2 ಪೂರ್ವಕಾಲ ವೃತ್ತಾಂತ 16:10 - ಪರಿಶುದ್ದ ಬೈಬಲ್10 ಇದನ್ನು ಕೇಳಿದ ಆಸನು ಹನಾನಿಯ ಮೇಲೆ ಬಹುಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಆಸನು ಅದೇ ಸಮಯದಲ್ಲಿ ದೇವಜನರಾದ ಕೆಲವರೊಂದಿಗೆ ಕ್ರೂರವಾಗಿ ವರ್ತಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಆಸನು ಈ ಮಾತುಗಳಿಂದ ಬೇಸರಗೊಂಡು, ದರ್ಶಕನ ಮೇಲೆ ಕೋಪಗೊಂಡು, ಅವನನ್ನು ಸೆರೆಮನೆಯಲ್ಲಿಡಿಸಿ ಕೋಳ ಹಾಕಿಸಿದನು. ಇದಲ್ಲದೆ, ಜನರಲ್ಲಿ ಕೆಲವರನ್ನು ಪೀಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಆಸನು ಈ ಮಾತುಗಳಿಂದ ಬೇಸರಗೊಂಡು, ದರ್ಶಿಯ ಮೇಲೆ ಕುಪಿತನಾಗಿ, ಅವನನ್ನು ಸೆರೆಮನೆಯಲ್ಲಿಡಿಸಿ ಕೋಳಹಾಕಿದನು. ಇದಲ್ಲದೆ, ಜನರಲ್ಲಿ ಕೆಲವರನ್ನು ಪೀಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಆಸನು ಈ ಮಾತುಗಳ ದೆಸೆಯಿಂದ ಬೇಸರಗೊಂಡು ದರ್ಶಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿಡಿಸಿ ಕೋಳಹಾಕಿಸಿದನು. ಇದಲ್ಲದೆ ಜನರಲ್ಲಿ ಕೆಲವರನ್ನು ಪೀಡಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಆಗ ಆಸನು ದರ್ಶಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಇದರ ನಿಮಿತ್ತ ಅವನ ಮೇಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವರನ್ನು ಬಾಧಿಸಿದನು. ಅಧ್ಯಾಯವನ್ನು ನೋಡಿ |
“ಹಿಂದಿನ ಕಾಲದಲ್ಲಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮ್ಮನ್ನು ಹಾಳುಮಾಡಿದನು; ನಮ್ಮನ್ನು ಹಿಂಸಿಸಿದನು; ನಮ್ಮ ಜನರನ್ನು ಸೆರೆ ಒಯ್ದನು. ಆಗ ನಾವು ಒಂದು ಬರಿದಾದ ಪಾತ್ರೆಯಂತಾದೆವು. ಅವನು ನಮ್ಮ ಎಲ್ಲಾ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಹೋದನು. ತನಗೆ ತೃಪ್ತಿಯಾಗುವವರೆಗೆ ಎಲ್ಲವನ್ನು ತಿಂದು ತೇಗಿದ ರಾಕ್ಷಸನಂತಿದ್ದನು. ಅವನು ನಮ್ಮೆಲ್ಲ ಉತ್ಕೃಷ್ಠ ವಸ್ತುಗಳನ್ನು ಕಿತ್ತುಕೊಂಡು ನಮ್ಮನ್ನು ದೂರ ಎಸೆದನು.
ಈಗ ನನ್ನ ಕೋಪದ ದೆಸೆಯಿಂದ ನಿನಗೆ ಹಾನಿ ಮಾಡಿದವರನ್ನು ಶಿಕ್ಷಿಸುವೆನು. ಅವರು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದರು. ‘ನಮ್ಮ ಮುಂದೆ ಸಾಷ್ಟಾಂಗಬೀಳು. ಆಗ ನಿನ್ನ ಮೇಲೆ ನಾವು ನಡೆಯುವೆವು’ ಎಂದು ಹೇಳಿದರು. ಅವರಿಗೆ ಅಡ್ಡಬೀಳಲು ನಿನ್ನನ್ನು ಬಲಾತ್ಕರಿಸಿದರು. ಆ ಬಳಿಕ ಅವರು ನೀನು ಮಣ್ಣಿನ ಧೂಳೋ ಎಂಬಂತೆ ನಿನ್ನ ಬೆನ್ನಿನ ಮೇಲೆ ನಡೆದಾಡಿದರು. ನೀನು ಅವರಿಗೆ ನಡೆಯಲು ಬೀದಿಯಾದಿ.”