2 ಪೂರ್ವಕಾಲ ವೃತ್ತಾಂತ 28:12 - ಪರಿಶುದ್ದ ಬೈಬಲ್12 ಆಗ ಇಸ್ರೇಲರ ಸೈನಿಕರು ತಮ್ಮ ಮನೆಗೆ ಯುದ್ಧದಿಂದ ಹಿಂತಿರುಗುವುದನ್ನು ಎಫ್ರಾಯೀಮಿನ ಕೆಲವು ನಾಯಕರು ನೋಡಿದರು. ಆ ನಾಯಕರು ಅವರನ್ನು ಎಚ್ಚರಿಸಿದರು. ಆ ನಾಯಕರುಗಳು ಯಾರೆಂದರೆ: ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರೆಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ ಮತ್ತು ಹೆದ್ಲ್ಯೆಯನ ಮಗನಾದ ಅಮಾಸ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ, ಹದ್ಲೈಯನ ಮಗನಾದ ಅಮಾಸ ಎಂಬುವವರು ಯುದ್ಧದಿಂದ ಬರುವವರ ಮುಂದೆ ನಿಂತು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಆಗ ಎಫ್ರಯಿಮರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗ ಅಜರ್ಯ, ಮೆಷಿಲ್ಲೇಮೋತನ ಮಗ ಬೆರೆಕ್ಯ, ಶಲ್ಲೂಮನ ಮಗ ಹಿಜ್ಕೀಯ, ಹದ್ಲೈಯನ ಮಗ ಅಮಾಸ ಎಂಬವರು ಯುದ್ಧದಿಂದ ಬರುತ್ತಿದ್ದವರ ಮುಂದೆ ನಿಂತು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರೆಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ, ಹದ್ಲೈಯನ ಮಗನಾದ ಅಮಾಸ ಎಂಬವರು ಯುದ್ಧದಿಂದ ಬರುವವರ ಮುಂದೆ ನಿಂತು ಅವರಿಗೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗ ಅಜರ್ಯನೂ, ಮೆಷಿಲ್ಲೇಮೋತನ ಮಗ ಬೆರೆಕ್ಯನೂ, ಶಲ್ಲೂಮನ ಮಗ ಹಿಜ್ಕೀಯನೂ, ಹದ್ಲೈಯನ ಮಗ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧವಾಗಿ ಎದ್ದು ಅಧ್ಯಾಯವನ್ನು ನೋಡಿ |
ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.
ಆ ನಾಯಕರುಗಳು ಎದ್ದು ಸೆರೆಯವರಿಗೆ ಸಹಾಯ ಮಾಡಿದರು. ಇಸ್ರೇಲ್ ಸೈನಿಕರು ಸೂರೆಮಾಡಿದ ಬಟ್ಟೆಬರೆಗಳನ್ನು ಈ ನಾಯಕರು ಪಡೆದುಕೊಂಡು ಬೆತ್ತಲೆಯಾಗಿದ್ದ ಸೆರೆಯವರಿಗೆ ಕೊಟ್ಟರು. ಅವರ ಕಾಲಿಗೆ ಕೆರಗಳನ್ನು ಕೊಟ್ಟು, ಊಟೋಪಚಾರಗಳಿಂದ ಸತ್ಕರಿಸಿದರು. ಗಾಯಗೊಂಡವರಿಗೆ ಎಣ್ಣೆ ಹಚ್ಚಿ ಅವರಲ್ಲಿದ್ದ ಬಲಹೀನರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಜೆರಿಕೊವಿನಲ್ಲಿದ್ದ ಅವರವರ ಮನೆಗಳಿಗೆ ಕರೆದುಕೊಂಡು ಹೋದರು. ಜೆರಿಕೊವಿಗೆ “ಖರ್ಜೂರ ಮರಗಳ ಊರು” ಎಂಬ ಹೆಸರಿದೆ. ಅನಂತರ ಆ ನಾಲ್ಕು ಮಂದಿ ನಾಯಕರು ಸಮಾರ್ಯದಲ್ಲಿದ್ದ ತಮ್ಮ ಮನೆಗೆ ಹೋದರು.