13 ರಾಜನಾದ ರೆಹಬ್ಬಾಮನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡು ಬಲಗೊಂಡನು. ಅವನು ಪಟ್ಟಕ್ಕೆ ಬಂದಾಗ ನಲವತ್ತೊಂದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಯೆಹೋವನು ತಾನೇ ತನ್ನ ಹೆಸರನ್ನು ಸ್ಥಾಪಿಸುವದಕ್ಕೋಸ್ಕರ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಜೆರುಸಲೇಮನ್ನು ಆರಿಸಿಕೊಂಡಿದ್ದನು. ರೆಹಬ್ಬಾಮನ ತಾಯಿಯ ಹೆಸರು ನಯಮಾ. ಆಕೆ ಅಮ್ಮೋನ್ ದೇಶದವಳು.
13 ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಆಳುವವನಾದನು. ಅವನು ತನ್ನ ನಲ್ವತ್ತೊಂದನೆಯ ವರ್ಷ ತುಂಬಿದ ಮೇಲೆ ಪಟ್ಟಕ್ಕೆ ಬಂದು ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ.
13 ಅರಸ ರೆಹಬ್ಬಾಮನು ಜೆರುಸಲೇಮಿನಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಪಟ್ಟಕ್ಕೆ ಬಂದದ್ದು ತನ್ನ ನಲವತ್ತೊಂದನೆಯ ವರ್ಷದಲ್ಲಿ. ಸರ್ವೇಶ್ವರ ಎಲ್ಲಾ ಕುಲಪ್ರಾಂತ್ಯಗಳಿಂದ ತಮ್ಮ ಹೆಸರಿಗಾಗಿ ಆರಿಸಿಕೊಂಡ ಜೆರುಸಲೇಮಿನಲ್ಲಿ ಅವನು ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ನಯಮಾ ಎಂಬಾಕೆ ಅವನ ತಾಯಿ.
13 ಅರಸನಾದ ರೆಹಬ್ಬಾಮನು ಯೆರೂಸಲೇವಿುನಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಆಳುವವನಾದನು. ಅವನು ತನ್ನ ನಾಲ್ವತ್ತೊಂದನೆಯ ವರುಷ ತುಂಬಿದ ಮೇಲೆ ಪಟ್ಟಕ್ಕೆ ಬಂದು ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲ್ಯರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇವಿುನಲ್ಲಿ ಹದಿನೇಳು ವರುಷ ಆಳಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ.
13 ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನನ್ನು ಬಲಪಡಿಸಿಕೊಂಡು ರಾಜ್ಯವನ್ನು ಆಳಿದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ.
ಆ ಕಾಲದಲ್ಲಿ ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ರಾಜನಾಗಿದ್ದನು. ಅವನು ರಾಜನಾದಾಗ ಅವನಿಗೆ ನಲವತ್ತೊಂದು ವರ್ಷ ವಯಸ್ಸಾಗಿತ್ತು. ರೆಹಬ್ಬಾಮನು ಜೆರುಸಲೇಮ್ ನಗರದಲ್ಲಿ ಹದಿನೇಳು ವರ್ಷ ಆಳಿದನು. ಈ ನಗರದಲ್ಲಿ ತಾನು ಸನ್ಮಾನಿಸಲ್ಪಡಬೇಕೆಂದು ಯೆಹೋವನು ಈ ನಗರವನ್ನು ಆರಿಸಿಕೊಂಡಿದ್ದನು. ಇಸ್ರೇಲಿನ ಎಲ್ಲಾ ನಗರಗಳಲ್ಲಿ ಈ ನಗರವನ್ನು ಆತನು ಆರಿಸಿಕೊಂಡಿದ್ದನು. ಅಮ್ಮೋನಿಯಳಾದ ನಯಮಾ ಎಂಬವಳು ರೆಹಬ್ಬಾಮನ ತಾಯಿ.
ನಿಮ್ಮ ದೇವರಾದ ಯೆಹೋವನು ನಿಮ್ಮ ಕುಲದವರ ಪ್ರಾಂತ್ಯಗಳಿಂದ ಒಂದು ವಿಶೇಷ ಸ್ಥಳವನ್ನು ಆರಿಸಿಕೊಂಡು ಅದಕ್ಕೆ ತನ್ನ ಹೆಸರಿಡುವನು. ಅಲ್ಲಿ ಆತನ ಆಲಯ ಕಟ್ಟಲ್ಪಡುವುದು. ಆತನನ್ನು ಆರಾಧಿಸಲು ನೀವು ಅಲ್ಲಿಗೆ ಹೋಗಬೇಕು.
ಇಂಥ ಮದುವೆಗಳಿಂದಾಗಿ ಸೊಲೊಮೋನನು ಪಾಪಕ್ಕೆ ಒಳಗಾದನು ಎಂಬುದು ನಿಮಗೆ ತಿಳಿಯದೋ? ಅವನಂಥ ವೈಭವಶಾಲಿ ಅರಸನು ಯಾವ ರಾಜ್ಯದಲ್ಲಿಯೂ ಇರಲಿಲ್ಲ. ದೇವರು ಸೊಲೊಮೋನನನ್ನು ಪ್ರೀತಿಸಿದನು. ಇಡೀ ಇಸ್ರೇಲಿಗೆ ಅವನನ್ನು ಅರಸನನ್ನಾಗಿ ಮಾಡಿದನು. ಅಂಥವನೂ ಅನ್ಯಸ್ತ್ರೀಯರಿಂದಾಗಿ ಪಾಪ ಮಾಡಿದನು.
ಆ ದಿವಸ ಎಲ್ಲಾ ಜನರಿಗೆ ಕೇಳಿಸುವಂತೆ ಮೋಶೆಯ ಗ್ರಂಥಗಳನ್ನು ಓದಲಾಯಿತು. ಅದರಲ್ಲಿ ಈ ಆಜ್ಞೆಯು ಬರೆಯಲ್ಪಟ್ಟಿದ್ದನ್ನು ಕಂಡುಕೊಂಡರು. ಅದೇನೆಂದರೆ: ದೇವರ ಸಭೆಯಲ್ಲಿ ಯಾವ ಅಮ್ಮೋನ್ಯನಾಗಲಿ ಮೋವಾಬ್ಯನಾಗಲಿ ಇರಕೂಡದು.
ಆಗ ಕೆಲಸಕ್ಕೆ ಬಾರದ ದುಷ್ಟಜನರು ಯಾರೊಬ್ಬಾಮನ ಸ್ನೇಹಿತರಾಗಿ ಅವನನ್ನು ಹಿಂಬಾಲಿಸಿ ರೆಹಬ್ಬಾಮನಿಗೆ ವಿರುದ್ಧವಾಗಿ ದಂಗೆ ಎದ್ದರು. ಸೊಲೊಮೋನನ ಮಗನಾದ ರೆಹಬ್ಬಾಮನು ಆಗ ಸಣ್ಣ ಪ್ರಾಯದವನಾಗಿ ಅನುಭವವಿಲ್ಲದವನಾಗಿದ್ದನು. ಆದ್ದರಿಂದ ಯಾರೊಬ್ಬಾಮನನ್ನೂ ಅವನ ದುಷ್ಟ ಹಿಂಬಾಲಕರನ್ನೂ ತಡೆಯಲು ಅವನಿಗೆ ಆಗಲಿಲ್ಲ.
ರಾಜನಾದ ಸೊಲೊಮೋನನು ಸ್ತ್ರೀಯರನ್ನು ಪ್ರೀತಿಸಿದನು! ಅವನು ಇಸ್ರೇಲರಲ್ಲದ ಅನೇಕ ಸ್ತ್ರೀಯರನ್ನು ಪ್ರೀತಿಸಿದನು. ಇವರಲ್ಲಿ ಫರೋಹನ ಮಗಳು, ಮೋವಾಬ್ಯ, ಅಮ್ಮೋನಿಯ, ಎದೋಮ್ಯ ಚೀದೋನ್ಯ ಮತ್ತು ಹಿತ್ತಿಯ ಸ್ತ್ರೀಯರು ಸೇರಿದ್ದರು.
ಆಗ ನಿಮ್ಮ ಯೆಹೋವನು ತನ್ನ ಹೆಸರಿಗಾಗಿ ಒಂದು ಸ್ಥಳವನ್ನು ಆರಿಸಿಕೊಳ್ಳುವನು. ಆ ಸ್ಥಳಕ್ಕೆ ನೀವು ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ಯಜ್ಞಾದಿಗಳನ್ನು ಸಮರ್ಪಿಸಬೇಕು; ನಿಮ್ಮ ಹರಕೆಯ ಕಾಣಿಕೆಗಳನ್ನು, ಚೊಚ್ಚಲ ಪಶುಗಳನ್ನು, ದಶಾಂಶವನ್ನು ಸಲ್ಲಿಸಬೇಕು.
“ಒಂದು ವಿಶೇಷ ಯಜ್ಞವೇದಿಕೆಯನ್ನು ನನಗೋಸ್ಕರ ಮಣ್ಣಿನಿಂದ ಕಟ್ಟಿರಿ. ಈ ಯಜ್ಞವೇದಿಕೆಯ ಮೇಲೆ ಕುರಿದನಗಳನ್ನು ನನಗೆ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಸಮರ್ಪಿಸಿರಿ. ನಾನು ನಿಮಗೆ ಹೇಳುವ ಪ್ರತಿಯೊಂದು ಸ್ಥಳದಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಳ್ಳಲು ಹೀಗೆಯೇ ಮಾಡಿರಿ. ಆಗ ನಾನು ಬಂದು ನಿಮ್ಮನ್ನು ಆಶೀರ್ವದಿಸುವೆನು.
ಸೊಲೊಮೋನನ ಮಗನಿಗೆ ಒಂದು ಕುಲವನ್ನು ಮಾತ್ರ ಕೊಡುತ್ತೇನೆ. ಜೆರುಸಲೇಮಿನ ನನ್ನ ಸನ್ನಿಧಿಯಲ್ಲಿ ಆಳಲು ನನ್ನ ಸೇವಕನಾದ ದಾವೀದನು ಯಾವಾಗಲೂ ತನ್ನ ಸಂತತಿಯವರಲ್ಲಿ ಒಬ್ಬನನ್ನು ಹೊಂದಿರಲೆಂದು ನಾನು ಇದನ್ನು ಮಾಡುತ್ತೇನೆ. ಜೆರುಸಲೇಮ್ ನಗರವನ್ನು ನಾನು ನನ್ನ ಸ್ವಂತದ್ದೆಂದು ಆರಿಸಿಕೊಂಡೆನು.
‘ಈಜಿಪ್ಟಿನಿಂದ ನನ್ನ ಜನರನ್ನು ಬಿಡಿಸಿ ಹೊರ ತಂದಂದಿನಿಂದ ನನ್ನ ಆಲಯಕೋಸ್ಕರ ಇಸ್ರೇಲರ ಕುಲಗಳ ಯಾವ ಪಟ್ಟಣವನ್ನೂ ನಾನು ಆರಿಸಿಕೊಳ್ಳಲಿಲ್ಲ. ಇಸ್ರೇಲರನ್ನು ನಡಿಸುವುದಕ್ಕಾಗಿ ಒಬ್ಬ ನಾಯಕನನ್ನೂ ನಾನು ಆರಿಸಿಕೊಳ್ಳಲಿಲ್ಲ.