2 ಅರಸುಗಳು 4:26 - ಪರಿಶುದ್ದ ಬೈಬಲ್26 ಅವಳನ್ನು ಭೇಟಿ ಮಾಡುವುದಕ್ಕೆ ಓಡಿಹೋಗಿ ಅವಳಿಗೆ, ‘ನೀನು ಕ್ಷೇಮವಾಗಿರುವೆಯಾ? ನಿನ್ನ ಗಂಡ ಕ್ಷೇಮವಾಗಿರುವನೇ? ನಿನ್ನ ಮಗು ಕ್ಷೇಮವಾಗಿರುವುದೇ?’ ಎಂದು ಕೇಳು” ಎಂಬುದಾಗಿ ಹೇಳಿ ಕಳುಹಿಸಿದನು. ಅಂತೆಯೇ ಗೇಹಜಿಯು ಆಕೆಯನ್ನು ಕೇಳಿದನು. ಅವಳು “ಹೌದು, ಕ್ಷೇಮವಾಗಿದ್ದೇವೆ” ಎಂದು ಉತ್ತರಿಸಿದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ನೀನು, ದಯವಿಟ್ಟು ಓಡಿಹೋಗಿ ಆಕೆಯನ್ನು ಎದುರುಗೊಂಡು, “ನಿನಗೂ, ನಿನ್ನ ಗಂಡನಿಗೂ, ಮಗನಿಗೂ ಕ್ಷೇಮವೋ?” ಎಂದು ವಿಚಾರಿಸು ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ, “ಕ್ಷೇಮ” ಎಂದು ಉತ್ತರ ಕೊಟ್ಟು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 “ಅಗೋ, ಅಲ್ಲಿ ಶೂನೇಮ್ಯಳು; ನೀನು ಓಡಿಹೋಗಿ ಆಕೆಯನ್ನು ಭೇಟಿಯಾಗು; ‘ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ?’ ಎಂದು ವಿಚಾರಿಸು,” ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆ ಆ ಸೇವಕನಿಗೆ, “ಕ್ಷೇಮ,” ಎಂದು ಉತ್ತರಕೊಟ್ಟು, ಬೆಟ್ಟದ ಮೇಲಿದ್ದ ದೈವಪುರುಷನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಅಗೋ, ಅಲ್ಲಿ ಶೂನೇಮ್ಯಳು! ನೀನು ಓಡಿಹೋಗಿ ಆಕೆಯನ್ನು ಎದುರುಗೊಂಡು - ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೋ ಎಂದು ವಿಚಾರಿಸು ಎಂಬದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ - ಕ್ಷೇಮ ಎಂದು ಉತ್ತರಕೊಟ್ಟು ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ನೀನು ಅವಳನ್ನು ಎದುರುಗೊಳ್ಳಲು ಓಡಿಹೋಗಿ, ಅವಳಿಗೆ, ‘ನಿನಗೂ, ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ? ಎಂದು ಕೇಳು,’ ” ಎಂದನು. ಅವಳು, “ಕ್ಷೇಮ” ಎಂದಳು. ಅಧ್ಯಾಯವನ್ನು ನೋಡಿ |
ಆದರೆ ಶೂನೇಮಿನ ಈ ಸ್ತ್ರೀಯು ದೇವಮನುಷ್ಯನಿದ್ದ ಬೆಟ್ಟದವರೆಗೆ ಹೋದಳು. ಅವಳು ನೆಲಕ್ಕೆ ಬಾಗಿ, ಎಲೀಷನ ಪಾದಗಳನ್ನು ಹಿಡಿದುಕೊಂಡಳು. ಶೂನೇಮಿನ ಆ ಸ್ತ್ರೀಯನ್ನು ತಳ್ಳಿಬಿಡಲು ಗೇಹಜಿಯು ಹತ್ತಿರಕ್ಕೆ ಬಂದನು. ಆದರೆ ದೇವಮನುಷ್ಯನು ಗೇಹಜಿಗೆ, “ಅವಳನ್ನು ತಡೆಯಬೇಡ! ಅವಳು ಬಹಳ ತಳಮಳಗೊಂಡಿದ್ದಾಳೆ. ಯೆಹೋವನು ನನಗೆ ಆಕೆಯ ದುಃಖವನ್ನು ಪ್ರಕಟಿಸಲಿಲ್ಲ; ನನಗೆ ಮರೆಮಾಡಿದ್ದಾನೆ” ಎಂದು ಹೇಳಿದನು.