2 ಅರಸುಗಳು 25:29 - ಪರಿಶುದ್ದ ಬೈಬಲ್29 ಎವೀಲ್ಮೆರೋದಕನು ಯೆಹೋಯಾಖೀನನ ಸೆರೆವಾಸದ ಬಟ್ಟೆಗಳನ್ನು ತೆಗೆಸಿ ಹೊಸ ಬಟ್ಟೆಗಳನ್ನು ತೊಡಿಸಿದನು. ಯೆಹೋಯಾಖೀನನು ಬದುಕಿರುವ ತನಕ ತನ್ನ ಪಂಕ್ತಿಯಲ್ಲಿ ಊಟಮಾಡಲು ಎವೀಲ್ಮೆರೋದಕನು ಅವಕಾಶ ಮಾಡಿಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಎವೀಲ್ಮೆರೋದಕನು ಯೆಹೋಯಾಖೀನನ ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದಿರುವವರೆಗೂ ಅರಸನ ಪಂಕ್ತಿಯಲ್ಲಿ ಊಟಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಯೆಹೋಯಾಖೀನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದ ಇರುವವರೆಗೂ, ಅರಸನ ಪಂಕ್ತಿಯಲ್ಲೇ ಊಟಮಾಡುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಯೆಹೋಯಾಖೀನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ ಜೀವದಿಂದಿರುವವರೆಗೂ ಅರಸನ ಪಂಕ್ತಿಯಲ್ಲಿ ಊಟ ಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಅವನ ಸೆರೆಯ ವಸ್ತ್ರಗಳನ್ನು ತೆಗೆದು ರಾಜವಸ್ತ್ರ ತೊಡಿಸಿದನು. ಹೀಗೆ ಯೆಹೋಯಾಖೀನನು ಬದುಕಿದ ಸಕಲ ದಿವಸಗಳಲ್ಲಿ ಅರಸನ ಪಂಕ್ತಿಯಲ್ಲಿಯೇ ಊಟಮಾಡುತ್ತಿದ್ದನು. ಅಧ್ಯಾಯವನ್ನು ನೋಡಿ |
ಚೀಯೋನಿನಲ್ಲಿ ದುಃಖಿಸುವ ಜನರ ಬಳಿಗೆ ನನ್ನನ್ನು ಕಳುಹಿಸಿದನು. ನಾನು ಅವರನ್ನು ಉತ್ಸವಕ್ಕಾಗಿ ಸಿದ್ಧಪಡಿಸುವೆನು. ಅವರ ತಲೆಯ ಮೇಲಿರುವ ಬೂದಿಯನ್ನು ತೆಗೆದುಹಾಕಿ ಅದರ ಬದಲಾಗಿ ಕಿರೀಟವನ್ನು ತೊಡಿಸುವೆನು. ಅವರ ದುಃಖವನ್ನು ತೆಗೆದುಹಾಕಿ ಅವರಿಗೆ ತೈಲವೆಂಬ ಸಂತೋಷವನ್ನು ಅನುಗ್ರಹಿಸುವೆನು. ಅವರ ದುಃಖವನ್ನೆಲ್ಲಾ ನಿವಾರಿಸಿ ಉತ್ಸವಕ್ಕಾಗಿ ಅವರಿಗೆ ಬಟ್ಟೆಯನ್ನು ತೊಡಿಸುವೆನು. ಅವರನ್ನು ಒಳ್ಳೆಯ ಮರಗಳೆಂತಲೂ ದೇವರ ಆಶ್ಚರ್ಯಕರವಾದ ಸಸಿಯೆಂತಲೂ ಕರೆಯುವದಕ್ಕಾಗಿ ದೇವರೇ ನನ್ನನ್ನು ಕಳುಹಿಸಿದನು.”