2 ಪೂರ್ವಕಾಲ ವೃತ್ತಾಂತ 5:2 - ಪರಿಶುದ್ದ ಬೈಬಲ್2 ದಾವೀದನಗರದಲ್ಲಿದ್ದ ಅಂದರೆ ಚೀಯೋನಿನಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ತರುವದಕ್ಕಾಗಿ ಸೊಲೊಮೋನನು ಇಸ್ರೇಲರ ಎಲ್ಲಾ ಹಿರಿಯರನ್ನು ಮತ್ತು ಕುಲಾಧಿಪತಿಗಳನ್ನು ಜೆರುಸಲೇಮಿಗೆ ಒಟ್ಟಾಗಿ ಕರೆಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಆಗ ಸೊಲೊಮೋನನು ದಾವೀದನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೆಲ್ಲರನ್ನು, ಕುಲಾಧಿಪತಿಗಳೆಲ್ಲರನ್ನು ಹಾಗೂ ಇಸ್ರಾಯೇಲರ ಗಣ್ಯ ವ್ಯಕ್ತಿಗಳೆಲ್ಲರನ್ನು ಯೆರೂಸಲೇಮಿಗೆ ಕರೆಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಅನಂತರ ಸೊಲೊಮೋನನು ದಾವೀದ ನಗರವಾದ ಸಿಯೋನಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಮೇಲೆ ತರುವುದಕ್ಕಾಗಿ ಇಸ್ರಯೇಲರ ಹಿರಿಯರು, ಕುಲಾಧಿಪತಿಗಳು, ಇವರೇ ಮೊದಲಾದ ಎಲ್ಲಾ ಇಸ್ರಯೇಲ್ ಗಣ್ಯವ್ಯಕ್ತಿಗಳನ್ನು ಜೆರುಸಲೇಮಿಗೆ ಕರೆಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅನಂತರ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಮೇಲೆ ತರುವದಕ್ಕಾಗಿ ಇಸ್ರಾಯೇಲ್ಯರ ಹಿರಿಯರು ಕುಲಾಧಿಪತಿಗಳು ಇವರೇ ಮೊದಲಾದ ಎಲ್ಲಾ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇವಿುಗೆ ಕರಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು. ಅಧ್ಯಾಯವನ್ನು ನೋಡಿ |
ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.
ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೀಟುಹಾಕಿ ಆರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೇ ಚೀಟುಹಾಕಿ ವಿಶಿಷ್ಟ ಕಾರ್ಯಗಳಿಗಾಗಿ ಇವರನ್ನು ಆರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಚಾದೋಕನ, ಅಹೀಮೆಲೆಕನ ಮತ್ತು ಲೇವಿಕುಲದ ನಾಯಕರ ಎದುರಿಗೆ ಚೀಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬಗಳೆನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.
ನೆತನೇಲನ ಮಗನಾದ ಶೆಮಾಯನು ಲೇಖಕನಾಗಿದ್ದನು. ಶೆಮಾಯನು ಲೇವಿ ಸಂತತಿಗೆ ಸೇರಿದವನಾಗಿದ್ದನು. ಇವನು ವಂಶಾವಳಿಯನ್ನು ಬರೆದಿಡುತ್ತಿದ್ದನು. ಅರಸನಾದ ದಾವೀದನ ಮತ್ತು ಯಾಜಕರಾದ ಚಾದೋಕನ, ಅಹೀಮೆಲೆಕನ ಮತ್ತು ಲೇವಿಯರ ನಾಯಕರ ಎದುರಿನಲ್ಲಿ ಸಂತತಿಯವರನ್ನು ಬರೆದನು. ಪ್ರತಿಸಲ ಚೀಟುಹಾಕಿ ಒಬ್ಬನನ್ನು ಒಂದು ಕೆಲಸಕ್ಕೆ ಆರಿಸಿದಾಗ ಅವನ ಹೆಸರನ್ನು ವಂಶಾವಳಿಯಲ್ಲಿ ಬರೆದನು. ಹೀಗೆ ಒಬ್ಬೊಬ್ಬನು ಯಾವಯಾವ ಕೆಲಸಗಳನ್ನು ಮಾಡಬೇಕೆಂದು ಎಲ್ಲರಿಗೂ ಗೊತ್ತುಪಡಿಸಿದರು. ಈ ರೀತಿಯಾಗಿ ಎಲ್ಲಾಜಾರ್ ಮತ್ತು ಈತಾಮಾರ್ ಕುಟುಂಬದವರಿಗೆ ಯಾಜಕೋದ್ಯೋಗವನ್ನು ಮಾಡುವಂತೆ ವರ್ಗಗಳಾಗಿ ಪ್ರತ್ಯೇಕಿಸಿ ಕೆಲಸಗಳನ್ನು ನೇಮಿಸಿದರು.