನು ಸೌಲನ ಚಿಕ್ಕಪ್ಪ.


ಸೌಲನ ವಂಶದವರ ಮತ್ತು ದಾವೀದನ ವಂಶದವರ ಮಧ್ಯೆ ಬಹಳ ಕಾಲದವರೆಗೆ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಲೇ ಇದ್ದನು. ಸೌಲನ ವಂಶವು ದುರ್ಬಲಗೊಳ್ಳುತ್ತಲೇ ಇದ್ದಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು