2 ಸಮುಯೇಲ 19:6 - ಪರಿಶುದ್ದ ಬೈಬಲ್6 ನಿನ್ನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸುವೆ; ನಿನ್ನನ್ನು ಪ್ರೀತಿಸುವ ಜನರನ್ನು ನೀನು ದ್ವೇಷಿಸುವೆ. ಆದ್ದರಿಂದ ನಿನ್ನ ಸೇವಕರು ಅವಮಾನಿತರಾಗಿದ್ದಾರೆ. ನಿನ್ನ ಅಧಿಕಾರಿಗಳು ಮತ್ತು ನಿನ್ನ ಜನರು ನಿನಗೆ ಮುಖ್ಯವಲ್ಲ ಎಂಬುದನ್ನು ನೀನಿಂದು ರುಜುವಾತುಪಡಿಸಿದೆ. ಇಂದು ಅಬ್ಷಾಲೋಮನು ಬದುಕಿದ್ದು, ನಾವೆಲ್ಲರೂ ಸತ್ತಿದ್ದರೆ, ನೀನು ಬಹಳ ಹರ್ಷಗೊಳುತ್ತಿದ್ದೆ ಎಂಬುದನ್ನು ನಾನು ಈ ದಿನ ಕಂಡುಕೊಂಡೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ನೀನು ಶತ್ರುಗಳನ್ನು ಪ್ರೀತಿಸುವವನೂ, ಮಿತ್ರರನ್ನು ದ್ವೇಷಿಸುವವನೂ ಆಗಿದ್ದೀ. ನೀನು ನಿನ್ನ ಸೇನಾಧಿಪತಿಗಳನ್ನೂ, ಸೈನಿಕರನ್ನೂ ಲಕ್ಷಿಸುವವನಲ್ಲವೆಂದು ಈಗ ತೋರಿಸಿಕೊಟ್ಟೆ. ಇದರಿಂದ ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೆ ಉಳಿದಿದ್ದರೆ ನಿನಗೆ ಸಂತೋಷವಾಗುತ್ತಿತ್ತೆಂದು ತಿಳಿಯಬೇಕಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ನೀವು ಶತ್ರುಗಳನ್ನು ಪ್ರೀತಿಸುವವರೂ ಮಿತ್ರರನ್ನು ದ್ವೇಷಿಸುವವರೂ ಆಗಿದ್ದೀರಿ; ನೀವು ನಿಮ್ಮ ಸೇನಾಧಿಪತಿಗಳನ್ನೂ ಸೈನಿಕರನ್ನೂ ಲಕ್ಷಿಸುವವರಲ್ಲವೆಂದು ಈಗ ತೋರಿಸಿಕೊಟ್ಟಿರಿ. ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೇ ಉಳಿದಿದ್ದರೆ ನಿಮಗೆ ಸಂತೋಷವಾಗುತ್ತಿತ್ತೆಂದು ಇದರಿಂದ ತಿಳಿಯಬೇಕಷ್ಟೆ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ನೀನು ಶತ್ರುಗಳನ್ನು ಪ್ರೀತಿಸುವವನೂ ವಿುತ್ರರನ್ನು ದ್ವೇಷಿಸುವವನೂ ಆಗಿದ್ದೀ; ನೀನು ನಿನ್ನ ಸೇನಾಧಿಪತಿಗಳನ್ನೂ ಸೈನಿಕರನ್ನೂ ಲಕ್ಷಿಸುವವನಲ್ಲವೆಂದು ಈಗ ತೋರಿಸಿಕೊಟ್ಟಿ. ಇದರಿಂದ ಈಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೇ ಉಳಿದಿದ್ದರೆ ನಿನಗೆ ಸಂತೋಷವಾಗುತ್ತಿತ್ತೆಂದು ತಿಳಿಯಬೇಕಷ್ಟೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ನೀನು ನಿನ್ನ ಹಗೆಯವರನ್ನು ಪ್ರೀತಿಮಾಡಿ, ನಿನ್ನನ್ನು ಪ್ರೀತಿಸುವವರನ್ನು ಹಗೆ ಮಾಡಿದ್ದರಿಂದ ಸೇನಾಧಿಪತಿಗಳನ್ನೂ, ಸೈನಿಕರನ್ನೂ ನಿನಗೆ ಏನೂ ಅಲ್ಲವೆಂದು ಈಗ ತಿಳಿಯಮಾಡಿದಿ. ಈ ಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋಮನು ಬದುಕಿದ್ದರೆ, ನಿನಗೆ ಸಂತೋಷವಾಗುತ್ತಿತ್ತು ಎಂದು ನನಗೆ ಅನಿಸುತ್ತದೆ. ಅಧ್ಯಾಯವನ್ನು ನೋಡಿ |