2 ಕೊರಿಂಥದವರಿಗೆ 11:22 - ಪರಿಶುದ್ದ ಬೈಬಲ್22 ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಅವರು ಇಬ್ರಿಯರೋ? ನಾನೂ ಇಬ್ರಿಯನು. ಅವರು ಇಸ್ರಾಯೇಲ್ಯರೋ? ನಾನೂ ಇಸ್ರಾಯೇಲ್ಯನು. ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಅವರು ಹಿಬ್ರಿಯರೋ? ನಾನೂ ಹಿಬ್ರಿಯನೇ. ಅವರು ಇಸ್ರಯೇಲರೋ? ನಾನೂ ಇಸ್ರಯೇಲನೇ. ಅವರು ಅಬ್ರಹಾಮನ ವಂಶದವರೋ? ನಾನೂ ಅದೆ ವಂಶದವನೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 ಇದನ್ನು ಬುದ್ಧಿಹೀನತೆಯಿಂದ ಹೇಳುತ್ತೇನೆ. ಅವರು ಇಬ್ರಿಯರೋ ನಾನೂ ಇಬ್ರಿಯನು; ಅವರು ಇಸ್ರಾಯೇಲ್ಯರೋ ನಾನೂ ಇಸ್ರಾಯೇಲ್ಯನು; ಅವರು ಅಬ್ರಹಾಮನ ವಂಶದವರೋ ನಾನೂ ಅದೇ ವಂಶದವನು; ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಅವರು ಹೀಬ್ರಿಯರೋ? ನಾನೂ ಹೀಬ್ರಿಯನೇ. ಅವರು ಇಸ್ರಾಯೇಲರೋ? ನಾನೂ ಇಸ್ರಾಯೇಲನೇ. ಅವರು ಅಬ್ರಹಾಮನ ಸಂತತಿಯವರೋ? ನಾನೂ ಕೂಡಾ ಅಬ್ರಹಾಮನ ಸಂತತಿಯೇ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್22 ತೆನಿ ಜುದೆವಾ? ಮಿಯಾಬಿ ಜುದೆವ್! ತೆನಿ ಇಸ್ರಾಯೆಲ್ಕಾರಾ? ಮಿಯಾಬಿ ಇಸ್ರಾಯೆಲ್ಕಾರ್! ತೆನಿ ಅಬ್ರಾಹಾಮಾಚ್ಯಾ ಪಿಳ್ಗಿಚೆ? ಮಿಯಾಬಿ ಅಬ್ರಾಮಾಚ್ಯಾಚ್ ಪಿಳ್ಗಿಚೊ! ಅಧ್ಯಾಯವನ್ನು ನೋಡಿ |
ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ.