Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 30:27 - ಪರಿಶುದ್ದ ಬೈಬಲ್‌

27 ದಾವೀದನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಕೆಲವು ವಸ್ತುಗಳನ್ನು ಬೇತೇಲಿನವರಿಗೆ, ನೆಗೆವಿನ ರಾಮೋತಿನವರಿಗೆ, ಯತ್ತೀರಿನವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಬಹುಮಾನ ಹೊಂದಿದವರು ಯಾರೆಂದರೆ: ಬೇತೇಲಿನವರು, ದಕ್ಷಿಣ ಪ್ರಾಂತ್ಯದ ರಾಮೋತಿನವರು, ಯತ್ತೀರಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಹೀಗೆ ಬಹುಮಾನ ಪಡೆದವರು ಇವರು: ಬೇತೇಲಿನವರು, ದಕ್ಷಿಣ ಪ್ರಾಂತ್ಯದ ರಾಮೋತಿನವರು, ಯತ್ತೀರಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಬಹುಮಾನ ಹೊಂದಿದವರು ಯಾರಂದರೆ - ಬೇತೇಲಿನವರು, ದಕ್ಷಿಣಪ್ರಾಂತದ ರಾಮೋತಿನವರು, ಯತ್ತೀರಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಹೀಗೆ ದಾವೀದನು ಬೇತೇಲಿನವರು, ನೆಗೆಬನ ರಾಮೋತನವರು ಹಾಗೂ ಯತ್ತೀರಿನವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 30:27
11 ತಿಳಿವುಗಳ ಹೋಲಿಕೆ  

ಯೆಹೂದದ ಜನರಿಗೆ ಬೆಟ್ಟಪ್ರದೇಶದಲ್ಲಿಯೂ ಊರುಗಳನ್ನು ಕೊಡಲಾಗಿತ್ತು. ಆ ಊರುಗಳ ಪಟ್ಟಿ ಇಂತಿದೆ: ಶಾಮೀರ್, ಯತ್ತೀರ್, ಸೋಕೋ,


ಬಾಲತ್‌ಬೇರನ (ನೆಗೇವದಲ್ಲಿದ್ದ ರಾಮ)ವರೆಗೆ ಹಬ್ಬಿದ ಎಲ್ಲ ಪಟ್ಟಣಗಳ ಸುತ್ತಲಿನ ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. ಇದೇ ಸಿಮೆಯೋನ್ ಕುಲದವರಿಗೆ ದೊರೆತ ಭಾಗವಾಗಿತ್ತು. ಪ್ರತಿಯೊಂದು ಗೋತ್ರದವರು ತಮ್ಮ ಭೂಮಿಯನ್ನು ಪಡೆದುಕೊಂಡರು.


ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು.


ರಾಜನಾದ ಯಾರೊಬ್ಬಾಮನು ಒಂದು ಬಂಗಾರದ ಕರುವನ್ನು ಬೇತೇಲಿನಲ್ಲಿರಿಸಿದನು; ಮತ್ತೊಂದು ಬಂಗಾರದ ಕರುವನ್ನು ದಾನ್ ನಗರದಲ್ಲಿರಿಸಿದನು.


ಲೂಜ್ ಎಂದು ಕರೆಯುವ ಬೇತೇಲಿನಿಂದ ಅಟಾರೋತಿನಲ್ಲಿ ಅರ್ಕೀಯರ ಸೀಮೆಗೆ ಹೋಗುತ್ತದೆ.


ಜೆರಿಕೊವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಯೆಹೋಶುವನು ಕೆಲವು ಜನರನ್ನು “ಆಯಿ” ಎಂಬ ಪಟ್ಟಣಕ್ಕೆ ಕಳುಹಿಸಿದನು. “ಆಯಿ” ಬೇತಾವೆನಿನ ಸಮೀಪಕ್ಕೂ ಬೇತೇಲಿನ ಪೂರ್ವಕ್ಕೂ ಇತ್ತು. ಯೆಹೋಶುವನು “‘ಆಯಿ’ಗೆ ಹೋಗಿರಿ ಮತ್ತು ಆ ಪ್ರಾಂತ್ಯದ ದುರ್ಬಲತೆಗಳನ್ನು ಕಂಡುಹಿಡಿಯಿರಿ” ಎಂದು ಹೇಳಿದನು. ಆಗ ಅವರು ಆ ಪ್ರದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ಹೋದರು.


ಆಮೇಲೆ ಅಬ್ರಾಮನು ಆ ಸ್ಥಳದಿಂದ ಹೊರಟು ಬೇತೇಲಿಗೆ ಪೂರ್ವದಲ್ಲಿರುವ ಗುಡ್ಡಗಳ ಬಳಿಗೆ ಪ್ರಯಾಣ ಮಾಡಿದನು. ಅಲ್ಲಿ ಅಬ್ರಾಮನು ತನ್ನ ಗುಡಾರಗಳನ್ನು ಹಾಕಿದನು. ಪಶ್ಚಿಮಕ್ಕೆ ಬೇತೇಲ್ ಪಟ್ಟಣವಿತ್ತು, ಪೂರ್ವಕ್ಕೆ ಆಯಿ ಪಟ್ಟಣವಿತ್ತು. ಆ ಸ್ಥಳದಲ್ಲಿ ಅವನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಕೆಯನ್ನು ಕಟ್ಟಿ ಅಲ್ಲಿ ಅವನು ಯೆಹೋವನನ್ನು ಆರಾಧಿಸಿದನು.


ಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು.


ಯೋಸೇಫನ ಕುಟುಂಬದವರು ಈ ಸ್ವಾಸ್ತ್ಯವನ್ನು ಪಡೆದುಕೊಂಡರು. ಅವರ ಸ್ವಾಸ್ತ್ಯವು ಜೋರ್ಡನ್ ನದಿಯಿಂದ (ಜೆರಿಕೊ ಹತ್ತಿರ) ಆರಂಭವಾಗಿ ಜೆರಿಕೊವಿನ ಹಳ್ಳಗಳ ಉದ್ದಕ್ಕೂ ಮುಂದುವರೆದಿದೆ. (ಇದು ಜೆರಿಕೊವಿನ ಪೂರ್ವದಲ್ಲಿದೆ.) ಆ ಸೀಮೆಯು ಜೆರಿಕೊವಿನಿಂದ ಬೇತೇಲಿನ ಬೆಟ್ಟಪ್ರದೇಶಕ್ಕೆ ಮುಂದುವರೆಯುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು