2 ಅರಸುಗಳು 16:18 - ಪರಿಶುದ್ದ ಬೈಬಲ್18 ಅಹಾಜನು ಸಬ್ಬತ್ ದಿನಕ್ಕಾಗಿ ಕಟ್ಟಿದ ಮಂಟಪವನ್ನು ಬದಲಾಯಿಸಿದನು. ಕೆಲಸಗಾರರು ಆಲಯದ ಒಳಗೆ ಇದನ್ನು ನಿರ್ಮಿಸಿದ್ದರು. ಅಹಾಜನು ರಾಜನಿಗಾಗಿ ಇದ್ದ ಹೊರಭಾಗದ ಬಾಗಿಲನ್ನು ಬದಲಾಯಿಸಿದನು. ಅಹಾಜನು ದೇವಾಲಯದಿಂದ ಇವುಗಳನ್ನೆಲ್ಲಾ ಅಶ್ಶೂರದ ರಾಜನ ದೆಸೆಯಿಂದ ಬದಲಾಯಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಯೆಹೋವನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲ್ಪಟ್ಟಿದ್ದ ಮಂಟಪವನ್ನು ಹಾಗೂ ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಅಶ್ಶೂರದ ಅರಸನಾದ ಈ ಆಹಾಜನೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಸರ್ವೇಶ್ವರನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಈ ಆಹಾಜನೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಯೆಹೋವನ ಆಲಯದ ಪ್ರಾಕಾರದೊಳಗೆ ಸಬ್ಬತ್‍ದಿನದ ಆರಾಧನೆಗಾಗಿ ರಾಜರಿಗೆ ಕಟ್ಟಲ್ಪಟ್ಟಿದ್ದ ಮಂಟಪವನ್ನೂ ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಲನ್ನೂ ಬದಲಾಯಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಯೆಹೋವ ದೇವರ ಆಲಯದ ಪ್ರಾಕಾರದ ಒಳಗೆ ಸಬ್ಬತ್ ದಿನದ ಆರಾಧನೆಗಾಗಿ, ರಾಜರಿಗಾಗಿ ಕಟ್ಟಲಾಗಿದ್ದ ಮಂಟಪವನ್ನು ಹಾಗು ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದನು, ಇವುಗಳನ್ನೆಲ್ಲ ಅಸ್ಸೀರಿಯದ ಅರಸನ ನಿಮಿತ್ತವಾಗಿ ಆಹಾಜನೇ ಬದಲಾಯಿಸಿದನು. ಅಧ್ಯಾಯವನ್ನು ನೋಡಿ |