ಆಸನು ದೇವರಾದ ಯೆಹೋವನನ್ನು ಪ್ರಾರ್ಥಿಸಿ, “ಯೆಹೋವನೇ, ಬಲಹೀನರಾದವರು ಬಲಿಷ್ಠರಾದವರನ್ನು ಸೋಲಿಸಲು ನೀನೇ ಸಹಾಯಿಸಬೇಕು. ದೇವರಾದ ಯೆಹೋವನೇ, ನಮಗೆ ಸಹಾಯಮಾಡು. ನೀನೇ ನಮ್ಮ ರಕ್ಷಕನು. ನಾವು ನಿನ್ನ ಮೇಲೆ ಭರವಸವಿಟ್ಟಿರುತ್ತೇವೆ. ನಿನ್ನ ಹೆಸರಿನಲ್ಲಿ ನಾವು ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಿರುತ್ತೇವೆ. ಯೆಹೋವನೇ, ನೀನೇ ನಮ್ಮ ದೇವರು. ನಿನ್ನನ್ನು ಸೋಲಿಸಲು ಯಾರಿಗೂ ಅವಕಾಶಕೊಡಬೇಡ” ಎಂದು ಬೇಡಿಕೊಂಡನು.
ಆಗ ಯೆಹೋವನು ಅಶ್ಶೂರದ ಅರಸನ ಪಾಳೆಯಕ್ಕೆ ದೇವದೂತನನ್ನು ಕಳುಹಿಸಿದನು. ಆ ದೂತನು ಅಶ್ಶೂರದ ಎಲ್ಲಾ ಸೈನ್ಯದವರನ್ನೂ ಅವರ ಅಧಿಕಾರಿಗಳನ್ನೂ ಸಂಹರಿಸಿದನು. ಆಗ ಅಶ್ಶೂರದ ಅರಸನು ತನ್ನ ಸ್ವಂತ ದೇಶಕ್ಕೆ ಹಿಂತಿರುಗಿದನು. ಅವನ ಜನರು ಅವನ ವಿಷಯದಲ್ಲಿ ನಾಚಿಕೆಪಟ್ಟರು. ಅವನು ತನ್ನ ದೇವರಮಂದಿರದೊಳಕ್ಕೆ ಹೋದಾಗ ಅವನ ಸ್ವಂತ ಮಕ್ಕಳಲ್ಲಿ ಕೆಲವರು ಅವನನ್ನು ಖಡ್ಗದಿಂದ ಸಂಹರಿಸಿದರು.