Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 8:11 - ಪರಿಶುದ್ದ ಬೈಬಲ್‌

11 ಸೊಲೊಮೋನನು ದಾವೀದ ನಗರದಲ್ಲಿದ್ದ ಫರೋಹನ ಕುಮಾರ್ತೆಯನ್ನು ಆಕೆಗಾಗಿ ಕಟ್ಟಿದ ಅರಮನೆಗೆ ಕರೆಸಿದನು. “ನನ್ನ ಹೆಂಡತಿಯು ದಾವೀದನ ಮನೆಯಲ್ಲಿ ವಾಸಿಸಬಾರದು. ಯಾಕೆಂದರೆ ದೇವರ ಒಡಂಬಡಿಕೆಯ ಪೆಟ್ಟಿಗೆ ಇರುವ ಸ್ಥಳಗಳು ಪರಿಶುದ್ಧವಾಗಿವೆ” ಎಂದು ಸೊಲೊಮೋನನು ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಸೊಲೊಮೋನನು, “ಯಾವ ಯಾವ ಸ್ಥಳಗಳಲ್ಲಿ ಯೆಹೋವನ ಮಂಜೂಷವಿತ್ತೋ ಅವೆಲ್ಲವೂ ಪವಿತ್ರಸ್ಥಾನಗಳು. ಆದುದರಿಂದ ಇಸ್ರಾಯೇಲರ ಅರಸನಾದ ದಾವೀದನ ಮನೆಯಲ್ಲಿ ಫರೋಹನ ಪುತ್ರಿಯಾದ ನನ್ನ ಹೆಂಡತಿಯು ವಾಸಿಸಬಾರದು” ಅಂದುಕೊಂಡು ಆಕೆಯನ್ನು ದಾವೀದನಗರದಲ್ಲಿರಿಸದೆ, ತಾನು ಆಕೆಗಾಗಿ ಕಟ್ಟಿಸಿದ ಮಂದಿರಕ್ಕೆ ಕರೆದುಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ಯಾವ ಯಾವ ಸ್ಥಳಗಳಲ್ಲಿ ಸರ್ವೇಶ್ವರನ ಮಂಜೂಷವಿತ್ತೋ ಅವು ಪವಿತ್ರಸ್ಥಾನಗಳು; ಆದುದರಿಂದ ಇಸ್ರಯೇಲರ ಅರಸನಾಗಿದ್ದ ದಾವೀದನ ಮನೆ ಪವಿತ್ರವಾದುದು; ಅಲ್ಲಿ ಫರೋಹನ ಮಗಳಾದ ನನ್ನ ಹೆಂಡತಿ ವಾಸಿಸಬಾರದು,” ಎಂದುಕೊಂಡು ಸೊಲೊಮೋನನು ಆಕೆಯನ್ನು ದಾವೀದನಗರದಿಂದಾಚೆ ಆಕೆಗಾಗಿಯೇ ತಾನು ಕಟ್ಟಿಸಿದ್ದ ಮಂದಿರದಲ್ಲಿ ಇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಸೊಲೊಮೋನನು - ಯಾವ ಯಾವ ಸ್ಥಳಗಳಲ್ಲಿ ಯೆಹೋವನ ಮಂಜೂಷವಿತ್ತೋ ಅವು ಪವಿತ್ರಸ್ಥಾನಗಳೇ; ಆದದರಿಂದ ಇಸ್ರಾಯೇಲ್ಯರ ಅರಸನಾದ ದಾವೀದನ ಮನೆಯಲ್ಲಿ ಫರೋಹನ ಮಗಳಾದ ನನ್ನ ಹೆಂಡತಿಯು ವಾಸಿಸಬಾರದು ಅಂದುಕೊಂಡು ಆಕೆಯನ್ನು ದಾವೀದನಗರದಿಂದ ತಾನು ಆಕೆಗೋಸ್ಕರ ಕಟ್ಟಿಸಿದ ಮಂದಿರಕ್ಕೆ ಕರಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಸೊಲೊಮೋನನು, “ಯೆಹೋವ ದೇವರ ಒಡಂಬಡಿಕೆಯ ಮಂಜೂಷವಿದ್ದ ಸ್ಥಳಗಳು ಪರಿಶುದ್ಧವಾಗಿರುವುದರಿಂದ, ನನ್ನ ಹೆಂಡತಿಯು ಇಸ್ರಾಯೇಲಿನ ಅರಸನಾದ ದಾವೀದನ ಅರಮನೆಯಲ್ಲಿ ವಾಸವಾಗಿರಕೂಡದು,” ಎಂದು ಹೇಳಿ ಸೊಲೊಮೋನನು ಫರೋಹನ ಮಗಳನ್ನು ದಾವೀದನ ಪಟ್ಟಣದಲ್ಲಿರಿಸದೆ ತಾನು ಆಕೆಗೋಸ್ಕರ ಕಟ್ಟಿಸಿದ ಅರಮನೆಯಲ್ಲಿ ಅವಳನ್ನು ಇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 8:11
8 ತಿಳಿವುಗಳ ಹೋಲಿಕೆ  

ಸೊಲೊಮೋನನು ವಾಸಿಸುತ್ತಿದ್ದ ಮನೆಯು “ನ್ಯಾಯಮಂದಿರ”ದ ಒಳಗಿನ ಪ್ರಾಕಾರದಲ್ಲಿತ್ತು. ಈ ಮನೆಯನ್ನು “ನ್ಯಾಯಮಂದಿರ”ದಂತೆಯೇ ಕಟ್ಟಿಸಿದನು. ಇದಲ್ಲದೆ ಅವನು ಈಜಿಪ್ಟಿನ ಫರೋಹನ ಮಗಳಾದ ತನ್ನ ಹೆಂಡತಿಗೂ ಇದೇ ರೀತಿಯ ಮನೆಯನ್ನು ಕಟ್ಟಿಸಿದನು.


ಸೊಲೊಮೋನನು ಈಜಿಪ್ಟಿನ ರಾಜನಾದ ಫರೋಹನ ಮಗಳನ್ನು ಮದುವೆಯಾಗಿ ಅವನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಸೊಲೊಮೋನನು ಅವಳನ್ನು ದಾವೀದನಗರಕ್ಕೆ ಕರೆದು ತಂದನು. ಸೊಲೊಮೋನನು ಆ ಸಮಯದಲ್ಲಿ ತನ್ನ ಅರಮನೆಯನ್ನು ಮತ್ತು ಯೆಹೋವನ ದೇವಾಲಯಗಳನ್ನು ನಿರ್ಮಿಸುತ್ತಿದ್ದನು. ಜೆರುಸಲೇಮಿನ ಸುತ್ತಲೂ ಒಂದು ಗೋಡೆಯನ್ನು ಸಹ ಸೊಲೊಮೋನನು ನಿರ್ಮಿಸುತ್ತಿದ್ದನು.


ಫರೋಹನ ಮಗಳು ದಾವೀದ ನಗರವನ್ನು ಬಿಟ್ಟು ಸೊಲೊಮೋನನು ಅವಳಿಗಾಗಿ ಕಟ್ಟಿಸಿದ ದೊಡ್ಡ ಮನೆಗೆ ಹೋದಳು. ಆಗ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.


ನಾವು ಪವಿತ್ರ ಪರ್ವತದ ಮೇಲೆ ಯೇಸುವಿನ ಜೊತೆಯಲ್ಲಿದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೂ ಕೇಳಿದೆವು.


“ನರಪುತ್ರನೇ, ಜೆರುಸಲೇಮಿನ ಕಡೆಗೆ ನೋಡಿ ಅವರ ಪವಿತ್ರ ಸ್ಥಳಗಳಿಗೆ ವಿರುದ್ಧವಾಗಿ ಹೇಳು. ನನ್ನ ಪರವಾಗಿ ಇಸ್ರೇಲ್ ದೇಶದ ವಿರುದ್ಧವಾಗಿ ಮಾತನಾಡು.


ಆ ಸ್ಥಳದಲ್ಲಿ ನಾನು ಇಸ್ರೇಲರನ್ನು ಸಂಧಿಸುವೆನು. ನನ್ನ ಪ್ರಭಾವದಿಂದ ಆ ಸ್ಥಳವು ಪವಿತ್ರವಾಗುವುದು.


ಆಗ ಯೆಹೋವನು, “ಇನ್ನೂ ಹತ್ತಿರ ಬರಬೇಡ. ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ.


ಇನ್ನು ಕೆಲವರು ಮುಖ್ಯಾಧಿಕಾರಿಗಳಿಗೆ ಅಧಿಪತಿಗಳಾಗಿದ್ದರು. ಜನಸೇವೆಗಾಗಿ ಈ ರೀತಿಯ 250 ಅಧಿಪತಿಗಳಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು