2 ಅರಸುಗಳು 9:33 - ಪರಿಶುದ್ದ ಬೈಬಲ್33 ಯೇಹುವು “ಈಜೆಬೆಲಳನ್ನು ಹೊರಕ್ಕೆ ಎಸೆಯಿರಿ!” ಎಂದು ಅವರಿಗೆ ಹೇಳಿದನು. ಆಗ ಕಂಚುಕಿಗಳು ಈಜೆಬೆಲಳನ್ನು ಕೆಳಕ್ಕೆ ಎಸೆದರು. ಈಜೆಬೆಲಳ ರಕ್ತವು ಗೋಡೆಗಳ ಮೇಲೆ ಮತ್ತು ಕುದುರೆಗಳ ಮೇಲೆ ಚಿಮ್ಮಿತು. ಕುದುರೆಗಳು ಈಜೆಬೆಲಳ ದೇಹದ ಮೇಲೆ ತುಳಿದಾಡಿದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಅವನು ಅವರಿಗೆ, “ಆಕೆಯನ್ನು ಕೆಳಗೆ ದೊಬ್ಬಿರಿ” ಎಂದು ಆಜ್ಞಾಪಿಸಲು ಅವರು ಆಕೆಯನ್ನು ಕೆಳಗೆ ದೊಬ್ಬಿಬಿಟ್ಟರು. ಆಕೆಯ ರಕ್ತವು ಗೋಡೆಗಳಿಗೂ, ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿದು ಹಾಕಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ಅವನು ಅವರಿಗೆ, “ಆಕೆಯನ್ನು ಕೆಳಗೆ ದೊಬ್ಬಿರಿ,” ಎಂದು ಆಜ್ಞಾಪಿಸಲು ಅವರು ದೊಬ್ಬಿದರು. ಆಕೆಯ ರಕ್ತ ಗೋಡೆಗೂ ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿಸಿಬಿಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ಅವನು ಅವರಿಗೆ - ಆಕೆಯನ್ನು ಕೆಳಗೆ ದೊಬ್ಬಿರಿ ಎಂದು ಆಜ್ಞಾಪಿಸಲು ಅವರು ದೊಬ್ಬಿದರು. ಆಕೆಯ ರಕ್ತವು ಗೋಡೆಗೂ ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿಸಿಬಿಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ಯೇಹುವು, “ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ,” ಎಂದನು. ಅವರು ಅವಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ, ಕುದುರೆಗಳ ಮೇಲೆಯೂ ಸಿಡಿಯಿತು. ಯೇಹುವು ರಥವನ್ನು ಅವಳ ಮೇಲೆ ಓಡಿಸಿದನು. ಅಧ್ಯಾಯವನ್ನು ನೋಡಿ |
ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು.