13-14 ಜನರು ದೇವಾಲಯಕ್ಕೆ ಹಣವನ್ನು ಕೊಟ್ಟರು. ಆದರೆ ಯಾಜಕರು ಆ ಹಣವನ್ನು ಬೆಳ್ಳಿಯ ಬಟ್ಟಲು, ಕತ್ತರಿ, ಬೋಗುಣಿ, ತುತ್ತೂರಿ ಅಥವಾ ಬೆಳ್ಳಿಬಂಗಾರಗಳ ಪಾತ್ರೆಗಳಿಗೆ ಉಪಯೋಗಿಸದೆ ಕೆಲಸಗಾರರ ವೇತನಕ್ಕೆ ಉಪಯೋಗಿಸಿದರು. ಆ ಕೆಲಸಗಾರರು ದೇವಾಲಯವನ್ನು ಸರಿಪಡಿಸಿದರು.
13 ಯೆಹೋವನ ಆಲಯದೊಳಗೆ ತಂದ ಹಣದಿಂದ ಬೆಳ್ಳಿಯ ಬಟ್ಟಲುಗಳನ್ನು, ಕತ್ತರಿಗಳನ್ನು, ಬೋಗುಣಿಗಳನ್ನು, ತುತ್ತೂರಿಗಳನ್ನೂ, ಬೆಳ್ಳಿ ಬಂಗಾರದ ಪಾತ್ರೆ ಇವುಗಳನ್ನು ಮಾಡುವುದಕ್ಕಾಗಿ ಉಪಯೋಗಿಸುತ್ತಿರಲಿಲ್ಲ.
ಕೆಲಸಗಾರರು ತಮ್ಮ ಕೆಲಸವು ಮುಗಿದ ಬಳಿಕ ಉಳಿದ ಹಣವನ್ನು ಅರಸನಾದ ಯೆಹೋವಾಷನಿಗೆ ಮತ್ತು ಯೆಹೋಯಾದನಿಗೆ ತಂದುಕೊಟ್ಟರು. ಆ ಹಣವನ್ನು ದೇವಾಲಯದ ಉಪಕರಣಗಳನ್ನು ಮಾಡಿಸಲು ಉಪಯೋಗಿಸಿದರು. ಅವು ದೇವಾಲಯದೊಳಗಿನ ಸೇವೆಗೂ ಸರ್ವಾಂಗಹೋಮಕ್ಕೂ ಉಪಯುಕ್ತವಾಗಿದ್ದವು. ಮಾತ್ರವಲ್ಲದೆ ಬೆಳ್ಳಿಬಂಗಾರಗಳಿಂದ ಬೋಗುಣಿ ಮತ್ತು ಇತರ ವಸ್ತುಗಳನ್ನು ಮಾಡಿದರು. ಯೆಹೋಯಾದನು ಜೀವದಿಂದಿರುವ ತನಕ ಪ್ರತೀ ದಿವಸ ಸರ್ವಾಂಗಹೋಮವನ್ನರ್ಪಿಸುತ್ತಿದ್ದನು.
ಸೆರೆಯಿಂದ ಹಿಂತಿರುಗಿಬಂದ ಜನರು ಬಡಗಿಗಳಿಗೂ ಕಲ್ಲುಕುಟಿಗರಿಗೂ ಹಣ ಕೊಟ್ಟರು. ಲೆಬನೋನಿನಿಂದ ದೇವದಾರು ಮರಗಳನ್ನು ಸಾಗಿಸುವ ತೂರ್ಯರಿಗೆ ಮತ್ತು ಚೀದೋನ್ಯರಿಗೆ ಆಹಾರಪದಾರ್ಥಗಳನ್ನು, ಆಲಿವ್ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಸಂಬಳವಾಗಿ ಕೊಟ್ಟರು. ಸೊಲೊಮೋನನು ಮೊದಲನೆಯ ದೇವಾಲಯವನ್ನು ಕಟ್ಟುವಾಗ ಅದಕ್ಕೆ ಬೇಕಾದ ಮರಗಳನ್ನು ಸಮುದ್ರಮಾರ್ಗವಾಗಿ ತಂದಂತೆಯೇ ಇವರೂ ಜೆರುಸಲೇಮಿಗೆ ಸಮೀಪವಿರುವ ಯೊಪ್ಪಕ್ಕೆ ಸಮುದ್ರಮಾರ್ಗವಾಗಿ ತಂದರು. ಪರ್ಶಿಯಾದ ಅರಸನಾದ ಸೈರಸನ ಆಜ್ಞೆಗನುಸಾರವಾಗಿ ಇವೆಲ್ಲವೂ ಮಾಡಲ್ಪಟ್ಟವು.