2 ಪೂರ್ವಕಾಲ ವೃತ್ತಾಂತ 7:16 - ಪರಿಶುದ್ದ ಬೈಬಲ್16 ನನ್ನ ನಾಮದ ಮಹತ್ವ ಶಾಶ್ವತವಾಗಿರಬೇಕೆಂದು ನಾನು ಈ ಆಲಯವನ್ನು ಆರಿಸಿಕೊಂಡು ಶುದ್ಧೀಕರಿಸಿದ್ದೇನೆ. ಹೌದು, ನನ್ನ ದೃಷ್ಟಿಯೂ ನನ್ನ ಹೃದಯವೂ ಸದಾಕಾಲ ಈ ಆಲಯದ ಮೇಲೆ ನೆಲೆಸಿರುತ್ತದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ನನ್ನ ನಾಮ ಮಹತ್ತು ಈ ಆಲಯದಲ್ಲಿ ಶಾಶ್ವತವಾಗಿರುವಂತೆ ಇದನ್ನು ನನಗೋಸ್ಕರ ಆರಿಸಿ ಪ್ರತಿಷ್ಠಿಸಿಕೊಂಡಿದ್ದೇನೆ; ನನ್ನ ದೃಷ್ಠಿಯೂ, ಮನಸ್ಸೂ ಸದಾ ಇಲ್ಲೇ ಇರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ನನ್ನ ನಾಮ ಮಹಿಮೆ ಈ ಆಲಯದಲ್ಲಿ ಶಾಶ್ವತವಾಗಿರುವಂತೆ ಇದನ್ನು ನನಗಾಗಿ ಆರಿಸಿ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ ಮನಸ್ಸೂ ಸದಾ ಅಲ್ಲಿ ಇರುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ನನ್ನ ನಾಮಮಹತ್ತು ಈ ಆಲಯದಲ್ಲಿ ಶಾಶ್ವತವಾಗಿರುವಂತೆ ಇದನ್ನು ನನಗೋಸ್ಕರ ಆರಿಸಿ ಪ್ರತಿಷ್ಠಿಸಿಕೊಂಡಿದ್ದೇನೆ; ನನ್ನ ದೃಷ್ಟಿಯೂ ಮನಸ್ಸೂ ಸದಾ ಅಲ್ಲೇ ಇರುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ಈ ಆಲಯವನ್ನು ಆಯ್ದುಕೊಂಡು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು. ಅಧ್ಯಾಯವನ್ನು ನೋಡಿ |
‘ನಾನು ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದೆನು. ಆದರೆ ನನ್ನನ್ನು ಘನಪಡಿಸಿಕೊಳ್ಳುವುದಕ್ಕಾಗಿ ಆಲಯವೊಂದನ್ನು ಕಟ್ಟಲು ಇಸ್ರೇಲಿನ ಕುಲಗಳಿಂದ ನಾನಿನ್ನೂ ಯಾವ ನಗರವನ್ನು ಆರಿಸಿಕೊಂಡಿರಲಿಲ್ಲ. ಇಸ್ರೇಲಿನ ಜನರನ್ನಾಳುವ ನಾಯಕನನ್ನು ನಾನಿನ್ನೂ ಆರಿಸಿಕೊಂಡಿರಲಿಲ್ಲ, ಆದರೆ ನಾನೀಗ ಜೆರುಸಲೇಮನ್ನು ನನಗೆ ಸನ್ಮಾನವನ್ನು ತರುವಂಥ ಸ್ಥಳವನ್ನಾಗಿ ಆರಿಸಿಕೊಂಡಿರುವೆ. ಇಸ್ರೇಲಿನ ನನ್ನ ಜನರನ್ನು ಆಳಲು ದಾವೀದನನ್ನು ನಾನು ಆರಿಸಿಕೊಂಡಿರುವೆ’ ಎಂದು ಹೇಳಿದ್ದನು.