2 ಪೂರ್ವಕಾಲ ವೃತ್ತಾಂತ 14:13 - ಪರಿಶುದ್ದ ಬೈಬಲ್13 ಆಸನ ಸೈನಿಕರು ಇಥಿಯೋಪಿಯಾದ ಸೈನ್ಯವನ್ನು ಗೆರಾರಿನ ತನಕ ಹಿಂದಟ್ಟಿಕೊಂಡು ಹೋದರು. ಅವರು ಮತ್ತೆ ಸೈನ್ಯವನ್ನು ಕಟ್ಟಿ ಯುದ್ಧಮಾಡಲು ಸಾಧ್ಯವಾಗದಷ್ಟು ಸೈನಿಕರು ಸತ್ತರು. ಅವರ ಬಲವನ್ನು ಮುರಿಯಲು ಯೆಹೋವನು ತನ್ನ ಸೈನ್ಯವನ್ನು ಬಳಸಿಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಕೂಷ್ಯರು ಸೋತು ಓಡಿಹೋದಾಗ ಆಸನೂ ಅವನ ಜನರೂ ಗೆರಾರಿನವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದರು; ಅವರಲ್ಲಿ ಯಾರೂ ಜೀವದಿಂದುಳಿಯಲಿಲ್ಲ. ಯೆಹೋವನ ಮತ್ತು ಆತನ ಸೈನ್ಯದ ಮುಂದೆ ನುಚ್ಚು ನೂರಾಗಿ ಹೋದರು. ಇಸ್ರಾಯೇಲರಿಗೆ ಅಪರಿಮಿತವಾದ ಕೊಳ್ಳೆ ಸಿಕ್ಕಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಅವರು ಸೋತು ಓಡಿಹೋದಾಗ ಆಸನೂ ಅವನ ಜನರೂ ಗೆರಾರಿನವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದರು. ಅವರಲ್ಲಿ ಯಾರೂ ಜೀವದಿಂದುಳಿಯಲಿಲ್ಲ. ಸರ್ವೇಶ್ವರನ ಮತ್ತು ಅವರ ಸೈನ್ಯದ ಮುಂದೆ ಸುಡಾನರು ಭಿನ್ನಭಿನ್ನರಾದರು. ಇಸ್ರಯೇಲರಿಗೆ ಅಪರಿಮಿತವಾದ ಕೊಳ್ಳೆಸಿಕ್ಕಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಕೂಷ್ಯರು ಓಡಿಹೋದಾಗ ಆಸನೂ ಅವನ ಜನರೂ ಗೆರಾರಿನವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದರು; ಅವರಲ್ಲಿ ಯಾರೂ ಜೀವದಿಂದುಳಿಯಲಿಲ್ಲ. ಯೆಹೋವನ ಮತ್ತು ಆತನ ಸೈನ್ಯದ ಮುಂದೆ ಚೂರು ಚೂರಾದರು. ಇಸ್ರಾಯೇಲ್ಯರಿಗೆ ಅಪರಿವಿುತವಾದ ಕೊಳ್ಳೆ ಸಿಕ್ಕಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಆಗ ಆಸನೂ, ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನವರೆಗೂ ಹಿಂದಟ್ಟಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೂಷ್ಯರು ಸೋತುಹೋದರು. ಅವರು ಯೆಹೋವ ದೇವರ ಮುಂದೆಯೂ, ಅವರ ಸೈನ್ಯದ ಮುಂದೆಯೂ ನಾಶವಾದರು. ಯೆಹೂದ್ಯರು ಬಹು ಕೊಳ್ಳೆಯನ್ನು ಒಯ್ದರು. ಅಧ್ಯಾಯವನ್ನು ನೋಡಿ |