1 ಸಮುಯೇಲ 30:16 - ಪರಿಶುದ್ದ ಬೈಬಲ್16 ಈಜಿಪ್ಟಿನವನು ದಾವೀದನನ್ನು ಅಮಾಲೇಕ್ಯರ ಬಳಿಗೆ ಕರೆದುಕೊಂಡು ಹೋದನು. ಅವರು ತಿನ್ನುತ್ತಾ ಕುಡಿಯುತ್ತಾ ಸುತ್ತುವರಿದು ನೆಲದ ಮೇಲೆ ಬಿದ್ದಿದ್ದರು. ಫಿಲಿಷ್ಟಿಯರ ಮತ್ತು ಯೆಹೂದ್ಯರ ದೇಶದಿಂದ ಸೂರೆಮಾಡಿದ ವಸ್ತುಗಳಿಂದ ಸಂಭ್ರಮವನ್ನು ಆಚರಿಸುತ್ತಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಮತ್ತು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿಮಿತ್ತವಾಗಿ ಸಂತೋಷಿಸಿ, ಉಂಡು ಕುಡಿದು, ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಅವರು ಅಲ್ಲಿಗೆ ಹೋದಾಗ ಆ ದಾಳಿಕಾರರು ತಮಗೆ ಫಿಲಿಷ್ಟಿಯ ಹಾಗು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ್ದ ದೊಡ್ಡಕೊಳ್ಳೆಯ ನಿಮಿತ್ತ ಸಂತೋಷಿಸಿ, ತಿಂದು, ಕುಡಿದು, ಕುಣಿದಾಡುತ್ತಾ ಅಲ್ಲಿನ ಬಯಲಿನಲ್ಲಿ ವ್ಯಾಪಿಸಿಕೊಂಡಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಯೆಹೂದ ಪ್ರಾಂತಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿವಿುತ್ತವಾಗಿ ಸಂತೋಷಿಸಿ ಉಂಡು ಕುಡಿದು ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಇವನು ದಾವೀದನನ್ನು ಕರೆದುಕೊಂಡು ಅಲ್ಲಿಗೆ ಹೋದಾಗ, ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶದಲ್ಲಿಯೂ, ಯೆಹೂದ ದೇಶದಲ್ಲಿಯೂ ವ್ಯಾಪಿಸಿಕೊಂಡು, ಸಮಸ್ತ ಕೊಳ್ಳೆ ತೆಗೆದುಕೊಂಡು ಬಂದುದರಿಂದ, ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು. ಅಧ್ಯಾಯವನ್ನು ನೋಡಿ |
ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.