2 ಪೂರ್ವಕಾಲ ವೃತ್ತಾಂತ 34:9 - ಪರಿಶುದ್ದ ಬೈಬಲ್9 ಜನರು ದೇವಾಲಯದ ದುರಸ್ತಿಗಾಗಿ ಅರ್ಪಿಸಿದ್ದ ಕಾಣಿಕೆಯನ್ನು ಅವರು ಮಹಾಯಾಜಕನಾದ ಹಿಲ್ಕೀಯನಿಗೆ ತಂದುಕೊಟ್ಟರು. ಮನಸ್ಸೆ, ಎಫ್ರಾಯೀಮ್ ಮತ್ತು ಇಸ್ರೇಲ್ ರಾಜ್ಯದ ಜನರು ಕೊಟ್ಟ ಕಾಣಿಕೆಯನ್ನು ದ್ವಾರಪಾಲಕರಾದ ಲೇವಿಯರು ಒಟ್ಟುಗೂಡಿಸಿದರು. ಯೆಹೂದ, ಬೆನ್ಯಾಮೀನ್ ಕುಲದವರೂ ಜೆರುಸಲೇಮಿನಲ್ಲಿ ವಾಸಿಸುವರೂ ಕೊಟ್ಟ ಕಾಣಿಕೆಗಳನ್ನು ಅವರು ತೆಗೆದುಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಇವರು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ ದೇವಾಲಯಕ್ಕಾಗಿ ಸಂಗ್ರಹವಾದ ಹಣವನ್ನು ಅಂದರೆ ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಮುಂತಾದ ಇಸ್ರಾಯೇಲ್ ಕುಲಗಳಲ್ಲಿ ಉಳಿದವರಿಂದಲೂ, ಎಲ್ಲಾ ಯೆಹೂದ ಬೆನ್ಯಾಮೀನ್ಯರಿಂದಲೂ, ಯೆರೂಸಲೇಮಿನವರಿಂದಲೂ ಕೂಡಿಸಿದ್ದ ಹಣವನ್ನು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಇವರು ಮಹಾಯಾಜಕ ಹಿಲ್ಕೀಯನ ಬಳಿಗೆ ಹೋಗಿ, ದೇವಾಲಯಕ್ಕಾಗಿ ಸಂಗ್ರಹವಾದ ಹಣವನ್ನು, ಅಂದರೆ, ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಯಿಮ್ ಮುಂತಾದ ಇಸ್ರಯೇಲ್‍ಕುಲಗಳಲ್ಲಿ ಉಳಿದವರಿಂದ ಎಲ್ಲ ಯೆಹೂದ ಬೆನ್ಯಾಮೀನ್ಯರಿಂದ ಹಾಗು ಜೆರುಸಲೇಮಿನವರಿಂದ ಸಂಗ್ರಹಿಸಿದ್ದ ಹಣವನ್ನು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಇವರು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ ದೇವಾಲಯಕ್ಕೋಸ್ಕರ ಸಂಗ್ರಹವಾದ ಹಣವನ್ನು ಅಂದರೆ ದ್ವಾರಪಾಲಕರಾದ ಲೇವಿಯರು ಮನಸ್ಸೆ ಎಫ್ರಾಯೀಮ್ ಮುಂತಾದ ಇಸ್ರಾಯೇಲ್ ಕುಲಗಳಲ್ಲಿ ಉಳಿದವರಿಂದಲೂ ಎಲ್ಲಾ ಯೆಹೂದ ಬೆನ್ಯಾಮೀನ್ಯರಿಂದಲೂ ಯೆರೂಸಲೇವಿುನವರಿಂಲೂ ಕೂಡಿಸಿದ್ದ ಹಣವನ್ನು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಇವರು ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಜನರಿಂದಲೂ, ಇಸ್ರಾಯೇಲಿನ ಉಳಿದವರಿಂದಲೂ, ಯೆಹೂದ ಬೆನ್ಯಾಮೀನರಿಂದಲೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಂದಲೂ ಕೂಡಿಸಿದ ಹಣವನ್ನು ತೆಗೆದುಕೊಂಡು ದೇವರ ಆಲಯಕ್ಕೆ ತಂದು ಮಹಾಯಾಜಕನಾದ ಹಿಲ್ಕೀಯನಿಗೆ ಕೊಟ್ಟರು. ಅಧ್ಯಾಯವನ್ನು ನೋಡಿ |
ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್ ಮತ್ತು ಜೆಬುಲೂನಿನಿಂದ ಬಂದಿದ್ದ ಎಷ್ಟೋ ಮಂದಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಅವರು ಪಸ್ಕದ ಕುರಿಮರಿಯನ್ನು ಯೋಗ್ಯವಾದ ರೀತಿಯಲ್ಲಿ ತಿನ್ನಲಿಲ್ಲ. ಆದರೆ ಹಿಜ್ಕೀಯನು ಅಂಥವರಿಗೋಸ್ಕರವಾಗಿ, “ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ಇವರು ಯೋಗ್ಯವಾದ ರೀತಿಯಲ್ಲಿ ನಿನ್ನನ್ನು ಆರಾಧಿಸಲು ಬಂದಿದ್ದಾರೆ. ಆದರೆ ಧರ್ಮಶಾಸ್ತ್ರದ ಪ್ರಕಾರ ಅವರು ತಮ್ಮನ್ನು ಶುದ್ಧ ಮಾಡಿಕೊಳ್ಳಲಿಲ್ಲ. ದಯಮಾಡಿ ಅವರನ್ನು ಕ್ಷಮಿಸು. ನಮ್ಮ ಪಿತೃಗಳು ವಿಧೇಯರಾಗಿದ್ದ ದೇವರೇ, ಜನರು ಮೋಶೆಯ ನಿಯಮಕ್ಕನುಸಾರವಾಗಿ ತಮ್ಮನ್ನು ಶುದ್ಧಿ ಮಾಡಿಕೊಂಡಿಲ್ಲದಿದ್ದರೂ ನೀನು ಅವರನ್ನು ದಯವಿಟ್ಟು ಕ್ಷಮಿಸು” ಎಂದು ಪ್ರಾರ್ಥಿಸಿದನು.
ಪಸ್ಕಹಬ್ಬದ ಆಚರಣೆಯು ಮುಕ್ತಾಯವಾಯಿತು. ಇಸ್ರೇಲಿನಿಂದ ಜೆರುಸಲೇಮಿಗೆ ಬಂದಿದ್ದವರು ಯೆಹೂದದ ಪಟ್ಟಣಗಳಿಗೆ ಹೋದರು. ಅಲ್ಲಿದ್ದ ಕಲ್ಲಿನ ವಿಗ್ರಹಗಳನ್ನು ಒಡೆದು ನಾಶಮಾಡಿದರು; ಅಶೇರಸ್ತಂಭಗಳನ್ನು ಮತ್ತು ಪೂಜಾಸ್ಥಳಗಳನ್ನು ಕೆಡವಿಹಾಕಿದರು. ಹೀಗೆ ಅವರು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲೆಲ್ಲಾ ಸಂಚಾರ ಮಾಡಿದರು. ಆ ಜನರು ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳಲ್ಲಿಯೂ ಹಾಗೆಯೇ ಮಾಡಿದರು. ವಿಗ್ರಹಗಳನ್ನು ಪೂಜಿಸಲು ಮಾಡಿದ ಎಲ್ಲಾ ವಸ್ತುಗಳನ್ನು ನಾಶಮಾಡಿದರು. ಬಳಿಕ ಆ ಇಸ್ರೇಲರೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು.
ನಂತರ ರಾಜನು ಪ್ರಧಾನಯಾಜಕನಾದ ಹಿಲ್ಕೀಯನಿಗೆ, ಇತರ ಯಾಜಕರಿಗೆ, ದ್ವಾರಪಾಲಕರಿಗೆ, ಬಾಳ್‌ದೇವರಿಗೂ ಅಶೇರ ದೇವತೆಗೂ ಮತ್ತು ಆಕಾಶದ ನಕ್ಷತ್ರಗಳಿಗೂ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನು ದೇವಾಲಯದಿಂದ ಹೊರತರುವಂತೆ ಆಜ್ಞಾಪಿಸಿದನು. ಯೋಷೀಯನು ಜೆರುಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಅವುಗಳನ್ನು ಸುಟ್ಟುಹಾಕಿದನು. ಅವರು ಬೂದಿಯನ್ನು ಬೇತೇಲಿಗೆ ತೆಗೆದುಕೊಂಡು ಹೋದರು.