2 ಪೂರ್ವಕಾಲ ವೃತ್ತಾಂತ 16:8 - ಪರಿಶುದ್ದ ಬೈಬಲ್8 ಇಥಿಯೋಪಿಯಾದವರಿಗೆ ಮತ್ತು ಲಿಬ್ಯದವರಿಗೆ ಮಹಾದೊಡ್ಡ ಸೈನ್ಯವಿತ್ತು. ಅಪರಿಮಿತವಾದ ರಥಾಶ್ವಗಳಿದ್ದವು. ಆದರೆ ಅವರನ್ನು ಸೋಲಿಸುವಂತೆ ಯೆಹೋವನು ನಿನಗೆ ಸಹಾಯಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಕೂಷ್ಯ ಹಾಗೂ ಲೂಬ್ಯರ ಸೈನ್ಯವು ಅಪರಿಮಿತ ರಥಾಶ್ವಬಲಗಳುಳ್ಳ ಮಹಾಸೈನ್ಯವಲ್ಲವೇ? ನೀನು ಯೆಹೋವನನ್ನು ಆಶ್ರಯಿಸಿಕೊಂಡದ್ದರಿಂದ ಆತನು ಅದನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಸುದಾನ್ ಹಾಗೂ ಲಿಬಿಯರ ಸೈನ್ಯ ಅಪರಿಮಿತ ರಥಾಶ್ವಬಲಗಳುಳ್ಳ ಮಹಾ ಸೈನ್ಯವಲ್ಲವೇ? ನೀವು ಸರ್ವೇಶ್ವರನನ್ನು ಆಶ್ರಯಿಸಿಕೊಂಡದ್ದರಿಂದ ಅವರು ಅದನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಕೂಷ್ಯಲೂಬ್ಯರ ಸೈನ್ಯವು ಅಪರಿವಿುತ ರಥಾಶ್ವಬಲಗಳುಳ್ಳ ಮಹಾಸೈನ್ಯವಲ್ಲವೋ! ನೀನು ಯೆಹೋವನ ಮೇಲೆ ಆತುಕೊಂಡದರಿಂದ ಆತನು ಅದನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಕೂಷನವರೂ, ಲಿಬಿಯದವರೂ ಮಹಾ ಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ, ರಾಹುತರೂ ಇದ್ದರಲ್ಲವೇ? ಆಗ ನೀನು ಯೆಹೋವ ದೇವರನ್ನು ಆತುಕೊಂಡದ್ದರಿಂದ ದೇವರು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದರು. ಅಧ್ಯಾಯವನ್ನು ನೋಡಿ |
ಆ ದೇಶದವರು ಬೆಂಡಿನ ದೋಣಿಗಳಲ್ಲಿ ಜನರನ್ನು ಸಮುದ್ರದಾಚೆ ಕಳುಹಿಸುವರು. ವೇಗವುಳ್ಳ ದೂತರೇ, ಉನ್ನತವಾಗಿಯೂ ಬಲಶಾಲಿಗಳಾಗಿಯೂ ಇರುವ ಜನರ ಬಳಿಗೆ ಹೋಗಿರಿ. ಎಲ್ಲಾ ದೇಶಗಳವರು ಉನ್ನತರಾದ ಬಲಶಾಲಿಗಳಾದ ಜನರಿಗೆ ಭಯಪಡುತ್ತಾರೆ. ಅವರು ಬಲಾಢ್ಯ ಜನಾಂಗ. ಅವರ ಜನಾಂಗವು ಬೇರೆ ಜನಾಂಗಗಳನ್ನು ಸೋಲಿಸಿಬಿಡುತ್ತದೆ. ಅವರ ದೇಶವು ನದಿಯ ಶಾಖೆಗಳಿಂದ ತುಂಬಿರುತ್ತದೆ. ಆ ಜನರಿಗೆ ಕೇಡು ಸಂಭವಿಸಲಿದೆ ಎಂಬ ಎಚ್ಚರಿಕೆಯನ್ನು ಕೊಡು. ಪ್ರಪಂಚದ ಎಲ್ಲಾ ಜನರು ಆ ದೇಶಕ್ಕೆ ಸಂಭವಿಸುವದನ್ನು ನೋಡುವರು.