2 ಪೂರ್ವಕಾಲ ವೃತ್ತಾಂತ 17:1 - ಪರಿಶುದ್ದ ಬೈಬಲ್1 ಆಸನ ಮಗನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದನು. ಅವನು ತನ್ನ ರಾಜ್ಯವನ್ನು ಬಲಪಡಿಸಿ ಇಸ್ರೇಲರಿಂದ ತನಗೆ ಅಪಾಯವಾಗದಂತೆ ಸುರಕ್ಷೆಯ ವ್ಯವಸ್ಥೆ ಮಾಡಿಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆಸನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು. ಅವನು ಇಸ್ರಾಯೇಲರೆದುರು ಪ್ರಬಲನಾಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಆಸನಿಗೆ ಅನಂತರ ಅವನ ಮಗ ಯೇಹೋಷಾಫಾಟನು ಅರಸನಾದನು. ಇಸ್ರಯೇಲರಿಂದ ಅಪಾಯವಾಗದಂತೆ ಇವನು ತನ್ನನ್ನೇ ಭದ್ರಪಡಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಅವನಿಗೆ ಬದಲಾಗಿ ಅವನ ಮಗನಾದ ಯೆಹೋಷಾಫಾಟನು ಅರಸನಾಗಿ ಇಸ್ರಾಯೇಲ್ಯರಿಂದ ಅಪಾಯವಾಗದಂತೆ ತನ್ನನ್ನು ಭದ್ರಪಡಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು. ಅಧ್ಯಾಯವನ್ನು ನೋಡಿ |