2 ಪೂರ್ವಕಾಲ ವೃತ್ತಾಂತ 35:12 - ಪರಿಶುದ್ದ ಬೈಬಲ್12 ಆಮೇಲೆ ಬೇರೆಬೇರೆ ಕುಲಗಳವರಿಗೆ ಸರ್ವಾಂಗಹೋಮವನ್ನರ್ಪಿಸಲು ಪಶುಗಳನ್ನು ಕೊಟ್ಟರು. ಈ ಸರ್ವಾಂಗಹೋಮವು ಮೋಶೆಯ ಕಟ್ಟಳೆಗನುಸಾರವಾಗಿ ನಡೆಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಲೇವಿಯರು ಚರ್ಮ ಸುಲಿದು ಹೋಮಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಪ್ರತ್ಯೇಕಿಸಿ ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರವಾಗಿ ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಯೆಹೋವನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲಿಯೂ ಅದೇ ಕ್ರಮವನ್ನು ಅನುಸರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಲೇವಿಯರು, ಚರ್ಮ ಸುಲಿದು ಹೋಮಕ್ಕಾಗಿ ತೆಗೆದಿಟ್ಟಿದ್ದನ್ನು ಪ್ರತ್ಯೇಕಿಸಿ, ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರ, ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಸರ್ವೇಶ್ವರನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲೂ ಅದೇ ಕ್ರಮವನ್ನು ಅನುಸರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಲೇವಿಯರು ಚರ್ಮಸುಲಿದು ಹೋಮಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಪ್ರತ್ಯೇಕಿಸಿ ಜನರಿಗೆ ಆಯಾ ಗೋತ್ರ ಶಾಖೆಗಳಿಗನುಸಾರವಾಗಿ ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಯೆಹೋವನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲಿಯೂ ಅದೇ ಕ್ರಮವನ್ನು ಅನುಸರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಮೋಶೆಯ ಗ್ರಂಥದಲ್ಲಿ ಬರೆದಿರುವಂತೆ, ಜನರ ವಂಶಗಳ ಮನೆಗಳ ಪ್ರಕಾರ, ಯೆಹೋವ ದೇವರಿಗೆ ಅರ್ಪಿಸಲು ಅವರು ಕೊಡುವ ಹಾಗೆ ದಹನಬಲಿಗಳನ್ನು ತೆಗೆದು ಇಟ್ಟರು. ಹಾಗೆಯೇ ಎತ್ತುಗಳನ್ನು ತೆಗೆದಿಟ್ಟರು. ಅಧ್ಯಾಯವನ್ನು ನೋಡಿ |