2 ಸಮುಯೇಲ 20:17 - ಪರಿಶುದ್ದ ಬೈಬಲ್17 ಯೋವಾಬನು ಆ ಸ್ತ್ರೀಯೊಂದಿಗೆ ಮಾತಾಡಲು ಹತ್ತಿರಕ್ಕೆ ಬಂದನು. ಅವಳು, “ನೀನು ಯೋವಾಬನೇ?” ಎಂದು ಕೇಳಿದಳು. “ಹೌದು, ನಾನೇ ಯೋವಾಬನು” ಎಂದು ಅವನು ಉತ್ತರಿಸಿದನು. ಆಗ ಅವಳು ಯೋವಾಬಿಗೆ, “ನಾನು ಹೇಳುವುದನ್ನು ಕೇಳು” ಎಂದಳು. “ಆಗಲಿ, ಕೇಳುತ್ತೇನೆ” ಎಂದು ಯೋವಾಬನು ಉತ್ತರಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಯೋವಾಬನು ಬರಲು ಆ ಸ್ತ್ರೀಯು, “ನೀನು ಯೋವಾಬನೋ?” ಎಂದು ಅವನನ್ನು ಕೇಳಲು ಅವನು “ಹೌದು ನಾನೇ” ಎಂದು ಉತ್ತರ ಕೊಟ್ಟನು. ಆಕೆಯು, “ನಿನ್ನ ದಾಸಿಯ ಮಾತನ್ನು ಕೇಳು” ಅನ್ನಲು ಅವನು, “ಕೇಳುತ್ತೇನೆ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 “ನೀವು ಯೋವಾಬೋ?’ ಎಂದು ಅವನನ್ನು ಕೇಳಿದಳು. ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿಮ್ಮ ದಾಸಿಯ ಮಾತನ್ನು ಕೇಳಿ,” ಎನ್ನಲು ಅವನು, “ಕೇಳುತ್ತೇನೆ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಯೋವಾಬನು ಬರಲು ಆ ಸ್ತ್ರೀಯು - ನೀನು ಯೋವಾಬನೋ ಎಂದು ಅವನನ್ನು ಕೇಳಿದಳು. ಅವನು - ಹೌದು, ನಾನೇ ಎಂದು ಉತ್ತರಕೊಟ್ಟನು. ಆಕೆಯು - ನಿನ್ನ ದಾಸಿಯ ಮಾತನ್ನು ಕೇಳು ಅನ್ನಲು ಅವನು - ಕೇಳುತ್ತೇನೆ ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಅವನು ಅವಳ ಬಳಿಗೆ ಸಮೀಪಿಸಿ ಬಂದಾಗ, ಆ ಸ್ತ್ರೀಯು, “ನೀನು ಯೋವಾಬನೋ?” ಎಂದಳು. ಅದಕ್ಕೆ ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿನ್ನ ದಾಸಿಯ ಮಾತನ್ನು ಕೇಳಿ,” ಎಂದಳು. ಅದಕ್ಕೆ ಅವನು, “ನಾನು ಕೇಳುತ್ತೇನೆ,” ಎಂದನು. ಅಧ್ಯಾಯವನ್ನು ನೋಡಿ |