2 ಅರಸುಗಳು 12:17 - ಪರಿಶುದ್ದ ಬೈಬಲ್17 ಹಜಾಯೇಲನು ಅರಾಮ್ಯರ ರಾಜನಾಗಿದ್ದನು. ಹಜಾಯೇಲನು ಗತ್ ಊರನ್ನೂ ಸೋಲಿಸಿದನು. ಆಗ ಅವನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಹೋಗಲು ಯೋಚಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆ ಹಾಕಿ, ಅದನ್ನು ಸ್ವಾಧೀನಪಡಿಸಿಕೊಂಡನು. ಅಲ್ಲಿಂದ ಅವನು ಯೆರೂಸಲೇಮಿಗೆ ವಿರೋಧವಾಗಿ ಹೊರಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಇದೇ ಕಾಲದಲ್ಲಿ ಸಿರಿಯಾದವರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಜೆರುಸಲೇಮಿಗೆ ದಾಳಿಯಿಡಲು ಹೊರಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಯೆರೂಸಲೇವಿುಗೆ ವಿರೋಧವಾಗಿ ಹೊರಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಈ ಸಮಯದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ, ಅದನ್ನು ವಶಪಡಿಸಿಕೊಂಡನು. ನಂತರ ಹಜಾಯೇಲನು ಯೆರೂಸಲೇಮಿನ ಮೇಲೆ ದಾಳಿಮಾಡಲು ಹೊರಟನು. ಅಧ್ಯಾಯವನ್ನು ನೋಡಿ |
ಉತ್ತರದ ರಾಜನು ತನ್ನ ಸರ್ವಶಕ್ತಿಯಿಂದ ದಕ್ಷಿಣದ ರಾಜನೊಂದಿಗೆ ಹೋರಾಡಲು ನಿರ್ಧರಿಸುವನು. ಅವನು ದಕ್ಷಿಣದ ರಾಜನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವನು. ಉತ್ತರದ ರಾಜನು ತನ್ನ ಮಗಳನ್ನು ದಕ್ಷಿಣದ ರಾಜನಿಗೆ ಮದುವೆ ಮಾಡಿಕೊಡುವನು. ದಕ್ಷಿಣದ ರಾಜನನ್ನು ಸೋಲಿಸುವ ಉದ್ದೇಶದಿಂದ ಉತ್ತರದ ರಾಜನು ಹೀಗೆ ಮಾಡುವನು. ಆದರೆ ಅವನ ತಂತ್ರಗಳು ಯಶಸ್ವಿಯಾಗುವದಿಲ್ಲ. ಅವುಗಳಿಂದ ಅವನಿಗೆ ಸಹಾಯ ಸಿಕ್ಕುವದಿಲ್ಲ.