Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 7:14 - ಪರಿಶುದ್ದ ಬೈಬಲ್‌

14 ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಈಗ ನನ್ನವರೆಂದು ಹೆಸರುಗೊಂಡಿರುವ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕುರಿತು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ, ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶಕ್ಕೆ ಆರೋಗ್ಯವನ್ನು ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನೇ ತಗ್ಗಿಸಿಕೊಂಡು, ನನ್ನ‍ನ್ನು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ನಾಡಿಗೆ ಆರೋಗ್ಯಭಾಗ್ಯವನ್ನು ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷವಿುಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನನ್ನ ಹೆಸರಿನಿಂದ ಕರೆಯಲಾದ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆಮಾಡಿ, ನನ್ನನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ, ಆಗ ನಾನು ಪರಲೋಕದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ, ಅವರ ದೇಶವನ್ನು ಗುಣ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 7:14
31 ತಿಳಿವುಗಳ ಹೋಲಿಕೆ  

ಪಾಪಗಳನ್ನು ಅಡಗಿಸಿಕೊಳ್ಳುವವನಿಗೆ ಯಶಸ್ಸು ಇಲ್ಲವೇ ಇಲ್ಲ. ತನ್ನ ಪಾಪವನ್ನು ಅರಿಕೆಮಾಡಿ ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.


“‘ಅನಂತರ ನಾನು ಆ ನಗರದ ಜನರನ್ನು ಕ್ಷಮಿಸುವೆನು. ಆ ಜನರು ಶಾಂತಿಯನ್ನೂ ಸುರಕ್ಷಣೆಯನ್ನೂ ಪಡೆಯುವಂತೆ ಮಾಡುವೆನು.


“ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’


ನೀನು ಪರಲೋಕದಿಂದ ಅವರನ್ನು ಆಲೈಸು. ಇಸ್ರೇಲರು ನಿನ್ನ ಸೇವಕರೂ ಪ್ರಜೆಗಳೂ ಆಗಿದ್ದಾರೆ. ಅವರು ಬದುಕುವಂತೆ ಸರಿಯಾದ ಮಾರ್ಗವನ್ನು ಅವರಿಗೆ ತೋರ್ಪಡಿಸು. ಅವರ ದೇಶದ ಮೇಲೆ ಮಳೆಯನ್ನು ಸುರಿಸು. ನಿನ್ನ ಜನರಿಗೆ ನೀನು ಆ ದೇಶವನ್ನೇ ಸ್ವಾಸ್ತ್ಯವಾಗಿ ಕೊಟ್ಟಿರುವೆ.


ಗಿಲ್ಯಾದಿನಲ್ಲಿ ಖಂಡಿತವಾಗಿಯೂ ಔಷಧವಿದೆ. ಖಂಡಿತವಾಗಿಯೂ ಅಲ್ಲಿ ಒಬ್ಬ ವೈದ್ಯನಿದ್ದಾನೆ. ಆದರೆ ನನ್ನ ಜನರ ಗಾಯಗಳು ಗುಣವಾಗಲಿಲ್ಲವೇಕೆ?


ಕೆಲವರು ನಿನ್ನನ್ನು ಅನುಸರಿಸುವದಿಲ್ಲ. ಅವರು ನಿನ್ನ ಹೆಸರಿನಿಂದ ಕರೆಯಲ್ಪಡುವದಿಲ್ಲ. ನಾವು ಅವರಂತೆ ಇದ್ದೆವು.


ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು. ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು.


ನೀನು ಪರಲೋಕದಿಂದ ಅವರ ಮೊರೆಯನ್ನು ಆಲೈಸಿ ಅವರ ಪ್ರಾರ್ಥನೆಗೆ ಉತ್ತರವನ್ನು ದಯಪಾಲಿಸು; ಪ್ರತಿಯೊಬ್ಬನಿಗೂ ತಕ್ಕ ಪ್ರತಿಫಲವನ್ನು ಕೊಡು. ಯಾಕೆಂದರೆ ಪ್ರತಿಯೊಬ್ಬನ ಹೃದಯವನ್ನು ನೀನೊಬ್ಬನೇ ತಿಳಿದಿರುವೆ.


ನಾನು ಗುಪ್ತವಾಗಿ ಮಾತನಾಡದೆ ಬಹಿರಂಗವಾಗಿಯೇ ಮಾತನಾಡಿದ್ದೇನೆ. ಈ ಭೂಮಿಯ ಕತ್ತಲೆಯ ಸ್ಥಳದಲ್ಲಿ ನನ್ನ ಮಾತುಗಳನ್ನು ಅಡಗಿಸಿಡಲಿಲ್ಲ. ನನ್ನನ್ನು ಕಂಡುಹಿಡಿಯಲು ಗುಪ್ತಸ್ಥಳದಲ್ಲಿ ಹುಡುಕಿರಿ ಎಂದು ನಾನು ಯಾಕೋಬನ ಜನರಿಗೆ ಹೇಳಲಿಲ್ಲ. ನಾನೇ ಯೆಹೋವನು. ನಾನು ಸತ್ಯವನ್ನೇ ಆಡುವೆನು.


ಪ್ರಭುವು ಅನನೀಯನಿಗೆ, “ಎದ್ದು, ‘ನೇರಬೀದಿ’ ಎಂಬ ಬೀದಿಗೆ ಹೋಗು. ಅಲ್ಲಿರುವ ಯೂದನ ಮನೆಯನ್ನು ಕಂಡುಕೊಂಡು ತಾರ್ಸಸ್ ಪಟ್ಟಣದ ಸೌಲನ ಬಗ್ಗೆ ವಿಚಾರಿಸು. ಈಗ ಅವನು ಅಲ್ಲಿ ಪ್ರಾರ್ಥಿಸುತ್ತಿದ್ದಾನೆ.


ನಾವು ಬಾಬಿಲೋನನ್ನು ವಾಸಿಮಾಡುವ ಪ್ರಯತ್ನ ಮಾಡಿದೆವು. ಆದರೆ ಅದನ್ನು ವಾಸಿಮಾಡಲು ಆಗುವದಿಲ್ಲ. ಆದ್ದರಿಂದ ಅದನ್ನು ಬಿಟ್ಟುಬಿಡೋಣ. ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ. ಪರಲೋಕದ ದೇವರು ಬಾಬಿಲೋನಿಗೆ ವಿಧಿಸಬೇಕಾದ ಶಿಕ್ಷೆಯನ್ನು ನಿರ್ಧರಿಸುವನು. ಬಾಬಿಲೋನಿಗೆ ಏನಾಗಬೇಕೆಂಬುದನ್ನು ಆತನು ನಿರ್ಧರಿಸುವನು.


ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ. ನಮ್ಮ ದೇಶವು ಕುಸಿದುಬೀಳುತ್ತಿದೆ; ಅದನ್ನು ಸರಿಪಡಿಸು.


ಬಳಿಕ ಯೆಹೋವನು, “ಹೀಗೆ ಆರೋನನೂ ಅವನ ಪುತ್ರರೂ ಇಸ್ರೇಲರನ್ನು ನನ್ನ ಹೆಸರಿನಿಂದ ಆಶೀರ್ವದಿಸುವುದರಿಂದ ನಾನು ಅವರನ್ನು ಆಶೀರ್ವದಿಸುವೆನು” ಎಂದನು.


ಆಗ ನಿಮ್ಮ ದೇಶದಲ್ಲಿ ವಾಸಿಸುವವರೆಲ್ಲರೂ ನೀವು ದೇವರ ಹೆಸರಿನಿಂದ ಕರೆಯಲ್ಪಟ್ಟವರೆಂಬುದನ್ನು ನೋಡುವಾಗ ನಿಮಗೆ ಭಯಪಡುವರು.


ಪರಲೋಕದಲ್ಲಿ ವಾಸಿಸುವ ನೀನು ಆ ಪರದೇಶಿಯ ಪ್ರಾರ್ಥನೆಯನ್ನು ಕೇಳಿ ಉತ್ತರಿಸು. ಆಗ ಇಸ್ರೇಲ್ ಜನರಂತೆ ಈ ಲೋಕದಲ್ಲಿರುವ ಜನರೆಲ್ಲಾ ನಿನ್ನ ವಿಷಯ ಕೇಳಿ ನಿನ್ನನ್ನು ಗೌರವಿಸುವರು. ನಾನು ಕಟ್ಟಿದ ಈ ದೇವಾಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂಬದು ಆಗ ಅವರಿಗೆ ಗೊತ್ತಾಗುವುದು.


“ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’


ಯೆಹೋಷಾಫಾಟನು ಭಯಭೀತನಾಗಿ ಯೆಹೋವನನ್ನು ವಿಚಾರಿಸಲು ನಿರ್ಧರಿಸಿದನು. ಯೆಹೂದದ ಎಲ್ಲಾ ಜನರು ಉಪವಾಸ ಮಾಡಬೇಕೆಂದು ಆಜ್ಞೆ ಹೊರಡಿಸಿದನು.


ಯೆಹೂದದ ಜನರೆಲ್ಲಾ ಯೆಹೋವನನ್ನು ವಿಚಾರಿಸಲು ಒಟ್ಟಾಗಿ ಸೇರಿದರು.


ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ. ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.


ನೀನು ಸ್ತಬ್ಧನಾಗಿರುವೆ; ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ. ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ. ನಾವು ನಿನ್ನ ಹೆಸರಿನವರಾಗಿದ್ದೇವೆ. ಆದ್ದರಿಂದ ನಮ್ಮನ್ನು ಕೈಬಿಡಬೇಡ.”


ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ ಇಸ್ರೇಲಿನ ಮತ್ತು ಯೆಹೂದದ ಜನರು ಒಟ್ಟಿಗೆ ಸೇರುವರು. ಅವರು ಒಟ್ಟುಗೂಡಿ ಬಹಳವಾಗಿ ಗೋಳಾಡುವರು; ತಮ್ಮ ದೇವರಾದ ಯೆಹೋವನನ್ನು ಹುಡುಕಲು ಹೋಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು