Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 9:36 - ಪರಿಶುದ್ದ ಬೈಬಲ್‌

36 ಜನರು ಹಿಂದಿರುಗಿ ಬಂದು ಯೇಹುವಿಗೆ ಅದನ್ನು ಹೇಳಿದರು. ಯೇಹುವು, “ಯೆಹೋವನು ತನ್ನ ಸೇವಕನೂ ತಿಷ್ಬೀಯನೂ ಆದ ಎಲೀಯನಿಗೆ ಈ ರೀತಿ ಸಂದೇಶ ನೀಡಲು ಹೇಳಿದ್ದನು. ಎಲೀಯನು ಹೇಳಿದ್ದೇನೆಂದರೆ: ಇಜ್ರೇಲ್ ಪ್ರದೇಶದಲ್ಲಿ ಈಜೆಬೆಲಳ ದೇಹವನ್ನು ನಾಯಿಗಳು ತಿನ್ನುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಅವರು ಹಿಂದಿರುಗಿ ಯೇಹುವಿನ ಹತ್ತಿರ ಬಂದು ಆ ಸಂಗತಿಯನ್ನು ತಿಳಿಸಲು ಅವನು ಅವರಿಗೆ, “ಯೆಹೋವನು, ತನ್ನ ದಾಸನಾಗಿರುವ ತಿಷ್ಬೀಯನಾದ ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ಈಗ ನೆರವೇರಿತು, ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಅವರು ಹಿಂದಿರುಗಿ, ಯೇಹುವಿನ ಹತ್ತಿರ ಬಂದು, ಆ ಸಂಗತಿಯನ್ನು ತಿಳಿಸಿದರು. ಅವನು ಅವರಿಗೆ, “’ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಜೆಸ್ರೀಲಿನ ಹೊಲದಲ್ಲಿ ತಿಂದುಬಿಡುವುವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಅವರು ಹಿಂದಿರುಗಿ ಯೇಹುವಿನ ಹತ್ತಿರ ಬಂದು ಆ ಸಂಗತಿಯನ್ನು ತಿಳಿಸಲು ಅವನು ಅವರಿಗೆ - ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಇಜ್ರೇಲಿನ ಹೊಲದಲ್ಲಿ ತಿಂದು ಬಿಡುವವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಅದಕ್ಕವನು, “ಯೆಹೋವ ದೇವರು ತಮ್ಮ ಸೇವಕನಾಗಿರುವ ತಿಷ್ಬೀಯನಾದ ಎಲೀಯನ ಮುಖಾಂತರ ಹೇಳಿದ ವಾಕ್ಯವು ಇದೇ: ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 9:36
9 ತಿಳಿವುಗಳ ಹೋಲಿಕೆ  

ಇದಲ್ಲದೆ ಯೆಹೋವನು, ‘ನಿನ್ನ ಪತ್ನಿಯಾದ ಈಜೆಬೆಲಳ ದೇಹವನ್ನು, ಇಜ್ರೇಲ್ ನಗರದಲ್ಲಿ ನಾಯಿಗಳು ತಿನ್ನುತ್ತವೆ,


ಆದ್ದರಿಂದ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಆರೋನನೂ ಅವನ ಪುತ್ರರೂ ಮಾಡಿದರು.


ಲೆಬೊಹಮಾತಿನಿಂದ ಅರಾಬ ಸಮುದ್ರದವರೆಗೆ ಹಬ್ಬಿದ ಇಸ್ರೇಲರ ದೇಶವನ್ನು ಯಾರೊಬ್ಬಾಮನು ಮತ್ತೆ ವಶಪಡಿಸಿಕೊಂಡನು. ಇಸ್ರೇಲರ ಯೆಹೋವನು ತನ್ನ ಸೇವಕನೂ ಅಮಿತ್ತೈನ ಮಗನೂ ಗತ್‌ಹೇಫೆರಿನ ಪ್ರವಾದಿಯೂ ಆದ ಯೋನಾ ಎಂಬವನ ಮೂಲಕ ಮೊದಲೇ ತಿಳಿಸಿದ್ದಂತೆ ಇದು ಸಂಭವಿಸಿತು.


ಯೆಹೋವನು ಪ್ರವಾದಿಯಾದ ನಾತಾನನ ಮೂಲಕವಾಗಿ ಸಂದೇಶವನ್ನು ಕಳುಹಿಸಿದನು. ಯೆಹೋವನು ಆಜ್ಞಾಪಿಸಿದಂತೆ ನಾತಾನನು ಸೊಲೊಮೋನನಿಗೆ ಯೆದೀದ್ಯನೆಂದು ಹೆಸರಿಟ್ಟನು.


ಇಜ್ರೇಲ್, ಯೆಗ್ದೆಯಾಮ್, ಜನೋಹ,


ಇಜ್ರೇಲಿನ ಪ್ರದೇಶದಲ್ಲಿ ಈಜೆಬೆಲಳನ್ನು ನಾಯಿಗಳು ಕಿತ್ತುತಿನ್ನುತ್ತವೆ. ಈಜೆಬೆಲಳನ್ನು ಸಮಾಧಿಮಾಡುವುದಿಲ್ಲ’” ಎಂದು ಹೇಳಿದನು. ಬಳಿಕ ಯುವ ಪ್ರವಾದಿಯು ಬಾಗಿಲನ್ನು ತೆರೆದು ಓಡಿಹೋದನು.


ಈಜೆಬೆಲಳನ್ನು ಸಮಾಧಿಮಾಡಲು ಜನರು ಹೋದರು. ಆದರೆ ಅವರಿಗೆ ಅವಳ ದೇಹವು ಸಿಗಲಿಲ್ಲ. ಅವರಿಗೆ ಅವಳ ತಲೆಬುರುಡೆ, ಕೈಕಾಲುಗಳು ಮಾತ್ರ ಸಿಕ್ಕಿದವು.


ಎಲೀಯನ ಮೂಲಕ ಯೆಹೋವನು ಹೇಳಿದಂತೆಯೇ ಅಹಜ್ಯನು ಸತ್ತುಹೋದನು. ಅಹಜ್ಯನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅಹಜ್ಯನ ನಂತರ ಯೆಹೋರಾಮನು ಹೊಸ ರಾಜನಾದನು. ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ ಯೊಹೋರಾಮನು ಆಳುವುದಕ್ಕೆ ಆರಂಭಿಸಿದನು.


ಹೀಗೆ ಯೆಹೋವನ ವಾಕ್ಯವು ನೆರವೇರಿತು. ಯೇಹುವಿನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೆ ಇಸ್ರೇಲಿನ ರಾಜರಾಗಿರುತ್ತಾರೆ ಎಂದು ಯೆಹೋವನು ಅವನಿಗೆ ಮೊದಲೇ ತಿಳಿಸಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು