Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 11:1 - ಪರಿಶುದ್ದ ಬೈಬಲ್‌

1 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗ ಸತ್ತದ್ದನ್ನು ನೋಡಿದಳು. ಅವಳು ಮೇಲೆದ್ದು ರಾಜನ ಕುಟುಂಬವನ್ನೆಲ್ಲ ಕೊಂದುಬಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅಹಜ್ಯನು ಮರಣಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಪಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದಾಗ ರಾಜಸಂತಾನದವರನ್ನೆಲ್ಲಾ ಬೇಗನೆ ಸಂಹರಿಸಿಬಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅಹಜ್ಯನು ಮರಣಹೊಂದಿದನೆಂಬದನ್ನು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಫಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 11:1
17 ತಿಳಿವುಗಳ ಹೋಲಿಕೆ  

ಏಳನೇ ತಿಂಗಳಿನಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನಲ್ಲಿಗೆ ಬಂದನು. ಇಷ್ಮಾಯೇಲನು ತನ್ನ ಹತ್ತು ಮಂದಿಯೊಂದಿಗೆ ಬಂದನು. ಆ ಜನರು ಮಿಚ್ಫ ಪಟ್ಟಣಕ್ಕೆ ಬಂದರು. ಇಷ್ಮಾಯೇಲನು ರಾಜವಂಶೀಯನಾಗಿದ್ದನು. ಅವನು ಯೆಹೂದದ ರಾಜನ ಒಬ್ಬ ಅಧಿಕಾರಿಯಾಗಿದ್ದನು. ಇಷ್ಮಾಯೇಲ್ ಮತ್ತು ಅವನ ಜನರು ಗೆದಲ್ಯನೊಂದಿಗೆ ಊಟಮಾಡಿದರು.


ಆದರೆ ಏಳನೆಯ ತಿಂಗಳಲ್ಲಿ, ರಾಜನ ಕುಲದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತು ಜನರೊಂದಿಗೆ ಬಂದು ಗೆದಲ್ಯನನ್ನು ಕೊಂದುಹಾಕಿದನು. ಇಷ್ಮಾಯೇಲ ಮತ್ತು ಅವನ ಜನರು ಮಿಚ್ಛದಲ್ಲಿ ಗೆದಲ್ಯನ ಜೊತೆಗಿದ್ದ ಯೆಹೂದ್ಯರನ್ನು ಮತ್ತು ಬಾಬಿಲೋನಿನವರನ್ನು ಕೊಂದುಹಾಕಿದರು.


ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು.


ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು.


ಯೆಹೂದದ ರಾಜನಾದ ಅಹಜ್ಯನು ಇದನ್ನು ಕಂಡು ತೋಟದ ಮನೆಯ ಮೂಲಕ ಓಡಿಹೋದನು. ಯೇಹು ಅವನನ್ನು ಹಿಂಬಾಲಿಸಿಕೊಂಡು ಹೋಗಿ, “ಅಹಜ್ಯನನ್ನೂ ಅವನ ರಥದಲ್ಲಿಯೇ ಹೊಡೆಯಿರಿ!” ಎಂದು ಹೇಳಿದನು. ಯೇಹುವಿನ ಜನರು ಅಹಜ್ಯನನ್ನು ಇಬ್ಲೆಯಾಮಿನ ಬಳಿಯಿರುವ ಗೂರ್‌ನಲ್ಲಿ ಹೊಡೆದುಹಾಕಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋದರೂ ಅಲ್ಲಿ ಸತ್ತುಹೋದನು.


ಅಹಜ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಅತಲ್ಯ. ಅವಳು ಇಸ್ರೇಲಿನ ರಾಜನಾದ ಒಮ್ರಿಯ ಮಗಳು.


ಜ್ಞಾನಿಗಳು ಹೊರಟುಹೋದ ನಂತರ ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ಹೆರೋದನು ಮಗುವನ್ನು ಹುಡುಕಲು ಪ್ರಾರಂಭಿಸುವನು. ಅವನು ಮಗುವನ್ನು ಕೊಲ್ಲಬೇಕೆಂದಿದ್ದಾನೆ. ‘ಅಪಾಯವಿಲ್ಲ’ ಎಂದು ನಾನು ನಿನಗೆ ಹೇಳುವ ತನಕ ನೀನು ಈಜಿಪ್ಟಿನಲ್ಲೇ ಇರು” ಎಂದು ಹೇಳಿದನು.


ಅಬೀಮೆಲೆಕನು ಒಫ್ರದಲ್ಲಿದ್ದ ತನ್ನ ತಂದೆಯ ಮನೆಗೆ ಹೋದನು. ಅಬೀಮೆಲೆಕನು ತನ್ನ ಸಹೋದರರ ಕೊಲೆ ಮಾಡಿದನು. ಅಬೀಮೆಲೆಕನು ತನ್ನ ತಂದೆಯಾದ ಯೆರುಬ್ಬಾಳನ ಎಪ್ಪತ್ತು ಮಕ್ಕಳನ್ನು ಕೊಂದನು. ಅವನು ಅವರೆಲ್ಲರನ್ನು ಏಕಕಾಲದಲ್ಲಿ ಕೊಂದನು. ಆದರೆ ಯೆರುಬ್ಬಾಳನ ಕಿರಿಯ ಮಗನು ಅಡಗಿಕೊಂಡಿದ್ದು ತಪ್ಪಿಸಿಕೊಂಡನು. ಆ ಕಿರಿಯ ಮಗನ ಹೆಸರು ಯೋತಾಮ.


ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ ಎಂಬುದು ನಿನಗೆ ತಿಳಿದಿದೆ. ಈಗ ನಿನ್ನ ಆ ಕೆಟ್ಟಕಾರ್ಯಗಳಿಗಾಗಿ ಯೆಹೋವನು ನಿನ್ನನ್ನು ದಂಡಿಸುತ್ತಾನೆ.


ನಗರದ ನಾಯಕರಿಗೆ ಈ ಪತ್ರವು ಬಂದು ತಲುಪಿದಾಗ, ಅವರು ರಾಜನ ಎಪ್ಪತ್ತುಮಂದಿ ಮಕ್ಕಳನ್ನು ಕರೆದುಕೊಂಡು ಹೋಗಿ ಕೊಂದುಹಾಕಿದರು. ನಂತರ ಆ ನಾಯಕರು ರಾಜನ ಮಕ್ಕಳ ತಲೆಗಳನ್ನು ಬುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು.


ಯೇಹುವು ಸಮಾರ್ಯದಲ್ಲಿ ಇಸ್ರೇಲನ್ನು ಇಪ್ಪತ್ತೆಂಟು ವರ್ಷ ಆಳಿದನು.


ಯಾವನಾದರೂ ನಿಮ್ಮ ಜೀವಹತ್ಯೆ ಮಾಡಿದರೆ, ನಾನು ಅವನ ಜೀವವನ್ನು ತೆಗೆಯುವೆನು. ಯಾವ ಪ್ರಾಣಿಯಾದರೂ ಮನುಷ್ಯನನ್ನು ಕೊಂದರೆ, ನಾನು ಆ ಪ್ರಾಣಿಯ ಪ್ರಾಣವನ್ನು ತೆಗೆಯುತ್ತೇನೆ.


“ದೇವರು ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ನಿರ್ಮಿಸಿದನು. ಆದ್ದರಿಂದ ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.”


ನಿನ್ನ ಜೀವ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವ ಅಪಾಯದಲ್ಲಿರುವಂತಿದೆ. ಆದರೆ ನೀನು ನಿನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನಾನು ನಿನಗೆ ತಿಳಿಸುತ್ತೇನೆ.


ಯೇಹುವು ಇಸ್ರೇಲಿನ ರಾಜನಾಗಿದ್ದ ಏಳನೆಯ ವರ್ಷದಲ್ಲಿ ಯೆಹೋವಾಷನು ಆಳಲಾರಂಭಿಸಿದನು. ಯೆಹೋವಾಷನು ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದ ಚಿಬ್ಯಳು ಯೆಹೋವಾಷನ ತಾಯಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು