Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 21:15 - ಪರಿಶುದ್ದ ಬೈಬಲ್‌

15 ಏಕೆಂದರೆ ನಾನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ನನ್ನ ಜನರು ಮಾಡಿದರು. ಅವರ ಪೂರ್ವಿಕರು ಈಜಿಪ್ಟಿನಿಂದ ಹೊರಬಂದ ದಿನದಿಂದ ಅವರು ನನ್ನನ್ನು ರೇಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅವರು ತಮ್ಮ ಪೂರ್ವಿಕರ ಕಾಲದಲ್ಲಿ ಐಗುಪ್ತದೇಶವನ್ನು ಬಿಟ್ಟುಬಂದರೂ ತಮ್ಮ ಪಾಪಗಳನ್ನು ಬಿಡದೆ ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ” ಎಂದು ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅವರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ಪಿತೃಗಳ ಕಾಲ ಮೊದಲ್ಗೊಂಡು ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ,” ಎಂದು ಹೇಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅವರು ಐಗುಪ್ತದೇಶವನ್ನು ಬಿಟ್ಟು ಬಂದ ಪಿತೃಗಳ ಕಾಲ ಮೊದಲುಗೊಂಡು ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ ಎಂದು ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಏಕೆಂದರೆ ಅವರ ತಂದೆಗಳು ಈಜಿಪ್ಟಿನಿಂದ ಹೊರಟ ದಿವಸ ಮೊದಲುಗೊಂಡು, ಇಂದಿನವರೆಗೂ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ, ಎಂದು ಹೇಳುತ್ತಾರೆ,” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 21:15
20 ತಿಳಿವುಗಳ ಹೋಲಿಕೆ  

ಅವರು ಈಜಿಪ್ಟಿನಲ್ಲಿ ಇನ್ನೂ ಎಳೆ ಪ್ರಾಯದಲ್ಲಿರುವಾಗಲೇ ಸೂಳೆಯರಾದರು. ಈಜಿಪ್ಟಿನಲ್ಲಿ ಅವರು ಮೊದಲ ಬಾರಿ ಸಂಭೋಗಿಸಿದರು. ಪುರುಷರು ತಮ್ಮ ಮೊಲೆತೊಟ್ಟುಗಳನ್ನು ಮುಟ್ಟಿ ಅವರ ಎಳೆಸ್ತನಗಳನ್ನು ಹಿಡಿಯಲು ಬಿಟ್ಟರು.


ದೇವರು ಹೇಳಿದ್ದೇನೆಂದರೆ, “ಇಸ್ರೇಲ್ ಜನರು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ನೀನು ಹೋಗಿ ಅವರಿಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಪೂರ್ವಿಕರು ಮಾಡಿದಂತೆಯೇ ನೀವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನೀವು ಸೂಳೆಯರ ಹಾಗೆ ವರ್ತಿಸಿರುತ್ತೀರಿ. ನಿಮ್ಮ ಪೂರ್ವಿಕರು ಪೂಜಿಸಿದ ಆ ಭಯಂಕರವಾದ ವಿಗ್ರಹಗಳೊಂದಿಗೆ ಇರುವದಕ್ಕಾಗಿ ನನ್ನನ್ನು ನೀವು ತೊರೆದುಬಿಟ್ಟಿರಿ.


“‘ಆದರೆ ಅವರ ಮಕ್ಕಳು ನನಗೆ ವಿರುದ್ಧವಾಗಿ ದಂಗೆ ಎದ್ದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ಅವರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಾನು ಹೇಳಿದ್ದನ್ನು ಅವರು ಮಾಡಲಿಲ್ಲ. ಅವು ಒಳ್ಳೆಯ ಕಟ್ಟಳೆಗಳಾಗಿದ್ದವು. ಅವುಗಳಿಗೆ ವಿಧೇಯರಾಗುವವರು ಜೀವಿಸುವರು. ಅವರು ನನ್ನ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಆದ್ದರಿಂದ ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆನು. ನನ್ನ ಕೋಪದ ತೀಕ್ಷ್ಣತೆಯನ್ನು ಅವರು ತಿಳಿದುಕೊಳ್ಳಬೇಕೆಂದು ತೀರ್ಮಾನಿಸಿದೆನು.


“‘ಆದರೆ ಇಸ್ರೇಲ್ ಜನರು ಅಡವಿಯಲ್ಲಿರುವಾಗ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನ್ನ ಆಜ್ಞೆಗಳನ್ನು ಅವರು ಅನುಸರಿಸಲಿಲ್ಲ. ನನ್ನ ನಿಯಮಗಳಿಗೆ ವಿಧೇಯರಾಗಲು ನಿರಾಕರಿಸಿದರು. ಆ ಆಜ್ಞೆಗಳೆಲ್ಲಾ ನ್ಯಾಯವಾದವುಗಳೇ. ಒಬ್ಬನು ಆ ಆಜ್ಞೆಗಳಿಗೆ ವಿಧೇಯನಾದರೆ ಅವನು ಬಾಳುವನು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ವಿಶೇಷವಾಗಿ ಅಲಕ್ಷ್ಯ ಮಾಡಿದರು. ಆ ದಿವಸಗಳಲ್ಲಿ ಅವರು ಎಷ್ಟೋ ಸಾರಿ ಕೆಲಸ ಮಾಡಿದರು. ನನ್ನ ರೌದ್ರದ ತೀವ್ರತೆಯನ್ನು ಅವರು ಅರಿತುಕೊಳ್ಳಲೆಂದು ನಾನು ಅವರನ್ನು ಅಡವಿಯಲ್ಲಿ ದಂಡಿಸಿ ನಾಶಮಾಡಲು ಆಲೋಚಿಸಿಕೊಂಡೆನು.


ನರಪುತ್ರನೇ, ನೀನು ಅವರ ನ್ಯಾಯತೀರಿಸುವಿಯಾ? ಅವರ ಪೂರ್ವಿಕರು ಮಾಡಿದ ಭಯಂಕರ ಸಂಗತಿಗಳನ್ನು ನೀನು ಅವರಿಗೆ ಹೇಳಬೇಕು.


ನನ್ನ ಮರಣದ ಬಳಿಕ ನೀವು ಕೆಟ್ಟಕಾರ್ಯಗಳನ್ನು ಮಾಡುವಿರೆಂದು ನನಗೆ ಗೊತ್ತಿದೆ; ನನ್ನ ಅಪ್ಪಣೆಗಳನ್ನು ಮೀರುವಿರಿ. ನಿಮಗೆ ಭಯಂಕರ ಸಂಗತಿಗಳು ಸಂಭವಿಸುವವು. ಯಾಕೆಂದರೆ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸುವಿರಿ” ಎಂದು ಹೇಳಿದನು.


ನೀವು ಹಠಮಾರಿಗಳೆಂದು ನಾನು ಬಲ್ಲೆನು. ನಾನು ನಿಮ್ಮೊಂದಿಗೆ ಇದ್ದಾಗಲೇ ನೀವು ಯೆಹೋವನಿಗೆ ವಿಧೇಯರಾಗಲಿಲ್ಲ. ಆದ್ದರಿಂದ ನಾನು ಸತ್ತ ಬಳಿಕ ಆತನ ಮಾತುಗಳನ್ನು ನೀವು ಕೇಳುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು.


ನೀವು ಮಾಡಿದ ಬಂಗಾರದ ಬಸವನನ್ನು ತೆಗೆದುಕೊಂಡು ಚೂರುಚೂರು ಮಾಡಿ, ಬೆಂಕಿಯಲ್ಲಿ ಸುಟ್ಟುಬಿಟ್ಟೆನು. ಮತ್ತೆ ಅದನ್ನು ಒಡೆದು ಧೂಳನ್ನಾಗಿ ಮಾಡಿ ಆ ಧೂಳನ್ನು ಬೆಟ್ಟದಿಂದ ಹರಿಯುತ್ತಿದ್ದ ನದಿಯಲ್ಲಿ ಬಿಸಾಡಿಬಿಟ್ಟೆನು.


ಆದರೂ ಅಲ್ಲಿ ನನ್ನ ಕೆಲವು ಜನರು ಉಳಿದುಕೊಳ್ಳುತ್ತಾರೆ. ನಾನು ಅವರನ್ನು ಬಿಟ್ಟುಬಿಡುತ್ತೇನೆ. ನಾನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುತ್ತೇನೆ. ಅವರ ಶತ್ರುಗಳು ಅವರನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಳ್ಳುವರು; ಯುದ್ಧಗಳಲ್ಲಿ ಸೈನಿಕರು ವಶಪಡಿಸಿಕೊಳ್ಳುವ ಬೆಲೆಯುಳ್ಳ ವಸ್ತುಗಳಂತೆ ಅವರಿರುವರು.


ಮನಸ್ಸೆಯು ಅನೇಕ ನಿರಪರಾಧಿಗಳನ್ನು ಕೊಂದುಹಾಕಿದನು; ಜೆರುಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ರಕ್ತದಿಂದ ತುಂಬಿಸಿದನು. ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದ್ದರ ಜೊತೆಗೆ ಅವನ ಈ ಪಾಪಗಳು ಕೂಡಿಕೊಂಡವು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೂದವು ಮಾಡುವಂತೆ ಮನಸ್ಸೆಯು ಪ್ರೇರೇಪಿಸಿದನು.’”


“ನೀವು ನನ್ನ ಮಾತನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ. “ನೀವು ಮನುಷ್ಯನು ಮಾಡಿದ ವಿಗ್ರಹಗಳನ್ನು ಪೂಜಿಸಿದಿರಿ. ಅದೇ ನನಗೆ ಕೋಪ ತಂದಿತು. ಅದು ನಿಮಗೇ ಕೇಡನ್ನು ಉಂಟುಮಾಡಿತು.”


ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು.


ಯೆಹೂದದ ಜನರನ್ನು ಭೂಲೋಕದ ಎಲ್ಲಾ ಜನರಿಗೆ ಒಂದು ಭಯಾನಕವಾದ ಉದಾಹರಣೆಯಾಗುವಂತೆ ಮಾಡುತ್ತೇನೆ. ಮನಸ್ಸೆಯು ಜೆರುಸಲೇಮಿನಲ್ಲಿ ಮಾಡಿದ ಪಾಪಕೃತ್ಯಗಳ ಫಲವಾಗಿ ನಾನು ಯೆಹೂದದಲ್ಲಿ ಹೀಗೆ ಮಾಡುತ್ತೇನೆ. ಮನಸ್ಸೆಯು ರಾಜನಾದ ಹಿಜ್ಕೀಯನ ಮಗನಾಗಿದ್ದನು. ಮನಸ್ಸೆಯು ಯೆಹೂದದ ರಾಜನಾಗಿದ್ದನು.’


ಜೆರುಸಲೇಮಿನ ಶತ್ರುಗಳು ಗೆದ್ದಿದ್ದಾರೆ. ಅವಳ ಶತ್ರುಗಳು ಜಯಶೀಲರಾಗಿದ್ದಾರೆ. ಯೆಹೋವನು ಅವಳನ್ನು ದಂಡಿಸಿದ ಕಾರಣ ಹೀಗಾಯಿತು. ಅವಳ ಅನೇಕ ಪಾಪಗಳಿಗಾಗಿ ಆತನು ಜೆರುಸಲೇಮನ್ನು ದಂಡಿಸಿದನು. ಅವಳ ಮಕ್ಕಳು ದೂರಹೋಗಿದ್ದಾರೆ. ಅವರು ವೈರಿಗಳ ಸೆರೆಯಾಳುಗಳಾಗಿ ದೂರ ಹೋಗಿದ್ದಾರೆ.


“ನಮ್ಮ ದೇವರಾದ ಯೆಹೋವನೇ, ನೀನು ನಿನ್ನ ಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ತೆಗೆದುಕೊಂಡು ಬಂದೆ. ನಾವು ನಿನ್ನ ಜನರಾಗಿದ್ದೇವೆ. ನೀನು ಕರುಣೆ ತೋರುವುದರಲ್ಲಿ ಇಂದಿಗೂ ಸುಪ್ರಸಿದ್ಧನಾಗಿರುವೆ. ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ಬಹಳ ಹೀನಕೃತ್ಯಗಳನ್ನು ಮಾಡಿದ್ದೇವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು