Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 19:29 - ಪರಿಶುದ್ದ ಬೈಬಲ್‌

29 ರಾಜನು ಮೆಫೀಬೋಶೆತನಿಗೆ, “ನಿನ್ನ ಸಮಸ್ಯೆಗಳ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಬೇಡ. ನಾನು ಈ ರೀತಿ ತೀರ್ಮಾನಿಸಿದ್ದೇನೆ. ನೀನು ಮತ್ತು ಚೀಬನು ಭೂಮಿಯನ್ನು ಹಂಚಿಕೊಳ್ಳಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆಗ ಅರಸನು ಅವನಿಗೆ, “ಹೆಚ್ಚು ಮಾತು ಯಾಕೆ? ನೀನೂ ಮತ್ತು ಚೀಬನೂ ಹೊಲವನ್ನು ಭಾಗಮಾಡಿಕೊಳ್ಳಬೇಕೆಂಬುದೇ ನನ್ನ ತೀರ್ಪು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಆಗ ಅರಸನು, “ಹೆಚ್ಚು ಮಾತು ಏಕೆ? ಹೊಲವನ್ನು ನೀನು ಹಾಗು ಚೀಬ ಭಾಗಮಾಡಿಕೊಳ್ಳಬೇಕು. ಇದೇ ನನ್ನ ತೀರ್ಪು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆಗ ಅರಸನು ಅವನಿಗೆ - ಹೆಚ್ಚು ಮಾತು ಯಾಕೆ? ನೀನೂ ಚೀಬನೂ ಹೊಲವನ್ನು ಭಾಗಮಾಡಿಕೊಳ್ಳಬೇಕೆಂಬದೇ ನನ್ನ ತೀರ್ಪು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆಗ ಅರಸನು ಅವನಿಗೆ, “ಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡುವುದೇನು? ನೀನೂ, ಚೀಬನೂ ಭೂಮಿಯನ್ನು ಪಾಲು ಹಂಚಿಕೊಳ್ಳಿರಿ ಎಂದು ಹೇಳಿದ್ದೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 19:29
11 ತಿಳಿವುಗಳ ಹೋಲಿಕೆ  

ನಿಮ್ಮ ಅಪವಾದಗಳು ಕೇವಲ ಪದಗಳಿಗೂ ಹೆಸರುಗಳಿಗೂ ಮತ್ತು ನಿಮ್ಮ ಸ್ವಂತ ಧರ್ಮಶಾಸ್ತ್ರಕ್ಕೂ ಸಂಬಂಧಪಟ್ಟಿವೆ. ಆದ್ದರಿಂದ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ಸಂಗತಿಗಳಿಗೆ ನ್ಯಾಯಾಧೀಶನಾಗಿರಲು ನನಗೆ ಇಷ್ಟವಿಲ್ಲ!” ಎಂದು ಹೇಳಿ,


ಗಮನವಿಟ್ಟು ಕೇಳದೆ ಉತ್ತರಿಸುವವನು ಮೂಢನೇ ಸರಿ; ಅವನು ನಾಚಿಕೆಗೆ ಒಳಗಾಗುವನು.


ನೆರೆಯವನ ಕುರಿತು ಗುಟ್ಟಾಗಿ ಚಾಡಿ ಹೇಳುವವನನ್ನು ನಾನು ತಡೆಯುವೆನು. ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ ನಾನು ಅವರಿಗೆ ಅವಕಾಶ ಕೊಡುವುದಿಲ್ಲ.


ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ? ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”


ಸೌಲನ ಮನೆಯಲ್ಲಿ ಸೇವಕನಾಗಿದ್ದ ಚೀಬ ಎಂಬವನೊಬ್ಬನಿದ್ದನು. ದಾವೀದನ ಸೇವಕರು ಚೀಬನನ್ನು ದಾವೀದನ ಬಳಿಗೆ ಕರೆತಂದರು. ರಾಜನಾದ ದಾವೀದನು ಅವನಿಗೆ, “ನೀನು ಚೀಬನೇ?” ಎಂದು ಕೇಳಿದನು. ಚೀಬನು, “ಹೌದು, ನಿನ್ನ ಸೇವಕನಾದ ಚೀಬನು ನಾನೇ” ಎಂದನು.


ಆಗ ರಾಜನಾದ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಒಡೆಯನಾದ ಸೌಲನ ಕುಟುಂಬಕ್ಕೆ ಸೇರಿದ ಎಲ್ಲವನ್ನೂ ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ.


ನೀನು ನನ್ನ ತಾತನ ಕುಟುಂಬವನ್ನೆಲ್ಲ ಕೊಲ್ಲಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ನೀನು ನಿನ್ನ ಪಂಕ್ತಿಯಲ್ಲಿ ಊಟಮಾಡುವ ಜನರ ಜೊತೆಯಲ್ಲಿ ನನ್ನನ್ನೂ ಸೇರಿಸಿದೆ. ಆದ್ದರಿಂದ ರಾಜನ ಬಗ್ಗೆ ದೂರು ಹೇಳಲು ನನಗೆ ಯಾವ ಹಕ್ಕಿಲ್ಲ” ಎಂದು ಹೇಳಿದನು.


ಮೆಫೀಬೋಶೆತನು ರಾಜನಿಗೆ, “ಚೀಬನೇ ಎಲ್ಲಾ ಭೂಮಿಯನ್ನು ತೆಗೆದುಕೊಳ್ಳಲಿ. ನನ್ನ ಒಡೆಯನಾದ ರಾಜನು ತನ್ನ ಸ್ವಂತ ಮನೆಗೆ ಸುರಕ್ಷಿತನಾಗಿ ಬಂದದ್ದೇ ಸಾಕು” ಎಂದು ಹೇಳಿದನು.


ದಾವೀದನು ಮೆಫೀಬೋಶೆತನಿಗೆ, “ಹೆದರಬೇಡ, ನಾನು ನಿನಗೆ ದಯತೋರಿಸುವೆ. ನಿನ್ನ ತಂದೆಯಾದ ಯೋನಾತಾನನ ಸಲುವಾಗಿ ನಾನು ಇದನ್ನು ಮಾಡುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಾನು ಹಿಂದಕ್ಕೆ ಕೊಡುತ್ತೇನೆ. ನೀನು ಯಾವಾಗಲೂ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು