Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 23:16 - ಪರಿಶುದ್ದ ಬೈಬಲ್‌

16 ಅನಂತರ ಯೆಹೋಯಾದನು ಅರಸನೊಂದಿಗೂ ನೆರೆದು ಬಂದಿದ್ದ ಎಲ್ಲಾ ಜನರೊಂದಿಗೂ ಒಪ್ಪಂದವನ್ನು ಮಾಡಿಕೊಂಡನು. ಅವರೆಲ್ಲರೂ ಯೆಹೋವನ ಜನರಾಗಿ ಜೀವಿಸುವದಕ್ಕೆ ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆ ನಂತರ ಯೆಹೋಯಾದನು ಎಲ್ಲಾ ಜನರನ್ನೂ, ಅರಸನನ್ನೂ ಪ್ರೇರೇಪಿಸಿ ತಾವೆಲ್ಲರೂ ಯೆಹೋವನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅನಂತರ ಯೆಹೋಯಾದನು ಎಲ್ಲ ಜನರನ್ನೂ ಅರಸನನ್ನೂ ಪ್ರೇರಿಸಿ ತಾವೆಲ್ಲರೂ ಸರ್ವೇಶ್ವರನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅನಂತರ ಯೆಹೋಯಾದನು ಎಲ್ಲಾ ಜನರನ್ನೂ ಅರಸನನ್ನೂ ಪ್ರೇರಿಸಿ ತಾವೆಲ್ಲರೂ ಯೆಹೋವನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ತನಗೂ, ಸಮಸ್ತ ಜನರಿಗೂ, ಅರಸನಿಗೂ ಒಡಂಬಡಿಕೆ ಮಾಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 23:16
15 ತಿಳಿವುಗಳ ಹೋಲಿಕೆ  

“ಈ ಕಾರಣಗಳಿಂದ ಶಾಶ್ವತವಾದ ಒಡಂಬಡಿಕೆಯನ್ನು ನಾವು ನಿನ್ನೊಂದಿಗೆ ಮಾಡುತ್ತೇವೆ. ಆ ಒಡಂಬಡಿಕೆಯನ್ನು ನಾವು ಬರವಣಿಗೆಯಲ್ಲಿ ಮಾಡುತ್ತೇವೆ. ನಮ್ಮ ನಾಯಕರೂ, ಯಾಜಕರೂ, ಲೇವಿಯರೂ ಅದಕ್ಕೆ ಸಹಿ ಮಾಡುವರು ಮತ್ತು ಅದಕ್ಕೆ ಮುದ್ರೆಯನ್ನು ಹಾಕುವರು.”


ಆದ್ದರಿಂದ ಹಿಜ್ಕೀಯನಾದ ನಾನು ಇಸ್ರೇಲರ ದೇವರಾದ ಯೆಹೋವನೊಂದಿಗೆ ಒಡಂಬಡಿಕೆ ಮಾಡುತ್ತೇನೆ. ಆತನು ಇನ್ನು ಮುಂದೆ ನಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ.


ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಆತನಿಗೆ ಪ್ರಮಾಣಮಾಡಿದರು.


“ಒಬ್ಬನು: ‘ನಾನು ಯೆಹೋವನಿಗೆ ಸೇರಿದವನು’ ಎಂದು ಹೇಳುತ್ತಾನೆ. ಇನ್ನೊಬ್ಬನು ಯಾಕೋಬನ ಹೆಸರನ್ನು ಬಳಸುವನು. ಮತ್ತೊಬ್ಬನು, ‘ನಾನು ಯೆಹೋವನವನು’ ಎಂದು ಸಹಿ ಹಾಕುವನು. ಮತ್ತೊಬ್ಬನು, ನಾನು ‘ಇಸ್ರೇಲನು’ ಎಂಬ ಹೆಸರನ್ನು ಬಳಸಿಕೊಳ್ಳುವನು.”


ಈಗ ನಾವು ದೇವರ ಮುಂದೆ ಅನ್ಯರಾದ ಹೆಂಡತಿಯರನ್ನೂ ಅವರ ಮಕ್ಕಳನ್ನೂ ತೊರೆದುಬಿಡುತ್ತೇವೆಂದು ಒಡಂಬಡಿಕೆ ಮಾಡೋಣ. ಹೀಗೆ ಮಾಡುವುದರಿಂದ ಎಜ್ರನ ಮತ್ತು ದೇವರ ಕಟ್ಟಳೆಗಳನ್ನು ಗೌರವಿಸುವವರ ಸಲಹೆಯನ್ನು ನಾವು ಅನುಸರಿಸುವವರಾಗಿರುತ್ತೇವೆ; ನಾವು ದೇವರ ಕಟ್ಟಳೆಗೆ ವಿಧೇಯರಾಗುತ್ತೇವೆ.


ಆಮೇಲೆ ಆಸನೂ ಅವನ ಜನರೂ ದೇವರಿಗೆ ಪ್ರಮಾಣಮಾಡಿ ಸಂತೋಷದಿಂದ ಹರ್ಷಧ್ವನಿ ಮಾಡಿದರು. ಅಲ್ಲದೆ ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿದರು.


ತಮ್ಮ ಪೂರ್ವಿಕರು ಸೇವೆಮಾಡಿದ ದೇವರೊಂದಿಗೆ ಅಲ್ಲಿ ಅವರು ಒಡಂಬಡಿಕೆ ಮಾಡಿಕೊಂಡು ತಾವು ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಆತನ ಸೇವೆ ಮಾಡುವುದಾಗಿ ಪ್ರಮಾಣಮಾಡಿದರು.


ಯೆಹೂದದ ಎಲ್ಲಾ ಜನರು ತಾವು ಯೆಹೋವನಿಗೆ ಮಾಡಿದ ಪ್ರಮಾಣದ ನಿಮಿತ್ತ ಸಂತೋಷಪಟ್ಟರು. ಯಾಕೆಂದರೆ ಅವರು ತಮ್ಮ ಪೂರ್ಣ ಹೃದಯದಿಂದ ಪ್ರಮಾಣಮಾಡಿದ್ದರು. ಅವರು ಯೆಹೋವನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಪ್ರಸನ್ನನಾಗಿ ಅವರಿಗೆ ಸಮಾಧಾನವನ್ನು ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು