Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 25:27 - ಪರಿಶುದ್ದ ಬೈಬಲ್‌

27 ಅಮಚ್ಯನು ದೇವರಾದ ಯೆಹೋವನನ್ನು ಆರಾಧಿಸುವದನ್ನು ಬಿಟ್ಟದ್ದಕ್ಕಾಗಿ ಜೆರುಸಲೇಮಿನ ಜನರು ಅವನನ್ನು ಕೊಲ್ಲಲು ಸಂಚುಮಾಡಿದರು. ಆಗ ಅವನು ಲಾಕೀಷಿಗೆ ಓಡಿಹೋದನು. ಆದರೆ ಜನರು ಕೆಲವರನ್ನು ಕಳುಹಿಸಿ ಅಲ್ಲಿಯೇ ಅವನನ್ನು ಕೊಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅಮಚ್ಯನು ಯೆಹೋವನನ್ನು ತ್ಯಜಿಸಿದ್ದರಿಂದ ಯೆರೂಸಲೇಮಿನವರು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡುತ್ತಿದ್ದರು. ಆದ್ದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅಮಚ್ಯನು ಸರ್ವೇಶ್ವರನ ಭಕ್ತಿಯನ್ನು ಬಿಟ್ಟಂದಿನಿಂದ ಜೆರುಸಲೇಮಿನವರು ಅವನಿಗೆ ವಿರುದ್ಧ ಒಳಸಂಚು ಮಾಡುತ್ತಿದ್ದರು. ಆದುದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅಮಚ್ಯನು ಯೆಹೋವ ಭಕ್ತಿಯನ್ನು ಬಿಟ್ಟಂದಿನಿಂದ ಯೆರೂಸಲೇವಿುನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡುತ್ತಿದ್ದರು. ಆದದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅಮಚ್ಯನು ಯೆಹೋವ ದೇವರ ಕಡೆಯಿಂದ ತೊಲಗಿಹೋದ ತರುವಾಯ, ಯೆರೂಸಲೇಮಿನವರು ಅವನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 25:27
10 ತಿಳಿವುಗಳ ಹೋಲಿಕೆ  

ಅರಾಮ್ಯರು ಯೆಹೋವಾಷನನ್ನು ಬಿಟ್ಟುಹೋಗುವಾಗ ಅವನು ರೋಗದಿಂದ ಬಹಳ ಅಸ್ವಸ್ಥನಾಗಿದ್ದನು. ಅವನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಸಂಚು ಮಾಡಿದರು. ಯಾಕೆಂದರೆ ಅವನು ಯೆಹೋಯಾದನ ಮಗನಾದ ಜೆಕರ್ಯನನ್ನು ಕೊಂದದ್ದರಿಂದ ಸೇವಕರು ಯೆಹೋವಾಷನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದರು. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ಅರಸರುಗಳ ಸಮಾಧಿಯಲ್ಲಿ ಹೂಳಿಡಲಿಲ್ಲ.


ಜನರು ಜೆರುಸಲೇಮಿನಲ್ಲಿ ಅಮಚ್ಯನ ವಿರುದ್ಧವಾಗಿ ಒಳಸಂಚು ಮಾಡಿದರು. ಅಮಚ್ಯನು ಲಾಕೀಷಿಗೆ ಓಡಿಹೋದನು. ಆದರೆ ಜನರು ಅಮಚ್ಯನ ಹಿಂದೆ ಲಾಕೀಷಿಗೆ ಆಳುಗಳನ್ನು ಕಳುಹಿಸಿದರು. ಅವರು ಲಾಕೀಷಿನಲ್ಲಿ ಅಮಚ್ಯನನ್ನು ಕೊಂದುಹಾಕಿದರು.


ಆಮೇಲೆ ಯೆಹೋಶುವನು ಮತ್ತು ಇಸ್ರೇಲರೆಲ್ಲರು ಲಿಬ್ನವನ್ನು ಬಿಟ್ಟು ಲಾಕೀಷಿಗೆ ಹೋದರು. ಯೆಹೋಶುವನು ಮತ್ತು ಅವನ ಜನರು ಲಾಕೀಷಿಗೆ ಮುತ್ತಿಗೆಹಾಕಿ ಅದರ ಮೇಲೆ ಧಾಳಿಮಾಡಿದರು.


ಅಮಚ್ಯನ ಬೇರೆ ಕಾರ್ಯಗಳು ಅಂದರೆ ಆರಂಭದಿಂದ ಕೊನೆಯವರೆಗಿನ ಕಾರ್ಯಗಳನ್ನು ಯೆಹೂದದ ಮತ್ತು ಇಸ್ರೇಲಿನ ರಾಜರ ಗ್ರಂಥದಲ್ಲಿ ಬರೆಯಲಾಗಿದೆ.


ಅವನ ಜನರು ಆ ಶವವನ್ನು ಕುದುರೆಯ ಬೆನ್ನಿನ ಮೇಲೆ ಹೊರಿಸಿ ತಂದು ಯೆಹೂದದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು.


ಅಮೋನನ ಸೇವಕರು ಸಂಚುಮಾಡಿ ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು.


ಈ ಹತ್ತು ಮಂದಿ ಗಿಲ್ಯಾದಿಗೆ ಹೋಗಿ ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಜೊತೆಗೆ ಮಾತನಾಡಿ ಹೀಗೆಂದರು:


ಆ ಬಳಿಕ ಯೇಹು ಅಹಜ್ಯನಿಗಾಗಿ ಹುಡುಕಿದನು. ಅಹಜ್ಯನು ಸಮಾರ್ಯದಲ್ಲಿ ಅವಿತುಕೊಂಡಿರುವದನ್ನು ಕಂಡ ಯೇಹುವಿನ ಸಂಗಡಿಗರು ಅವನನ್ನು ಹಿಡಿದು ಯೇಹುವಿನ ಬಳಿಗೆ ತಂದರು. ಅಲ್ಲಿ ಅಹಜ್ಯನನ್ನು ಕೊಂದು ಅವನ ದೇಹವನ್ನು ಹೂಳಿಟ್ಟರು. ಅವರು, “ಅಹಜ್ಯನು ಯೆಹೋಷಾಫಾಟನ ಸಂತತಿಯವನಾಗಿದ್ದನು. ಯೆಹೋಷಾಫಾಟನು ತನ್ನ ಪೂರ್ಣಹೃದಯದಿಂದ ಯೆಹೋವನನ್ನು ಹಿಂಬಾಲಿಸಿದನಲ್ಲವೇ?” ಎಂದು ಹೇಳಿದರು. ಯೆಹೂದ ಸಾಮ್ರಾಜ್ಯವನ್ನು ಒಂದಾಗಿಡಲು ಅಹಜ್ಯನ ಕುಟುಂಬಕ್ಕೆ ಶಕ್ತಿಯಿರಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು