2 ಸಮುಯೇಲ 19:9 - ಪರಿಶುದ್ದ ಬೈಬಲ್9 ಇಸ್ರೇಲಿನ ಕುಲಗಳ ಜನರೆಲ್ಲರೂ ತಮ್ಮಲ್ಲೇ ಚರ್ಚಿಸಿದರು. ಅವರು, “ರಾಜನಾದ ದಾವೀದನು ಫಿಲಿಷ್ಟಿಯರಿಂದ ಮತ್ತು ಇತರ ಶತ್ರುಗಳಿಂದ ನಮ್ಮನ್ನು ರಕ್ಷಿಸಿದನು. ಅಬ್ಷಾಲೋಮನಿಂದಾಗಿ ದಾವೀದನು ಓಡಿಹೋಗಬೇಕಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ನಿವಾಸಗಳಿಗೆ ಓಡಿ ಹೋಗಿದ್ದರು. ಇಸ್ರಾಯೇಲರ ಕುಲಗಳ ಎಲ್ಲಾ ಜನರು ತಮ್ಮತಮ್ಮೊಳಗೆ ಜಗಳವಾಡಿ “ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ, ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಇಸ್ರಯೇಲರೆಲ್ಲರು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಯೇಲ್ ಕುಲಗಳ ಜನರೆಲ್ಲರು, “ಅರಸ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಯಿಂದಲೂ ಬೇರೆ ಎಲ್ಲಾ ವೈರಿಗಳ ಕೈಯಿಂದಲೂ ತಪ್ಪಿಸಿ ಕಾಪಾಡಿದ. ಆದರೆ ಅಬ್ಷಾಲೋಮನ ಕಾರಣ ನಾಡನ್ನೇ ಬಿಟ್ಟು ಓಡಿಹೋಗುವಂತೆ ಮಾಡಿದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಇಸ್ರಾಯೇಲ್ಯರೆಲ್ಲರೂ ತಮ್ಮತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಾಯೆಲ್‍ಕುಲಗಳಲ್ಲೆಲ್ಲಾ ಜನರು ತಮ್ಮ ತಮ್ಮೊಳಗೆ ಜಗಳವಾಡಿ - ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿ ಸಮಸ್ತ ಜನರು ತಮ್ಮೊಳಗೆ ಜಗಳ ಮಾಡುತ್ತಾ, “ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಫಿಲಿಷ್ಟಿಯರ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಆದರೆ ಈಗ ಅಬ್ಷಾಲೋಮನಿಗೋಸ್ಕರ ದೇಶವನ್ನು ಬಿಟ್ಟು ಓಡಿಹೋಗಿದ್ದಾನೆ. ಅಧ್ಯಾಯವನ್ನು ನೋಡಿ |
ಸೌಲನು ಅವರಿಗೆ, “ನೀವು ದಾವೀದನ ಬಳಿಗೆ ಹೋಗಿ ಹೇಳಿ: ‘ನೀನು ರಾಜನ ಮಗಳಿಗಾಗಿ ಹಣ ಕೊಡಬೇಕಿಲ್ಲ. ಸೌಲನು ತನ್ನ ಶತ್ರುಗಳ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಆದ್ದರಿಂದ ಅವನ ಮಗಳನ್ನು ಮದುವೆಯಾಗಲು ಕೊಡಬೇಕಾದ ದಕ್ಷಿಣೆ ಏನೆಂದರೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲುಗಳು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಸೌಲನ ರಹಸ್ಯವಾದ ಉಪಾಯ ಇದಾಗಿದ್ದಿತು. ಫಿಲಿಷ್ಟಿಯರು ದಾವೀದನನ್ನು ಕೊಂದು ಬಿಡಬಹುದೆಂದು ಸೌಲನು ಭಾವಿಸಿದ್ದನು.