Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 2:2 - ಪರಿಶುದ್ದ ಬೈಬಲ್‌

2 ಅದಕ್ಕಾಗಿ ಎಪ್ಪತ್ತು ಸಾವಿರ ಮಂದಿ ಕೆಲಸಗಾರರನ್ನೂ ಬೆಟ್ಟದ ಮೇಲೆ ನಡಿಯುತ್ತಿರುವ ಕಲ್ಲಿನ ಕೆಲಸಕ್ಕಾಗಿ ಎಂಭತ್ತು ಸಾವಿರ ಮಂದಿ ಕಲ್ಲುಕುಟಿಕರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅದಕ್ಕಾಗಿ ಹೊರೆ ಹೊರುವ ಎಪ್ಪತ್ತು ಸಾವಿರ ಜನರನ್ನು, ಎಂಭತ್ತು ಸಾವಿರ ಜನರು ಕಲ್ಲುಗಣಿಗಳಲ್ಲಿ ಕೆಲಸ ಮಾಡುವವರನ್ನು, ಇವರ ಮೇಲ್ವೀಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಲ್ವೀಚಾರಕರನ್ನು ಸೊಲೊಮೋನನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಇಪ್ಪತ್ತು ಸಾವಿರ ಮಂದಿ ಹೊರೆಹೊರುವವರೂ ಎಂಬತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಸ್ತ್ರಿಗಳನ್ನೂ ಎಣಿಸಿ ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಎಪ್ಪತ್ತುಸಾವಿರ ಮಂದಿ ಹೊರೆಹೊರುವವರನ್ನೂ ಎಂಭತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರು ನೂರು ಮಂದಿ ಮೇಸ್ತ್ರಿಗಳನ್ನೂ ಲೆಕ್ಕಿಸಿ ನೇವಿುಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅದಕ್ಕಾಗಿ 70,000 ಹೊರುವವರನ್ನೂ, 80,000 ಬೆಟ್ಟದಲ್ಲಿ ಕಡಿಯುವವರನ್ನೂ, ಇವರ ಮೇಲೆ ಕಾವಲಾಗಿರಲು 3,600 ಮಂದಿಯನ್ನೂ ಆಯ್ಕೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 2:2
4 ತಿಳಿವುಗಳ ಹೋಲಿಕೆ  

ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಸೊಲೊಮೋನನು ಹೊರೆಹೊರುವದಕ್ಕಾಗಿ ನೇಮಿಸಿದನು; ಎಂಭತ್ತುಸಾವಿರ ಮಂದಿಯನ್ನು ಬೆಟ್ಟಗಳಲ್ಲಿ ಕಲ್ಲಿನ ಕೆಲಸಮಾಡಲು ನೇಮಿಸಿದನು; ಮೂರು ಸಾವಿರದ ಆರುನೂರು ಮಂದಿಯನ್ನು ಕಾರ್ಮಿಕರ ಮೇಲ್ವಿಚಾರಣೆಗೋಸ್ಕರ ನೇಮಿಸಿದನು.


ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ.


ತೂರ್ ಪಟ್ಟಣದ ರಾಜನಾದ ಹೀರಾಮನು ದಾವೀದನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. ಇವರೊಂದಿಗೆ ದೇವದಾರು ಮರದ ತೊಲೆಗಳನ್ನು, ಕಲ್ಲುಕುಟಿಗರನ್ನು ಮತ್ತು ಬಡಗಿಯರನ್ನು ಕಳುಹಿಸಿದನು. ದಾವೀದನಿಗೊಂದು ಮನೆಯನ್ನು ಕಟ್ಟಲು ಇವರನ್ನು ಕಳುಹಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು