Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 22:4 - ಪರಿಶುದ್ದ ಬೈಬಲ್‌

4 ಯೋಷೀಯನು, “ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ದ್ವಾರಪಾಲಕರು ಜನರಿಂದ ಒಟ್ಟುಗೂಡಿಸಿರುವ ಹಣವನ್ನು ಅವನು ಲೆಕ್ಕಿಸಲಿ. ಜನರು ದೇವಾಲಯಕ್ಕೆ ತೆಗೆದುಕೊಂಡು ಬಂದು ಕೊಟ್ಟ ಹಣವೇ ಇದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ, ಅವನಿಗೆ ದ್ವಾರಪಾಲಕರು ಯೆಹೋವನ ಆಲಯಕ್ಕೆ ಬರುವ ಜನರಿಂದ ಕೂಡಿಸಿದ ಹಣವನ್ನು ಲೆಕ್ಕಿಸಬೇಕು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 “ನೀನು ಪ್ರಧಾನ ಯಾಜಕ ಹಿಲ್ಕೀಯನ ಬಳಿಗೆ ಹೋಗಿ ಅವನಿಗೆ, ‘ದ್ವಾರಪಾಲಕರು ಸರ್ವೇಶ್ವರನ ಆಲಯಕ್ಕೆ ಬರುವ ಜನರಿಂದ ಸಂಗ್ರಹಿಸಿದ ಹಣವನ್ನು ಲೆಕ್ಕಮಾಡಿ ಆಲಯದ ಕೆಲಸ ಮಾಡಿಸುವ ಮೇಸ್ತ್ರಿಗಳಿಗೆ ಅದನ್ನು ಒಪ್ಪಿಸು,’ ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ ಅವನಿಗೆ - ದ್ವಾರಪಾಲಕರು ಯೆಹೋವನ ಆಲಯಕ್ಕೆ ಬರುವ ಜನರಿಂದ ಕೂಡಿಸಿದ ಹಣವನ್ನು ಲೆಕ್ಕಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ಅವನು ಯೆಹೋವ ದೇವರ ಆಲಯದ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 22:4
14 ತಿಳಿವುಗಳ ಹೋಲಿಕೆ  

ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.


ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ. ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.


ದ್ವಾರಪಾಲಕರಲ್ಲಿ: ಅಕ್ಕೂಬ್, ಟಲ್ಮೋನ್ ಮತ್ತು ಅವರ ನೂರ ಎಪ್ಪತ್ತೆರಡು ಮಂದಿ ಸಹೋದರರು. ಅವರು ನಗರದ ಬಾಗಿಲುಗಳನ್ನು ಕಾವಲು ಕಾಯುವವರಾಗಿದ್ದರು.


ದಾವೀದನು ಹೇಳಿದ ಪ್ರಕಾರ ಸೊಲೊಮೋನನು ಯಾಜಕರನ್ನು ಸರದಿಯ ಪ್ರಕಾರ ಸೇವೆಗೆ ನೇಮಿಸಿದನು. ಲೇವಿಯರನ್ನು ಆಯಾಕೆಲಸಕ್ಕೆ ನೇಮಿಸಿದನು. ಅವರು ಗಾಯನದಲ್ಲಿಯೂ ಯಾಜಕರ ಕೆಲಸಗಳಲ್ಲಿ ಸಹಾಯಕರಾಗಿಯೂ ದೇವಾಲಯದ ಕೆಲಸದಲ್ಲಿ ಪಾಲುತೆಗೆದುಕೊಂಡರು. ದ್ವಾರಪಾಲಕರ ಕೆಲಸಕ್ಕೆ ಸೊಲೊಮೋನನು ಜನರನ್ನು ಆರಿಸಿ ದ್ವಾರಗಳನ್ನು ಕಾಯುವುದಕ್ಕೆ ಅವರನ್ನು ನೇಮಿಸಿದನು. ದೇವಮನುಷ್ಯನಾದ ದಾವೀದನು ಹೀಗೆಯೇ ಮಾಡಬೇಕೆಂದು ತಿಳಿಸಿದ್ದನು.


ಶಲ್ಲೂಮನು ಕೋರೇಯ ಮಗನು. ಕೋರೇಯ ಎಬ್ಯಾಸಾಫನ ಮಗನು. ಎಬ್ಯಾಸಾಫನು ಕೋರಹನ ಮಗನು. ಶಲ್ಲೂಮನೂ ಅವನ ಸಹೋದರರೂ ದ್ವಾರಪಾಲಕರಾಗಿದ್ದರು. ಅವರೆಲ್ಲರೂ ಕೋರಹನ ಸಂತತಿಯವರು. ಪವಿತ್ರಗುಡಾರದ ಬಾಗಿಲುಗಳನ್ನು ಕಾಯುವ ಜವಾಬ್ದಾರಿಕೆ ಇವರದಾಗಿತ್ತು. ತಮ್ಮ ಪೂರ್ವಿಕರು ಮಾಡಿದ್ದಂತೆಯೇ ಅವರು ಈ ಕೆಲಸವನ್ನು ಮಾಡಿದರು. ಯೆಹೋವನ ಪಾಳೆಯದ ಪ್ರವೇಶದ್ವಾರವನ್ನು ಕಾಯುವುದು ಅವರ ಪೂರ್ವಿಕರ ಉದ್ಯೋಗವಾಗಿತ್ತು.


ಅಜರ್ಯ. ಅಜರ್ಯನು ಹಿಲ್ಕೀಯನ ಮಗ; ಹಿಲ್ಕೀಯನು ಮೆಷುಲ್ಲಾಮನ ಮಗ; ಮೆಷುಲ್ಲಾಮನು ಚಾದೋಕನ ಮಗ; ಚಾದೋಕನು ಮೆರಾಯೋತನ ಮಗ; ಮೆರಾಯೋತನು ಅಹೀಟೂಬನ ಮಗ. ಅಹೀಟೂಬನು ದೇವಾಲಯದ ಒಬ್ಬ ವಿಶೇಷ ಅಧಿಕಾರಿಯಾಗಿದ್ದನು.


ಶಲ್ಲೂಮನು ಹಿಲ್ಕೀಯನ ತಂದೆ. ಹಿಲ್ಕೀಯನು ಅಜರ್ಯನ ತಂದೆ.


ಈ ಜನರು ರಾಜನನ್ನು ಕರೆದರು. ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಅವರನ್ನು ಭೇಟಿಮಾಡಲು ಹೊರಗೆ ಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು