ನನ್ನ ಜೀವದಾಣೆ, ಮೋವಾಬ್ಯರೂ ಅಮ್ಮೋನ್ಯರೂ ಸೊದೋಮ್ ಗೊಮೋರದವರಂತೆ ನಾಶವಾಗುವರು. ನಾನು ಸರ್ವಶಕ್ತನಾದ ಇಸ್ರೇಲರ ದೇವರಾಗಿರುವೆನು. ನಾನು ವಾಗ್ದಾನ ಮಾಡುವದೇನೆಂದರೆ, ಆ ರಾಜ್ಯಗಳು ಸಂಪೂರ್ಣವಾಗಿ ನಾಶವಾಗುವವು. ಅವರ ಭೂಮಿಯು ಕಳೆಗಳಿಂದ ತುಂಬಿಹೋಗುವದು. ಅದು ಮೃತ್ಯುಸಮುದ್ರದ ಉಪ್ಪಿನಿಂದ ತುಂಬಿಹೋದಂತಿರುವದು. ನನ್ನ ಜನರಲ್ಲಿ ಉಳಿದವರು ಅವರ ದೇಶವನ್ನೂ ಅಲ್ಲಿ ಉಳಿದಿರುವ ವಸ್ತುಗಳನ್ನೂ ತಮ್ಮ ವಶಮಾಡಿಕೊಳ್ಳುವರು.”
ಆ ಇಡೀ ದಿವಸ ಅಬೀಮೆಲೆಕ ಮತ್ತು ಅವನ ಜನರು ಶೆಕೆಮಿನ ಜನರೊಂದಿಗೆ ಯುದ್ಧ ಮಾಡಿದರು. ಅಬೀಮೆಲೆಕ ಮತ್ತು ಅವನ ಜನರು ಶೆಕೆಮ್ ನಗರವನ್ನು ಸ್ವಾಧೀನಪಡಿಸಿಕೊಂಡರು; ಆ ನಗರದ ಜನರನ್ನು ಕೊಂದುಹಾಕಿದರು. ಅಬೀಮೆಲೆಕನು ಊರನ್ನು ಕೆಡವಿ ಹಾಕಿ ಉಪ್ಪನ್ನು ಚೆಲ್ಲಿದನು.
ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.
ನಂತರ ಎಲೀಷನು ನೆಲದಿಂದ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋದನು. ಎಲೀಷನು ಉಪ್ಪನ್ನು ನೀರಿನಲ್ಲಿ ಎಸೆದು, “‘ನಾನು ಈ ನೀರನ್ನು ಶುಚಿಗೊಳಿಸಿದ್ದೇನೆ! ಇಲ್ಲಿಂದಾಚೆಗೆ ಈ ನೀರು ಯಾರಿಗೂ ಸಾವನ್ನು ಮತ್ತು ಬಂಜೆತನವನ್ನು ಉಂಟುಮಾಡುವುದಿಲ್ಲ ಮತ್ತು ಈ ಭೂಮಿಯಲ್ಲಿ ಬೆಳೆಗಳು ಬೆಳೆಯುತ್ತವೆ’ ಎಂದು ಯೆಹೋವನು ಹೇಳುತ್ತಾನೆ” ಎಂದನು.