2 ಕೊರಿಂಥದವರಿಗೆ 13:4 - ಪರಿಶುದ್ದ ಬೈಬಲ್4 ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲಲ್ಪಟ್ಟಾಗ ಬಲಹೀನನಾಗಿದ್ದನು ಎಂಬುದೇನೊ ನಿಜ. ಆದರೆ ಈಗ ಆತನು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹೀನರೆಂಬುದೂ ನಿಜ. ಆದರೆ ನಾವು ನಿಮಗೋಸ್ಕರವಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಆತನು ಬಲಹೀನಾವಸ್ಥೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟನು ನಿಜ; ಆದರೂ ದೇವರ ಬಲದಿಂದ ಜೀವಿಸುವವನಾಗಿದ್ದಾನೆ. ನಾವೂ ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ, ಆದರೂ ಆತನೊಂದಿಗೆ ದೇವರ ಬಲದಿಂದ ನಿಮಗಾಗಿ ಬದುಕುವವರಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಬಲಹೀನಾವಸ್ಥೆಯಲ್ಲಿ ಅವರನ್ನು ಶಿಲುಬೆಗೇರಿಸಲಾಯಿತು ಎಂಬುದೇನೋ ನಿಜ. ಆದರೆ, ದೇವರ ಶಕ್ತಿಯಿಂದ ಅವರು ಜೀವಂತರಾಗಿದ್ದಾರೆ. ಕ್ರಿಸ್ತಯೇಸುವಿನಲ್ಲಿ ನಾವೂ ಬಲಹೀನರೇ. ಆದರೆ ನಿಮ್ಮ ವಿಷಯದಲ್ಲಿ ವರ್ತಿಸುವಾಗ ದೇವರ ಶಕ್ತಿಯಿಂದ ಯೇಸುಸ್ವಾಮಿಯೊಂದಿಗೆ ಜೀವಂತರಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಆತನು ಬಲಹೀನಾವಸ್ಥೆಯಲ್ಲಿದ್ದದರಿಂದ ಶಿಲುಬೆಗೆ ಹಾಕಲ್ಪಟ್ಟನು ನಿಜ; ಆದರೂ ದೇವರ ಬಲದಿಂದ ಬದುಕುತ್ತಾನೆ. ನಾವು ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ; ಆದರೂ ಆತನೊಂದಿಗೆ ದೇವರ ಬಲದಿಂದ ಬದುಕುವವರಾಗಿದ್ದೇವೆ; ಇದು ನಿಮಗೆ ತೋರಿಬರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಕ್ರಿಸ್ತ ಯೇಸು ಬಲಹೀನತೆಯಲ್ಲಿ ಶಿಲುಬೆಗೆ ಹಾಕಲಾದರು ನಿಜ. ಆದರೆ ಅವರು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾರೆ. ನಾವು ಸಹ ಬಲಹೀನತೆಯುಳ್ಳವರಾಗಿದ್ದೇವೆ. ಆದರೆ ನಾವು ನಿಮ್ಮ ಸೇವೆ ಮಾಡುವಂತೆ, ನಾವು ಕ್ರಿಸ್ತ ಯೇಸುವಿನೊಂದಿಗೆ ದೇವರ ಶಕ್ತಿಯಿಂದ ಬದುಕುತ್ತಿದ್ದೇವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್4 ಅಪ್ಲ್ಯಾ ಬಳನಸಲ್ಲ್ಯಾ ಪರಿಸ್ಥಿತಿಕ್ ಲಾಗುನ್ ತೊ ಕುರ್ಸಾರ್ ಮರ್ಲೊ ತೆ ಖರೆ ಹಾಯ್. ಹೊಲ್ಯಾರ್ ಬಿ ದೆವಾಚ್ಯಾ ತಾಕ್ತಿನ್ ತೊ ಅತ್ತಾ ಝಿತ್ತೊ ಹಾಯ್, ಅಮಿ ತೆಚ್ಯಾ ವಾಂಗ್ಡಾ ಬಳನಸಲ್ಲೆ, ಖರೆ ತುಮ್ಚಿ ಸೆವಾ ಕರುಕ್ ದೆವಾಚ್ಯಾ ತಾಕ್ತಿನ್ ಅಮಿ ತೆಚ್ಯಾ ವಾಂಗ್ಡಾ ಜಿವನ್ ಕರ್ತಾವ್. ಅಧ್ಯಾಯವನ್ನು ನೋಡಿ |
ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು.