Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 8:12 - ಪರಿಶುದ್ದ ಬೈಬಲ್‌

12 ಹಜಾಯೇಲನು, “ಸ್ವಾಮೀ, ನೀವು ಅಳುವುದೇಕೇ?” ಎಂದು ಕೇಳಿದನು. ಎಲೀಷನು, “ನಾನು ಅಳುತ್ತಿರುವುದೇಕೆಂದರೆ ನೀನು ಇಸ್ರೇಲರಿಗೆ ಮಾಡುವ ಕೆಟ್ಟಕಾರ್ಯಗಳು ನನಗೆ ತಿಳಿದಿವೆ. ನೀನು ಅವರ ನಗರಗಳ ಕೋಟೆಗಳನ್ನು ಸುಟ್ಟುಹಾಕುವೆ. ನೀನು ಅವರ ತರುಣರನ್ನು ಖಡ್ಗಗಳಿಂದ ಇರಿದುಕೊಲ್ಲುವೆ. ನೀನು ಅವರ ಮಕ್ಕಳನ್ನು ಕೊಂದುಹಾಕುವೆ. ನೀನು ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಹಾಕುವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹಜಾಯೇಲನು ಅವನನ್ನು, “ನನ್ನ ಒಡೆಯಾ, ಯಾಕೆ ಅಳುತ್ತಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಾಯೇಲರಿಗೆ ಎಷ್ಟು ಕೇಡು ಮಾಡುವಿ ಎಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ. ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ. ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ. ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಹಜಾಯೇಲನು, “ನನ್ನೊಡೆಯಾ, ಏಕೆ ಅಳುತ್ತೀರಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಯೇಲರಿಗೆ ಎಷ್ಟು ಕೇಡು ಮಾಡುವೆಯೆಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಣೆಗಳಿಗೆ ಬೆಂಕಿ ಹೊತ್ತಿಸುವೆ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವೆ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವೆ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವೆ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹಜಾಯೇಲನು ಅವನನ್ನು - ನನ್ನ ಒಡೆಯಾ, ಯಾಕೆ ಅಳುತ್ತೀ ಎಂದು ಕೇಳಿದನು. ಅದಕ್ಕೆ ಅವನು - ನೀನು ಇಸ್ರಾಯೇಲ್ಯರಿಗೆ ಎಷ್ಟು ಕೇಡು ಮಾಡುವಿಯೆಂಬದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಗ ಹಜಾಯೇಲನು, “ನನ್ನ ಒಡೆಯನು ಅಳುವುದೇಕೆ?” ಎಂದನು. ಅದಕ್ಕವನು, “ಏಕೆಂದರೆ ಇಸ್ರಾಯೇಲರಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ. ನೀನು ಅವರ ಕೋಟೆಗಳಿಗೆ ಬೆಂಕಿ ಹತ್ತಿಸಿ, ಅವರ ಯೌವನಸ್ಥರನ್ನು ಖಡ್ಗದಿಂದ ಕೊಂದು, ಅವರ ಕೂಸುಗಳನ್ನು ತುಂಡು ತುಂಡುಗಳಾಗಿ ಮಾಡಿ, ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವೆ,” ಎಂದ ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 8:12
19 ತಿಳಿವುಗಳ ಹೋಲಿಕೆ  

ಸಮಾರ್ಯವು ಶಿಕ್ಷಿಸಲ್ಪಡಬೇಕು. ಯಾಕೆಂದರೆ ಆಕೆಯು ತನ್ನ ದೇವರಿಗೆ ವಿರುದ್ಧವಾಗಿ ನಡೆದಳು. ಇಸ್ರೇಲರು ಖಡ್ಗದಿಂದ ಸಾಯುವರು. ಅವರ ಮಕ್ಕಳು ಹರಿಯಲ್ಪಟ್ಟು ಚೂರುಚೂರಾಗುವರು. ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವರು.”


ಆದರೆ ತೆಬೆಸ್ ಸೋಲಿಸಲ್ಪಟ್ಟಿತು. ಆಕೆಯ ಪ್ರಜೆಗಳು ಬೇರೆ ದೇಶಕ್ಕೆ ಕೈದಿಗಳಾಗಿ ಒಯ್ಯಲ್ಪಟ್ಟರು. ಸೈನಿಕರು ಆಕೆಯ ಹಸುಗೂಸುಗಳನ್ನು ರಸ್ತೆಯ ಮೂಲೆಮೂಲೆಗಳಲ್ಲಿ ಹೊಡೆದು ಸಾಯಿಸಿದರು. ತಮ್ಮಲ್ಲಿ ಯಾರು ಉನ್ನತ ಅಧಿಕಾರಿಗಳನ್ನು ಗುಲಾಮರನ್ನಾಗಿ ಉಪಯೋಗಿಸಬೇಕೆಂಬದಾಗಿ ಚೀಟುಹಾಕಿದರು. ಅವರು ತೆಬೆಸಿನ ಮುಖ್ಯ ಅಧಿಕಾರಿಗಳನ್ನು ಸಂಕೋಲೆಗಳಿಂದ ಬಂಧಿಸಿದರು.


ಶಲ್ಲೂಮನು ಸತ್ತನಂತರ, ಮೆನಹೇಮನು ತಿಪ್ಸಹುವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸೋಲಿಸಿದನು. ಜನರು ನಗರದ ಬಾಗಿಲನ್ನು ಅವನಿಗೆ ತೆರೆಯಲು ನಿರಾಕರಿಸಿದರು. ಆದ್ದರಿಂದ ಮೆನಹೇಮನು ಅವರನ್ನು ಸೋಲಿಸಿ ಆ ನಗರದಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಗಳನ್ನು ಸೀಳಿಸಿದನು.


ಆಗ ಯೆಹೋವನು ಇಸ್ರೇಲಿಗೆ ವಿರುದ್ಧವಾಗಿ ಕೋಪಗೊಂಡು ಅರಾಮ್ಯರ ರಾಜನಾದ ಹಜಾಯೇಲನ ಮತ್ತು ಅವನ ಮಗನಾದ ಬೆನ್ಹದದನ ಅಧೀನಕ್ಕೆ ಇಸ್ರೇಲನ್ನು ಒಪ್ಪಿಸಿದನು.


ಹಜಾಯೇಲನು ಅರಾಮ್ಯರ ರಾಜನಾಗಿದ್ದನು. ಹಜಾಯೇಲನು ಗತ್ ಊರನ್ನೂ ಸೋಲಿಸಿದನು. ಆಗ ಅವನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಹೋಗಲು ಯೋಚಿಸಿದನು.


ಯೆಹೋವನು ಹೇಳುವುದೇನೆಂದರೆ, “ಅನೇಕಾನೇಕ ಅಪರಾಧಗಳನ್ನು ಮಾಡಿದ ಅಮ್ಮೋನಿಯರನ್ನು ನಾನು ಖಂಡಿತವಾಗಿಯೂ ಶಿಕ್ಷಿಸುತ್ತೇನೆ. ಯಾಕೆಂದರೆ ಅವರು ಗಿಲ್ಯಾದಿನ ಗರ್ಭಿಣಿ ಸ್ತ್ರೀಯರನ್ನು ಕೊಂದರು. ಆ ಪ್ರಾಂತ್ಯವನ್ನು ಕೈವಶಮಾಡಿಕೊಂಡು ತಮ್ಮ ದೇಶವನ್ನು ವಿಸ್ತಾರ ಮಾಡುವುದಕ್ಕಾಗಿ ಅವರು ಹೀಗೆ ಮಾಡಿದರು.


ಅವರ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಿತ್ತುಕೊಳ್ಳುವರು; ಅವರ ಹೆಂಡತಿಯರನ್ನು ಬಲಾತ್ಕಾರದಿಂದ ಸಂಭೋಗಿಸುವರು; ಅವರ ಮಕ್ಕಳನ್ನು ಜನರ ಕಣ್ಣೆದುರಿನಲ್ಲಿಯೇ ಹೊಡೆದು ಸಾಯಿಸುವರು.


ಅರಾಮ್ಯರ ರಾಜನು ಯೆಹೋವಾಹಾಜನ ಸೇನೆಯನ್ನು ಸೋಲಿಸಿದನು. ಅರಾಮ್ಯರ ರಾಜನು ಐವತ್ತು ಮಂದಿ ರಾಹುತರನ್ನು, ಹತ್ತು ರಥಗಳನ್ನು ಮತ್ತು ಹತ್ತು ಸಾವಿರ ಭೂಸೈನಿಕರನ್ನು ಬಿಟ್ಟು ಉಳಿದವರೆಲ್ಲರನ್ನು ಸುಗ್ಗಿಯ ಕಾಲದಲ್ಲಿ ಗಾಳಿಗೆ ಹಾರಿಹೋಗುವ ಹೊಟ್ಟಿನಂತೆ ನಾಶಮಾಡಿದನು.


ನಿನ್ನ ಸೈನ್ಯಕ್ಕೆ ರಣರಂಗದ ಸ್ವರವು ಕೇಳಿಸುವದು. ನಿನ್ನ ಕೋಟೆಗಳೆಲ್ಲವೂ ಕೆಡವಲ್ಪಡುವದು. ಬೇತ್‌ಅರ್ಬೇಲನ್ನು ಶಲ್ಮಾನನು ಕೆಡವಿದಂತೆ ಆಗುವದು. ಆ ಯುದ್ಧದ ಸಮಯದಲ್ಲಿ ತಾಯಿಯು ತನ್ನ ಮಕ್ಕಳೊಂದಿಗೆ ಕೊಲ್ಲಲ್ಪಡುವಳು.


ಸೈನಿಕರು ಬಾಬಿಲೋನಿನ ಯುವಕರನ್ನು ಹಿಡಿದು ಕೊಲ್ಲುವರು. ಶಿಶುಗಳಿಗೂ ದಯೆತೋರುವುದಿಲ್ಲ; ಮಕ್ಕಳಿಗೆ ಕರುಣೆತೋರುವುದಿಲ್ಲ.


ಆಗ ಶೂನೇಮಿನ ಆ ಸ್ತ್ರೀಯು, “ಸ್ವಾಮೀ, ನಾನು ಮಗನನ್ನು ಕೇಳಲೇ ಇಲ್ಲ. ‘ನನ್ನನ್ನು ವಂಚಿಸಬೇಡ’ ಎಂದು ನಾನು ನಿನಗೆ ಹೇಳಿದೆ!” ಎಂದಳು.


ನಾನು ಏನು ಮಾಡಿದೆನೆಂಬುದು ನಿನಗೆ ತಿಳಿಯಲಿಲ್ಲವೇ? ಯೆಹೋವನ ಪ್ರವಾದಿಗಳನ್ನು ಈಜೆಬೆಲಳು ಕೊಲ್ಲುತ್ತಿದ್ದಾಗ ನೂರು ಮಂದಿ ಪ್ರವಾದಿಗಳನ್ನು ನಾನು ಗುಹೆಗಳಲ್ಲಿ ಅಡಗಿಸಿಟ್ಟೆನು. ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿಯನ್ನು ಮತ್ತೊಂದು ಗುಹೆಯಲ್ಲಿಯೂ ನಾನು ಅಡಗಿಸಿಟ್ಟೆನು. ಅವರಿಗೆ ಆಹಾರವನ್ನೂ ನೀರನ್ನೂ ನಾನು ತಂದುಕೊಡುತ್ತಿದ್ದೆನು.


ಹಜಾಯೇಲನು ಕೆಟ್ಟವರಾದ ಅನೇಕ ಜನರನ್ನು ಕೊಲ್ಲುತ್ತಾನೆ. ಹಜಾಯೇಲನ ಖಡ್ಗದಿಂದ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುತ್ತಾನೆ. ಯೇಹುವಿನಿಂದ ತಪ್ಪಿಸಿಕೊಂಡ ಆ ಕೆಟ್ಟ ಜನರನ್ನೆಲ್ಲ ಎಲೀಷನು ಕೊಲ್ಲುತ್ತಾನೆ.


ಯೆಹೋವಾಹಾಜನು ಆಳುತ್ತಿದ್ದ ದಿನಗಳಲ್ಲೆಲ್ಲಾ ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿಗೆ ತೊಂದರೆ ಕೊಡುತ್ತಿದ್ದನು.


ಯೆಹೋಷಾಫಾಟ್, ಯೆಹೋರಾಮ್ ಮತ್ತು ಅಹಜ್ಯರು ಯೆಹೂದದ ರಾಜರಾಗಿದ್ದರು. ಅವರೆಲ್ಲ ಯೆಹೋವಾಷನ ಪೂರ್ವಿಕರು. ಅವರು ಅನೇಕ ವಸ್ತುಗಳನ್ನು ಯೆಹೋವನಿಗೆ ಕೊಟ್ಟಿದ್ದರು. ಅವುಗಳನ್ನೆಲ್ಲ ಆಲಯದಲ್ಲಿ ಇಟ್ಟಿದ್ದರು. ಯೆಹೋವಾಷನೂ ಯೆಹೋವನಿಗೆ ಅನೇಕ ವಸ್ತುಗಳನ್ನು ಕೊಟ್ಟಿದ್ದನು. ಯೆಹೋವಾಷನು ಅವುಗಳ ಜೊತೆಗೆ, ಆಲಯದಲ್ಲಿದ್ದ ಮತ್ತು ತನ್ನ ಮನೆಯಲ್ಲಿದ್ದ ಬಂಗಾರವನ್ನೆಲ್ಲ ತೆಗೆದುಕೊಂಡನು. ನಂತರ ಯೆಹೋವಾಷನು ಆ ಬೆಲೆಬಾಳುವ ವಸ್ತುಗಳನ್ನೆಲ್ಲ ಅರಾಮ್ಯರ ರಾಜನಾದ ಹಜಾಯೇಲನಿಗೆ ಕಳುಹಿಸಿದನು. ಆದ್ದರಿಂದ ಹಜಾಯೇಲನು ಜೆರುಸಲೇಮಿನ ವಿರುದ್ಧ ಯುದ್ಧಮಾಡದೆ ಹೊರಟುಹೋದನು.


ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು