2 ಅರಸುಗಳು 4:1 - ಪರಿಶುದ್ದ ಬೈಬಲ್1 ಒಂದು ದಿನ ಪ್ರವಾದಿಮಂಡಲಿಯವರಲ್ಲೊಬ್ಬನ ಪತ್ನಿಯು ಗೋಳಾಡುತ್ತಾ ಎಲೀಷನಲ್ಲಿಗೆ ಹೋಗಿ, “ನನ್ನ ಗಂಡನು ನಿನಗೆ ಸೇವಕನಂತಿದ್ದನು. ಈಗ ನನ್ನ ಗಂಡ ಸತ್ತಿದ್ದಾನೆ! ಅವನು ಯೆಹೋವನಲ್ಲಿ ಭಯಭಕ್ತಿ ಉಳ್ಳವನಾಗಿದ್ದದು ನಿನಗೆ ತಿಳಿದಿದೆ. ಆದರೆ ಅವನು ಒಬ್ಬ ಮನುಷ್ಯನಿಗೆ ಹಣವನ್ನು ಕೊಡಬೇಕಾಗಿದೆ. ಈಗ ಆ ಮನುಷ್ಯನು ನನ್ನ ಎರಡು ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಬರುತ್ತಿದ್ದಾನೆ!” ಎಂದು ಹೇಳಿದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಒಂದು ದಿನ ಪ್ರವಾದಿ ಮಂಡಳಿಯಲ್ಲಿನ ಒಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ, “ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು. ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನು ಎಂಬುದು ನಿನಗೆ ಗೊತ್ತಿದೆಯಲ್ಲಾ. ಸಾಲಕೊಟ್ಟವನು, ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾನೆ” ಎಂದು ಮೊರೆಯಿಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಒಂದು ದಿನ ಪ್ರವಾದಿಮಂಡಲಿಯವರಲ್ಲಿ ಒಬ್ಬನ ಹೆಂಡತಿ ಎಲೀಷನನ್ನು ಭೇಟಿಯಾದಳು. ಅವನಿಗೆ, “ನಿಮ್ಮ ಸೇವಕನಾದ ನನ್ನ ಗಂಡ ಮರಣಹೊಂದಿದನು. ಅವನು ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವನಾಗಿದ್ದನೆಂಬುದು ನಿಮಗೆ ತಿಳಿದ ವಿಷಯ. ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ಗುಲಾಮರನ್ನಾಗಿ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದಾನೆ,” ಎಂದು ಮೊರೆಯಿಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಪ್ರವಾದಿಗಳ ಗುಂಪಿನಲ್ಲಿದ್ದ ಒಬ್ಬ ಪ್ರವಾದಿಯ ಹೆಂಡತಿ ಎಲೀಷನಿಗೆ ಕೂಗಿ, “ನಿನ್ನ ದಾಸನಾದ ನನ್ನ ಗಂಡನು ಮರಣಹೊಂದಿದನು. ನಿನ್ನ ದಾಸನು ಯೆಹೋವ ದೇವರಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ. ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸರಾಗಿ ತೆಗೆದುಕೊಳ್ಳಲು ಬಂದಿದ್ದಾನೆ,” ಎಂದಳು. ಅಧ್ಯಾಯವನ್ನು ನೋಡಿ |
ನಾನು ನಿಮ್ಮ ಪೂರ್ವಿಕರಿಗೆ ‘ಪ್ರತಿ ಏಳು ವರ್ಷದ ಕೊನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಬೇಕು. ತನ್ನನ್ನು ನಿಮಗೆ ಮಾರಿಕೊಂಡ ಇಬ್ರಿಯ ಸಹೋದರ ನಿಮ್ಮಲ್ಲಿದ್ದರೆ ಅವನು ಆರು ವರ್ಷ ಸೇವೆಮಾಡಿದ ನಂತರ ಅವನನ್ನು ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ; ನನ್ನ ಕಡೆಗೆ ಗಮನ ಕೊಡಲಿಲ್ಲ.
ಈ ಪುಸ್ತಕದಲ್ಲಿ ಬರೆಯಲಾಗಿರುವ ಎಲ್ಲಾ ವಿಷಯಗಳಿಂದ ನಾವು ಕಲಿತುಕೊಳ್ಳತಕ್ಕದ್ದೇನು? ಒಬ್ಬನು ಮಾಡಬಹುದಾದ ಅತ್ಯಂತ ಮುಖ್ಯವಾದ ಕಾರ್ಯವೆಂದರೆ, ದೇವರಲ್ಲಿ ಭಯಭಕ್ತಿಯಿಂದಿದ್ದು ಆತನ ಆಜ್ಞೆಗಳಿಗೆ ವಿಧೇಯನಾಗರುವುದೇ. ಯಾಕೆಂದರೆ ಜನರ ಎಲ್ಲಾ ಕಾರ್ಯಗಳೂ ರಹಸ್ಯಗಳೂ ದೇವರಿಗೆ ಗೊತ್ತಿವೆ. ಆತನು ಪ್ರತಿಯೊಂದು ಕಾರ್ಯವನ್ನೂ ತಿಳಿದಿರುವುದರಿಂದ ಪ್ರತಿಯೊಂದಕ್ಕೂ ನ್ಯಾಯತೀರ್ಪು ನೀಡುವನು.
“ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲವೆಂದು ಪ್ರಮಾಣಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಜನರು ಸಬ್ಬತ್ ದಿನದಲ್ಲಿ ಮಾರಲು ದವಸಧಾನ್ಯವನ್ನಾಗಲಿ ಬೇರೆ ವಸ್ತುಗಳನ್ನಾಗಲಿ ತಂದರೆ ನಾವು ಸಬ್ಬತ್ ದಿನದಲ್ಲಿ ಮತ್ತು ಇತರ ಯಾವುದೇ ಹಬ್ಬದ ದಿನದಲ್ಲಿ ಅವುಗಳನ್ನು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷ ನಾವು ನೆಡುವುದೂ ಇಲ್ಲ. ಹೊಲದಲ್ಲಿ ಕೆಲಸ ಮಾಡುವುದೂ ಇಲ್ಲ. ನಮಗೆ ಬೇರೆಯವರು ಕೊಡಬೇಕಾಗಿರುವ ಸಾಲವನ್ನು ಏಳನೆಯ ವರ್ಷದಲ್ಲಿ ವಜಾ ಮಾಡುತ್ತೇವೆ.
ಯೆಹೋವನು ಹೇಳುವುದೇನೆಂದರೆ: “ಇಸ್ರೇಲ್ ಜನರೇ, ನಾನು ನಿಮ್ಮ ತಾಯಿಯಾದ ಜೆರುಸಲೇಮಿಗೆ ವಿವಾಹವಿಚ್ಛೇದನ ಕೊಟ್ಟಿರುವುದಾಗಿ ಹೇಳುತ್ತೀರಿ. ಆದರೆ ನಾನು ಆಕೆಗೆ ವಿವಾಹವಿಚ್ಛೇದನ ಕೊಟ್ಟಿರುವುದಕ್ಕೆ ದಾಖಲೆ ಪತ್ರವೆಲ್ಲಿದೆ? ನನ್ನ ಮಕ್ಕಳೇ, ನಿಮ್ಮಲ್ಲಿ ಯಾರಿಗಾದರೂ ನಾನು ಸಾಲ ತೀರಿಸಬೇಕಿತ್ತೇ? ಆ ಸಾಲವನ್ನು ತೀರಿಸಲು ನಾನು ನಿಮ್ಮನ್ನು ಮಾರಿದ್ದೆನೋ, ಇಲ್ಲ. ನಾನು ನಿಮ್ಮನ್ನು ಮಾರಿಬಿಟ್ಟಿದ್ದು ನೀವು ಮಾಡಿದ ದುಷ್ಟತನಕ್ಕಾಗಿಯೇ. ನಿಮ್ಮ ತಾಯಿಯಾದ ಜೆರುಸಲೇಮನ್ನು ಕಳುಹಿಸಿಬಿಟ್ಟದ್ದು ನಿಮ್ಮ ಅಪರಾಧಗಳಿಗಾಗಿಯೇ.