Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 20:19 - ಪರಿಶುದ್ದ ಬೈಬಲ್‌

19 ಕೆಹಾತ್ಯನ ಕುಲದವರಾದ ಲೇವಿಯರೂ ಕೋರಹನ ವಂಶದವರೂ ಎದ್ದುನಿಂತು ಇಸ್ರೇಲ್ ದೇವರಾದ ಯೆಹೋವನಿಗೆ ಗಟ್ಟಿಯಾದ ಸ್ವರದಿಂದ ಸ್ತುತಿಗೀತೆ ಹಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ, ಕೋರಹಿಯರೂ ಎದ್ದು, ಇಸ್ರಾಯೇಲ್ ದೇವರಾದ ಯೆಹೋವನನ್ನು ಮಹಾಸ್ವರದಿಂದ ಕೀರ್ತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ ಕೋರಹಿಯರೂ ಎದ್ದು, ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಮಹಾಸ್ವರದಿಂದ ಕೀರ್ತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ ಕೋರಹಿಯರೂ ಎದ್ದು ಇಸ್ರಾಯೇಲ್‍ದೇವರಾದ ಯೆಹೋವನನ್ನು ಮಹಾಸ್ವರದಿಂದ ಕೀರ್ತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಇದಲ್ಲದೆ ಕೊಹಾತ್ಯರ ಮಕ್ಕಳಲ್ಲಿಯೂ, ಕೋರಹೀಯರ ಮಕ್ಕಳಲ್ಲಿರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ತುತಿಸಲು ಎದ್ದು ನಿಂತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 20:19
16 ತಿಳಿವುಗಳ ಹೋಲಿಕೆ  

ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅವುಗಳನ್ನು ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು” ಅಂದನು.


ಮೊದಲನೇ ಗುಂಪಿನ ಗಾಯಕರಿಗೆ ಆಸಾಫನು ಮುಖಂಡನಾಗಿದ್ದನು. ಆಸಾಫನ ಗುಂಪಿನವರು ತಾಳ ಬಾರಿಸಿದರು. ಜೆಕರ್ಯನು ಎರಡನೇ ಗುಂಪಿನ ನಾಯಕನು. ಬೇರೆ ಲೇವಿಯರು ಯಾರೆಂದರೆ: ಉಜ್ಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರು ಲೈರ್ ಮತ್ತು ಹಾರ್ಪ್ ವಾದ್ಯಗಳನ್ನು ಬಾರಿಸಿದರು.


ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ. ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.


ಸರ್ವಜನಾಂಗಗಳೇ, ಕೇಳಿರಿ, ಭೂನಿವಾಸಿಗಳೆಲ್ಲರೇ, ಆಲಿಸಿರಿ.


ದೇವರೇ, ಪೂರ್ವಕಾಲದಲ್ಲಿ ನೀನು ಮಾಡಿದ ಮಹತ್ಕಾರ್ಯಗಳ ಕುರಿತು ಕೇಳಿದ್ದೇವೆ. ಅವುಗಳ ಕುರಿತು ನಮ್ಮ ಪೂರ್ವಿಕರೇ ನಮಗೆ ತಿಳಿಸಿದರು.


ಗಾಯಕರ ಸ್ವರವೂ ತುತ್ತೂರಿಗಳ ಶಬ್ದವೂ ಒಬ್ಬನದೆಯೋ ಎಂಬಂತೆ ತೋರಿಬಂತು. ಅವರು ದೇವರನ್ನು ಸ್ತುತಿಸಿ ಕೊಂಡಾಡಿದಾಗ ಒಂದೇ ಶಬ್ದವು ಹೊರಟಿತ್ತು. ಅವರು ತಮ್ಮ ತಾಳ, ತಂತಿವಾದ್ಯಗಳನ್ನು ಗಟ್ಟಿಯಾಗಿ ಬಾರಿಸಿದರು. “ಯೆಹೋವನಿಗೆ ಸ್ತೋತ್ರವಾಗಲಿ; ಆತನು ಒಳ್ಳೆಯವನು; ಆತನ ಪ್ರೀತಿಯು ಶಾಶ್ವತವಾದದ್ದು” ಎಂದು ಗಾಯಕರು ಹಾಡಿದರು. ಆಗ ದೇವಾಲಯವು ಯೆಹೋವನ ತೇಜಸ್ಸಿನಿಂದ ಕೂಡಿದ ಮೋಡದಿಂದ ತುಂಬಿಹೋಯಿತು.


ಕೋರಹನ ಗಂಡುಮಕ್ಕಳು: ಅಸ್ಸೀರ್, ಎಲ್ಕಾನಾ ಮತ್ತು ಅಬೀಯಾಸಾಫ್. ಇವರೇ ಕೋರಹನ ಕುಲಗಳು.


ಯೆಹೋಷಾಫಾಟನು ನೆಲದ ಮೇಲೆ ಸಾಷ್ಟಾಂಗನಮಸ್ಕಾರ ಮಾಡಿದನು. ಹಾಗೆಯೇ, ನೆರೆದಿದ್ದ ಜನರೆಲ್ಲರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು.


ಮರುದಿನ ಮುಂಜಾನೆ ಯೆಹೋಷಾಫಾಟನ ಸೈನ್ಯವು ತೆಕೋವದ ಅರಣ್ಯಕ್ಕೆ ಹೊರಟಿತು. ಅವರು ಹೊರಡುವ ಮುಂಚೆ ಯೆಹೋಷಾಫಾಟನು ಎದ್ದುನಿಂತು, “ಜೆರುಸಲೇಮಿನವರೇ, ಯೆಹೂದ ಪ್ರಾಂತ್ಯದವರೇ, ನನ್ನ ಮಾತನ್ನು ಕೇಳಿರಿ. ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಡಿರಿ. ಆಗ ನೀವು ಸ್ಥಿರಗೊಳ್ಳುವಿರಿ. ಯೆಹೋವನ ಪ್ರವಾದಿಗಳ ಮೇಲೆ ಭರವಸವಿಡಿರಿ; ಆಗ ನೀವು ಜಯಗಳಿಸುವಿರಿ” ಎಂದು ಹೇಳಿದನು.


ಆಮೇಲೆ ಲೇವಿಯರಾದ ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ ಮತ್ತು ಕೆನಾನೀ ಎಂಬವರು ಮೆಟ್ಟಿಲ ಮೇಲೆ ನಿಂತುಕೊಂಡು ಗಟ್ಟಿಯಾದ ಸ್ವರದಲ್ಲಿ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು