2 ಅರಸುಗಳು 4:6 - ಪರಿಶುದ್ದ ಬೈಬಲ್6 ಅವಳು ಅನೇಕ ಪಾತ್ರೆಗಳನ್ನು ತುಂಬಿಸಿಟ್ಟು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ” ಎಂದಳು. ಆದರೆ ಎಲ್ಲಾ ಪಾತ್ರೆಗಳು ತುಂಬಿಹೋಗಿದ್ದವು. ಅವಳ ಮಕ್ಕಳಲ್ಲಿ ಒಬ್ಬನು, “ಇಲ್ಲಿ ಯಾವ ಪಾತ್ರೆಗಳೂ ಇಲ್ಲ” ಎಂದು ಹೇಳಿದನು. ಆ ಸಮಯಕ್ಕೆ ಸರಿಯಾಗಿ ಪಾತ್ರೆಯಲ್ಲಿದ್ದ ಎಣ್ಣೆಯು ಮುಗಿದಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಪಾತ್ರೆಗಳೆಲ್ಲಾ ತುಂಬಿದಾಗ ಆಕೆಯು ಮಗನಿಗೆ, “ಇನ್ನೊಂದು ಪಾತ್ರೆಯನ್ನು ತಂದಿಡು” ಎನ್ನಲು ಅವನು, “ಪಾತ್ರೆಗಳೆಲ್ಲ ಮುಗಿದು ಹೋದವು” ಎಂದು ಉತ್ತರಕೊಟ್ಟನು. ಕೂಡಲೇ ಎಣ್ಣೆ ಉಕ್ಕುವುದು ನಿಂತುಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಪಾತ್ರೆಗಳು ತುಂಬಿದಾಗ, ಆಕೆ ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ತಂದಿಡು,” ಅನ್ನಲು ಅವನು, “ಪಾತ್ರೆಗಳು ತೀರಿಹೋದುವು,” ಎಂದು ಉತ್ತರಕೊಟ್ಟನು. ಕೂಡಲೆ ಎಣ್ಣೆ ಉಕ್ಕುವುದೂ ನಿಂತುಹೋಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಪಾತ್ರೆಗಳು ತುಂಬಿದಾಗ ಆಕೆಯು ಮಗನಿಗೆ - ಇನ್ನೊಂದು ಪಾತ್ರೆಯನ್ನು ತಂದಿಡು ಅನ್ನಲು ಅವನು - ಪಾತ್ರೆಗಳು ತೀರಿದವೆಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಆ ಪಾತ್ರೆಗಳು ತುಂಬಿದ ತರುವಾಯ ಅವಳು ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದಳು. ಮಗನು ಅವಳಿಗೆ, “ಇನ್ನೊಂದು ಪಾತ್ರೆ ಇಲ್ಲ,” ಎಂದನು. ಆಗ ಎಣ್ಣೆಯು ನಿಂತುಹೋಯಿತು. ಅಧ್ಯಾಯವನ್ನು ನೋಡಿ |