2 ಅರಸುಗಳು 9:5 - ಪರಿಶುದ್ದ ಬೈಬಲ್5 ಆ ತರುಣನು ಅಲ್ಲಿಗೆ ಬಂದಾಗ ಸೇನಾಧಿಪತಿಗಳು ಕುಳಿತಿರುವುದನ್ನು ನೋಡಿ, “ಸೇನಾಧಿಪತಿಯೇ, ನಿನಗೆ ಒಂದು ಸಂದೇಶವಿದೆ” ಎಂದು ಹೇಳಿದನು. ಯೇಹುವು, “ನಾವೆಲ್ಲರೂ ಇಲ್ಲಿದ್ದೇವೆ. ನಮ್ಮಲ್ಲಿ ಸಂದೇಶವಿರುವುದು ಯಾರಿಗೆ?” ಎಂದು ಕೇಳಿದನು. ಆ ತರುಣನು, “ಸಂದೇಶವು ಸೇನಾಧಿಪತಿಯಾದ ನಿನಗೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಸೈನ್ಯಾಧಿಪತಿಗಳೆಲ್ಲಾ ಒಂದು ಕಡೆ ಸೇರಿರುವುದನ್ನು ಕಂಡು ಅವನು ಅವರನ್ನು ಸಮೀಪಿಸಿ, “ನಾಯಕನೇ ನಿನಗೊಂದು ಮಾತು ಹೇಳುವುದಿದೆ” ಎಂದನು. ಯೇಹುವು ಅವನಿಗೆ, “ನಮ್ಮಲ್ಲಿ ಯಾರಿಗೆ?” ಎಂದು ಕೇಳಲು ಅವನು, “ಸೇನಾಧಿಪತಿಯಾದ ನಿನಗೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಸೈನ್ಯಾಧಿಪತಿಗಳೆಲ್ಲಾ ಒಂದು ಕಡೆಯಲ್ಲಿ ಕೂಡಿರುವುದನ್ನು ಕಂಡು, ಅವರನ್ನು ಸಮೀಪಿಸಿ, “ಸೇನಾಪತಿಯೇ, ನಿಮಗೊಂದು ಮಾತು ಹೇಳಬೇಕಾಗಿದೆ,” ಎಂದನು. ಯೇಹುವು, “ನಮ್ಮಲ್ಲಿ ಯಾರಿಗೆ?” ಎಂದು ಕೇಳಿದನು. ಅವನು, “ಸೇನಾಪತಿಯಾದ ನಿಮಗೇ ಹೇಳಬೇಕಾಗಿದೆ,” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಸೈನ್ಯಾಧಿಪತಿಗಳೆಲ್ಲಾ ಒಂದು ಕಡೆಯಲ್ಲಿ ಕೂಡಿರುವದನ್ನು ಕಂಡು ಅವರನ್ನು ಸಮೀಪಿಸಿ - ಸೇನಾಪತಿಯೇ, ನಿನಗೊಂದು ಮಾತು ಹೇಳುವದದೆ ಅಂದನು. ಯೇಹುವು ಅವನನ್ನು - ನಮ್ಮಲ್ಲಿ ಯಾರಿಗೆ ಎಂದು ಕೇಳಲು ಅವನು - ಸೇನಾಪತಿಯಾದ ನಿನಗೇ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಅವನು ಅಲ್ಲಿ ಸೇರಿದಾಗ, ಅಲ್ಲಿ ಯೇಹುವು ಮತ್ತು ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು, “ಅಧಿಪತಿಯೇ, ನಿನಗೊಂದು ಮಾತು ಹೇಳುವುದಿದೆ,” ಎಂದನು. ಯೇಹುವು, “ನಮ್ಮಲ್ಲಿ ಯಾರಿಗೆ?” ಎಂದು ಕೇಳಿದನು. ಅವನು, “ಅಧಿಪತಿಯಾದ ನಿಮಗೇ ಹೇಳಬೇಕಾಗಿದೆ,” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿ |