Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 12:20 - ಪರಿಶುದ್ದ ಬೈಬಲ್‌

20 ಕಾರಣವೇನೆಂದರೆ, ನಾನು ಬಂದಾಗ ನನ್ನ ಅಪೇಕ್ಷೆಗೆ ತಕ್ಕಂತೆ ನೀವು ಇರುವುದಿಲ್ಲವೆಂಬ ಭಯ ನನಗಿದೆ. ನಿಮ್ಮ ಸಭೆಯಲ್ಲಿ ವಾದ, ಹೊಟ್ಟೆಕಿಚ್ಚು, ಕೋಪ, ಸ್ವಾರ್ಥಪರವಾದ ಹೋರಾಟ, ಕೆಟ್ಟಮಾತು, ಸುಳ್ಳುಸುದ್ದಿ, ಗರ್ವ ಮತ್ತು ಗಲಿಬಿಲಿ ಇರಬಹುದೆಂಬ ಭಯ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ನಾನು ಬರುವಾಗ ಒಂದು ವೇಳೆ ನೀವು ಇಚ್ಛಿಸಿದ ಪ್ರಕಾರ ನಾನು ಕಾಣಿಸುವುದಿಲ್ಲವೇನೋ ಎಂಬ ಭಯ ನನಗಿದೆ. ಹಾಗೆಯೇ ನಾನು ಇಚ್ಛಿಸಿದ ಪ್ರಕಾರ ನೀವು ಕಾಣಿಸುವುದಿಲ್ಲವೇನೋ ಎಂಬ ಶಂಕೆ ನನಗಿದೆ. ಒಂದು ವೇಳೆ ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ದ್ವೇಷ, ಸ್ವಾರ್ಥಬುದ್ಧಿ, ಚಾಡಿಹೇಳುವುದು, ಕಿವಿಯೂದುವುದು, ಉಬ್ಬಿಕೊಳ್ಳುವುದು ಕಲಹ ಎಬ್ಬಿಸುವುದು ಇರಬಹುದೆಂದು ನನಗೆ ಸಂಶಯವುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ನಾನು ನಿಮ್ಮಲ್ಲಿ ಬಂದಾಗ ಒಂದು ವೇಳೆ ನೀವು ನನ್ನ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲವೇನೋ ಮತ್ತು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಕಾಣಿಸುವುದಿಲ್ಲವೇನೋ ಎಂಬ ಶಂಕೆ ನನಗಿದೆ. ನಿಮ್ಮಲ್ಲಿ ಜಗಳ, ದ್ವೇಷ, ಅಸೂಯೆ, ಸ್ವಾರ್ಥ, ಚಾಡಿಮಾತು, ಹರಟೆ, ಅಹಂಕಾರ, ಅನೀತಿ - ಇವುಗಳು ಇರಬಹುದೇನೋ ಎಂಬ ದಿಗಿಲೂ ನನಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ಜಗಳ ಹೊಟ್ಟೆಕಿಚ್ಚು ದ್ವೇಷ ಸ್ವಾರ್ಥಬುದ್ಧಿ ಚಾಡಿಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬರುವದೋ ಏನೋ ನನಗೆ ಸಂಶಯ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ನಾನು ಬಂದಾಗ ಒಂದು ವೇಳೆ ನೀವು ನನ್ನ ಮನಸ್ಸಿನ ತೋರಿಕೆಯ ಪ್ರಕಾರ ಇರುವುದಿಲ್ಲವೋ ಏನೋ? ನಾನು ನಿಮ್ಮ ಇಷ್ಟದ ಪ್ರಕಾರ ತೋರದೆ ಇರಬಹುದು. ಒಂದು ವೇಳೆ ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ಕೋಪ, ಭೇದಗಳು, ಚಾಡಿ ಹೇಳುವುದು, ಹರಟೆ ಹೊಡೆಯುವುದು, ಉಬ್ಬಿಕೊಳ್ಳುವುದು, ಕಲಹ ಎಬ್ಬಿಸುವುದು, ಇವುಗಳು ಕಾಣಬರುವುದೋ ಎಂಬ ಭಯ ನನಗೆ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

20 ಮಿಯಾ ತುಮ್ಚ್ಯಾಕ್ಡೆ ಯೆತಾನಾ ಮಾಜ್ಯಾ ಮನಾ ಸರ್ಕೆ ತುಮಿ ಹಾಶಿ ಕಾಯ್, ನಾಹೊಲ್ಯಾರ್ ತುಮ್ಚ್ಯಾ ಮನಾ ಸರ್ಕೊ ಮಿಯಾ ಹಾವ್ ಕಾಯ್ ನಾ. ಹೆಚೆ ಮಾಕಾ ಭಿಂಯೆ ದಿಸುಕ್ ಲಾಗ್ಲಾ. ತುಮ್ಚ್ಯಾ ಮದ್ದಿ ಝಗ್ಡೆ, ಎಕಾಮೆಕಾಕ್ ಜಳ್ತಲೆ, ದ್ವೆಶ್, ಸ್ವಾರ್ಥ್, ಚಾಡಿ ಬೊಲ್ತಲೆ, ಪುಸ್ಪುಸುನ್ ಬೊಲ್ತಲೆ, ಗರುಕಿಚಿ ಚಾಲ್ ಅನಿ ಗುಸ್ಪಾ ಗೊಂದಳ್ ಬಗುಕ್ ಗಾವ್ತಾಕಾ ಕಾಯ್ ಮನ್ತಲೆ ಭಿಂಯೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 12:20
34 ತಿಳಿವುಗಳ ಹೋಲಿಕೆ  

ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ.


ನೀವು ಒಬ್ಬರನ್ನೊಬ್ಬರು ಕಚ್ಚಿ ಹರಿದುಹಾಕಿ ನುಂಗುವುದಾದರೆ ಒಬ್ಬರಿಂದೊಬ್ಬರು ನಾಶವಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಿರಿ!


ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು.


ಅವರಲ್ಲಿ ಪ್ರತಿಯೊಂದು ಬಗೆಯ ಪಾಪ, ದುಷ್ಟತನ, ಸ್ವಾರ್ಥ, ದ್ವೇಷ, ಹೊಟ್ಟೆಕಿಚ್ಚು, ಕೊಲೆ, ಹೊಡೆದಾಟ, ಸುಳ್ಳುನುಡಿ ಮತ್ತು ಕೆಟ್ಟ ಆಲೋಚನೆ ಇವುಗಳೆಲ್ಲಾ ತುಂಬಿಕೊಂಡಿವೆ. ಅವರು ಹರಟೆ ಹೊಡೆಯುತ್ತಾರೆ;


ಈ ದುರ್ಬೋಧಕರಾದರೋ ಗುಣುಗುಟ್ಟುವವರೂ ತಪ್ಪು ಹುಡುಕುವವರೂ ದುರಾಶೆಗಳಿಗೆ ಬಲಿಯಾದವರೂ ಬಡಾಯಿಕೊಚ್ಚುವವರೂ ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರೂ ಆಗಿದ್ದಾರೆ.


ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.


ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ.


ನಾವು ಅಹಂಕಾರಿಗಳಾಗಬಾರದು, ಒಬ್ಬರನ್ನೊಬ್ಬರು ಕೆಣಕುವವರಾಗಬಾರದು, ಒಬ್ಬರಮೇಲೊಬ್ಬರು ಮತ್ಸರ ಉಳ್ಳವರಾಗಬಾರದು.


ನಾನು ನಿಮ್ಮ ಬಳಿಗೆ ಮತ್ತೆ ಬಂದಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ದೀನನನ್ನಾಗಿ ಮಾಡಬಹುದೆಂಬ ಭಯವಿದೆ. ನಿಮ್ಮಲ್ಲಿ ಪಾಪಕ್ಕೆ ಒಳಗಾಗಿರುವ ಅನೇಕರಿಂದ ನಾನು ದುಃಖಿತನಾಗಬಹುದು. ಏಕೆಂದರೆ, ಆ ಜನರು ತಮ್ಮ ದುಷ್ಟಜೀವಿತದ ಬಗ್ಗೆ, ತಮ್ಮ ಲೈಂಗಿಕ ಪಾಪಗಳ ಬಗ್ಗೆ ಮತ್ತು ನಾಚಿಕೆಕರವಾದ ಕಾರ್ಯಗಳ ಬಗ್ಗೆ ದುಃಖಪಟ್ಟಿಲ್ಲ ಮತ್ತು ತಮ್ಮ ಹೃದಯಗಳನ್ನು ಮಾರ್ಪಾಟು ಮಾಡಿಕೊಂಡಿಲ್ಲ.


ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು; ನನಗೆ ಕೇಡುಮಾಡಲು ಆಲೋಚಿಸುವರು.


ನಾನು ನಿಮ್ಮ ಬಳಿಗೆ ಎರಡನೆ ಸಲ ಬಂದಿದ್ದಾಗ ಪಾಪಕ್ಕೆ ಒಳಗಾಗಿದ್ದವರನ್ನು ಮತ್ತು ಉಳಿದವರೆಲ್ಲರನ್ನು ಎಚ್ಚರಿಸಿದೆನು. ಈಗ ನಾನು ದೂರದಲ್ಲಿದ್ದೇನೆ. ಈ ಪಾಪಕ್ಕೆ ಒಳಗಾಗಿರುವ ಎಲ್ಲರಿಗೂ ನಾನು ಕೊಡುವ ಎಚ್ಚರಿಕೆ ಏನೆಂದರೆ, ನಾನು ನಿಮ್ಮ ಬಳಿಗೆ ಬಂದಾಗ, ನಿಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು.


ನಿಮ್ಮಲ್ಲಿ ಕ್ರಿಸ್ತನಿಗೆ ವಿಧೇಯರಾಗದಿರುವ ಯಾರನ್ನೇ ಆಗಲಿ ಶಿಕ್ಷಿಸಲು ಸಿದ್ಧರಾಗಿದ್ದೇವೆ. ಆದರೆ ಮೊಟ್ಟಮೊದಲನೆಯದಾಗಿ, ನೀವು ಪೂರ್ಣ ವಿಧೇಯರಾಗಬೇಕೆಂದು ಅಪೇಕ್ಷಿಸುತ್ತೇವೆ.


ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ.


ನಿಮ್ಮನ್ನು ಶಿಕ್ಷಿಸುವುದಕ್ಕಾಗಲಿ ನೋಯಿಸುವುದಕ್ಕಾಗಲಿ ನನಗೆ ಇಷ್ಟವಿರಲಿಲ್ಲ. ಆದಕಾರಣ ನಾನು ನಿಮ್ಮ ಬಳಿಗೆ ಹಿಂತಿರುಗಿ ಬರಲಿಲ್ಲ. ಇದು ಸತ್ಯ. ಇದಕ್ಕೆ ದೇವರೇ ಸಾಕ್ಷಿ.


ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.


ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಾರೆ; ದೇವರನ್ನು ದ್ವೇಷಿಸುತ್ತಾರೆ. ಅವರು ಸೊಕ್ಕಿನವರೂ ಅಹಂಕಾರಿಗಳೂ ಮತ್ತು ತಮ್ಮ ಬಗ್ಗೆ ಬಡಾಯಿಕೊಚ್ಚಿಕೊಳ್ಳುವವರೂ ಆಗಿದ್ದಾರೆ. ಅವರು ಕೇಡಿನ ಮಾರ್ಗಗಳನ್ನು ಹುಡುಕುವವರೂ ತಂದೆತಾಯಿಗಳಿಗೆ ಅವಿಧೇಯರೂ ಮೂರ್ಖರೂ ಆಗಿದ್ದಾರೆ.


ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ.


ಆದರೆ ನೀವು ನಿಮ್ಮ ವಿಷಯದಲ್ಲಿ ಇನ್ನೂ ಹೆಚ್ಚಳಪಡುತ್ತಿದ್ದೀರಿ. ನೀವು ದುಃಖಭರಿತರಾಗಿರಬೇಕಿತ್ತು. ಆ ಪಾಪ ಮಾಡಿದ ವ್ಯಕ್ತಿಯನ್ನು ನಿಮ್ಮ ಸಭೆಯಿಂದ ಹೊರಗೆ ಹಾಕಬೇಕಿತ್ತು.


ಆದ್ದರಿಂದ ನಾನು ನಿಮಗೆ ನೀಡಲಿರುವ ಮುಂದಿನ ಸಂದರ್ಶನವು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಶನವಾಗಿರಬಾರದೆಂದು ನಿರ್ಧರಿಸಿದೆನು.


ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು