2 ಸಮುಯೇಲ 3:37 - ಪರಿಶುದ್ದ ಬೈಬಲ್37 ನೇರನ ಮಗನಾದ ಅಬ್ನೇರನನ್ನು ಕೊಲ್ಲಲು ರಾಜನಾದ ದಾವೀದನು ಆಜ್ಞಾಪಿಸಿರಲಿಲ್ಲವೆಂದು ಯೆಹೂದ್ಯರು ಮತ್ತು ಇಸ್ರೇಲಿನ ಜನರೆಲ್ಲರೂ ಅಂದು ಅರ್ಥಮಾಡಿಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ನೇರನ ಮಗನಾದ ಅಬ್ನೇರನ ಕೊಲೆಯಲ್ಲಿ ಅರಸನು ಕೈಹಾಕಲಿಲ್ಲವೆಂಬುದು ಅವನ ಎಲ್ಲಾ ಜನರಿಗೂ ಇಸ್ರಾಯೇಲರಿಗೂ ಅದೇ ದಿನ ಗೊತ್ತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)37 ನೇರನ ಮಗನಾದ ಅಬ್ನೇರನ ವಧೆಯಲ್ಲಿ ಅರಸನ ಕೈವಾಡವಿಲ್ಲ ಎಂಬುದು ಅವನ ಎಲ್ಲಾ ಜನರಿಗೂ ಇಸ್ರಯೇಲರಿಗೂ ಅದೇ ದಿವಸ ಗೊತ್ತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ನೇರನ ಮಗನಾದ ಅಬ್ನೇರನ ವಧೆಯಲ್ಲಿ ಅರಸನು ಕೈಹಾಕಲಿಲ್ಲವೆಂಬದು ಅವನ ಎಲ್ಲಾ ಜನರಿಗೂ ಇಸ್ರಾಯೇಲ್ಯರಿಗೂ ಅದೇ ದಿವಸ ಗೊತ್ತಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಏಕೆಂದರೆ ನೇರನ ಮಗ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದದ್ದಲ್ಲವೆಂದು ಸಮಸ್ತ ಜನರೂ, ಸಮಸ್ತ ಇಸ್ರಾಯೇಲರೂ ಆ ದಿವಸದಲ್ಲಿ ತಿಳಿದುಕೊಂಡರು. ಅಧ್ಯಾಯವನ್ನು ನೋಡಿ |
ಯೋವಾಬನು ತನಗಿಂತಲೂ ಬಹಳಷ್ಟು ಉತ್ತಮರಾದ ಇಬ್ಬರನ್ನು ಕೊಂದುಹಾಕಿದನು. ಅವರು ಯಾರೆಂದರೆ, ನೇರನ ಮಗನಾದ ಅಬ್ನೇರ ಮತ್ತು ಯೆತೆರನ ಮಗನಾದ ಅಮಾಸ. ಅಬ್ನೇರನು ಇಸ್ರೇಲಿನ ಸೇನಾಧಿಪತಿಯಾಗಿದ್ದನು; ಅಮಾಸನು ಯೆಹೂದದ ಸೇನಾಧಿಪತಿಯಾಗಿದ್ದನು. ಯೋವಾಬನು ಅವರನ್ನು ಕೊಂದನೆಂಬುದು ಆ ಸಮಯದಲ್ಲಿ ನನ್ನ ತಂದೆಯಾದ ದಾವೀದನಿಗೆ ತಿಳಿಯಲಿಲ್ಲ. ಯೋವಾಬನು ಅವರನ್ನು ಕೊಂದದ್ದರಿಂದ ಯೆಹೋವನು ಅವನನ್ನು ದಂಡಿಸುತ್ತಾನೆ.