2 ಪೂರ್ವಕಾಲ ವೃತ್ತಾಂತ 28:19 - ಪರಿಶುದ್ದ ಬೈಬಲ್19 ಅರಸನಾದ ಆಹಾಜನು ತನ್ನ ಜನರನ್ನು ಪಾಪಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ಯೆಹೋವನು ಯೆಹೂದ ದೇಶಕ್ಕೆ ಕಷ್ಟವನ್ನು ಕೊಟ್ಟನು. ಆಹಾಜನು ದೇವರಿಗೆ ದ್ರೋಹಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಯೆಹೂದ್ಯರನ್ನು ಅಧರ್ಮಕ್ಕೆ ಪ್ರೇರೇಪಿಸಿ ಯೆಹೋವನಿಗೆ ದ್ರೋಹಮಾಡಿದ ಇಸ್ರಾಯೇಲ್ ರಾಜನಾದ ಆಹಾಜನ ನಿಮಿತ್ತವಾಗಿ ಯೆಹೋವನು ಯೆಹೂದ್ಯರನ್ನು ಈ ಪ್ರಕಾರವಾಗಿ ತಗ್ಗಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಯೆಹೂದ್ಯರನ್ನು ಅಧರ್ಮಕ್ಕೆ ಪ್ರಚೋದಿಸಿ ಸರ್ವೇಶ್ವರನಿಗೆ ದ್ರೋಹಮಾಡಿದ ಇಸ್ರಯೇಲ ಅರಸ ಅಹಾಜನ ನಿಮಿತ್ತ ಸರ್ವೇಶ್ವರ ಯೆಹೂದ್ಯರನ್ನು ಈ ಪ್ರಕಾರ ತಗ್ಗಿಸಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಯೆಹೂದ್ಯರನ್ನು ಅಧರ್ಮಕ್ಕೆ ಪ್ರೇರಿಸಿ ಯೆಹೋವನಿಗೆ ದ್ರೋಹಮಾಡಿದ ಇಸ್ರಾಯೇಲ್‍ರಾಜನಾದ ಆಹಾಜನ ನಿವಿುತ್ತವಾಗಿ ಯೆಹೋವನು ಯೆಹೂದ್ಯರನ್ನು ಈ ಪ್ರಕಾರ ತಗ್ಗಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಇಸ್ರಾಯೇಲಿನ ಅರಸನಾದ ಆಹಾಜನ ನಿಮಿತ್ತ ಯೆಹೋವ ದೇವರು ಯೆಹೂದ್ಯ ಪ್ರಾಂತ್ಯವನ್ನು ತಗ್ಗಿಸಿದರು. ಏಕೆಂದರೆ ಅವನು ಯೆಹೂದ್ಯರನ್ನು ಅಧರ್ಮಕ್ಕೆ ಪ್ರಚೋದಿಸಿ, ಯೆಹೋವ ದೇವರಿಗೆ ಮಹಾ ದ್ರೋಹ ಮಾಡಿದನು. ಯೆಹೋವ ದೇವರಿಗೆ ಅತ್ಯಂತ ಅಪನಂಬಿಗಸ್ತನಾಗಿದ್ದನು. ಅಧ್ಯಾಯವನ್ನು ನೋಡಿ |
ಯಾಕೆಂದರೆ ನೀವು ಒಮ್ರಿಯ ಆಜ್ಞೆಯನ್ನು ಪರಿಪಾಲಿಸಿದಿರಿ. ಅಹಾಬನ ಮನೆಯವರು ಮಾಡುತ್ತಿದ್ದ ದುಷ್ಕೃತ್ಯಗಳನ್ನು ನೀವು ಮಾಡುತ್ತೀರಿ. ನೀವು ಅವರ ಬೋಧನೆಯನ್ನು ಅನುಸರಿಸುತ್ತೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ಕೆಡವಲ್ಪಟ್ಟ ನಿಮ್ಮ ನಗರವನ್ನು ನೋಡಿದ ಜನರು ಆಶ್ಚರ್ಯದಿಂದ ಸಿಳ್ಳುಹಾಕುವರು. ಆಗ ಬೇರೆ ಜನಾಂಗದವರು ನಿಮ್ಮ ಮೇಲೆ ಹೊರಿಸಿದ ಅವಮಾನವನ್ನು ನೀವು ಸಹಿಸಿಕೊಳ್ಳುವಿರಿ.”