2 ಪೂರ್ವಕಾಲ ವೃತ್ತಾಂತ 28:23 - ಪರಿಶುದ್ದ ಬೈಬಲ್23 ದಮಸ್ಕದ ಜನರು ಆರಾಧಿಸುವ ಆ ದೇವರುಗಳಿಗೆ ಆಹಾಜನು ಯಜ್ಞಗಳನ್ನರ್ಪಿಸಿದನು. ದಮಸ್ಕದ ಜನರು ಆಹಾಜನನ್ನು ಸೋಲಿಸಿದ್ದರು. ಆಗ ಆಹಾಜನು, “ಅರಾಮ್ಯರು ಪೂಜಿಸುವ ದೇವರು ಅವರಿಗೆ ಸಹಾಯ ಮಾಡಿದನು. ಆದ್ದರಿಂದ ನಾನು ಆ ದೇವರಿಗೆ ಯಜ್ಞವನ್ನರ್ಪಿಸಿ ಆರಾಧಿಸಿದರೆ ಆ ದೇವರು ನನಗೂ ಸಹಾಯ ಮಾಡುವನು” ಎಂದುಕೊಂಡನು. ಆಹಾಜನು ಆ ದೇವರುಗಳನ್ನು ಪೂಜಿಸುವುದರ ಮೂಲಕ ತಾನೂ ಪಾಪಮಾಡಿ ತನ್ನ ಪ್ರಜೆಗಳನ್ನೂ ಪಾಪಮಾಡುವದಕ್ಕೆ ಪ್ರೋತ್ಸಾಹಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಹೇಗೆಂದರೆ “ಅರಾಮ್ ರಾಜರ ದೇವತೆಗಳು ಅವರಿಗೆ ಜಯವನ್ನು ಅನುಗ್ರಹಿಸುವೆ ಎಂದು ತಿಳಿದು; ನಾನೂ ಅವುಗಳಿಗೆ ಯಜ್ಞಸಮರ್ಪಿಸುವೆನು, ಆಗ ನನಗೂ ಜಯವಾಗುವುದು” ಎಂದುಕೊಂಡು ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಯಜ್ಞಸಮರ್ಪಿಸಿದನು. ಆದರೆ ಆ ದೇವತೆಗಳ ದೆಸೆಯಿಂದ ಅವನಿಗೂ ಮತ್ತು ಎಲ್ಲಾ ಇಸ್ರಾಯೇಲರಿಗೂ ಕೇಡು ಉಂಟಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಹೇಗೆಂದರೆ, ‘ಸಿರಿಯಾ ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿವೆ; ಅಂತೆಯೇ ನಾನೂ ಅವುಗಳಿಗೆ ಬಲಿಸಮರ್ಪಿಸಿದರೆ ನನಗೂ ಜಯವಾಗುವುದು’, ಎಂದುಕೊಂಡನು; ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಬಲಿಕೊಟ್ಟನು. ಆದರೆ ಆ ದೇವತೆಗಳಿಂದ ಅವನಿಗೂ ಎಲ್ಲ ಇಸ್ರಯೇಲರಿಗೂ ಕೇಡು ಉಂಟಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಹೇಗಂದರೆ - ಅರಾಮ್‍ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿದವಲ್ಲಾ; ನಾನೂ ಅವುಗಳಿಗೆ ಯಜ್ಞಸಮರ್ಪಿಸುವೆನು, ಆಗ ನನಗೂ ಜಯವಾಗುವದು ಎಂದುಕೊಂಡು ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಯಜ್ಞಸಮರ್ಪಿಸುವವನಾದನು. ಆ ದೇವತೆಗಳ ದೆಸೆಯಿಂದ ಅವನಿಗೂ ಎಲ್ಲಾ ಇಸ್ರಾಯೇಲ್ಯರಿಗೂ ಕೇಡುಂಟಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಕೊನೆಗೆ ಆಹಾಜನು, “ಅರಾಮಿನ ಅರಸರ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ, ಅವು ನನಗೆ ಸಹ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ,” ಎಂದುಕೊಂಡು ತನ್ನನ್ನು ಸೋಲಿಸಿದ ದಮಸ್ಕದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಆ ದೇವರುಗಳು ಅವನನ್ನೂ, ಸಮಸ್ತ ಇಸ್ರಾಯೇಲರನ್ನೂ ಬೀಳುವಂತೆ ಮಾಡಿದವು. ಅಧ್ಯಾಯವನ್ನು ನೋಡಿ |